ಬಿಡಿ ಕಾಗದ
೧. ಹೇ ಜೀವ ಏತಕ್ಕಾಗಿ ಆತನನ್ನೇ ಅರಸಿರುವೆ? ಚಂದ್ರನ ತುಣುಕಿಗೆಂದು ಹುಚ್ಚು ಕುದುರೆಯೊಂದನ್ನು ನೀನೇಕೆ ಏರಿರುವೆ? ಪ್ರಾಯಶಃ ಮಾದಕ ಗಾಳಿಯಂತೆ ಮಾಯಾಂಗನೆ ನೀನು ಇನ್ನೂ ಹೇಳಲೆಂದರೆ ಭಾವನೆಗಳ ಹೆಪ್ಪು ಹಾಕಿದ ಬಂಡೆ ನೀನು. ದಣಿವೆಂಬುದು ನಿನಗರಿಯದೆಂದು ಬಿಂಬಿಸುವೆಯಾ? ಅದೆಷ್ಟೆಂದು ಬಚ್ಚಿಟ್ಟು ಕೂರುವೆ?ಇಲ್ಲಿ ಬಂದು ಹಗುರಾಗಬಾರದೇ? ಬೇರೆಲ್ಲೂ ಶರಣಾಗಬಾರದೆ? ೨.ಆರಾಧಿಸುವ ಶೈಲಿ ಬೇರೆಯದಾದರೆ ಬಹುಶಃ ನನ್ನೀ ಬಯಕೆಯ ಆಲಾಪ ಅವನ ದಡಕ್ಕೆ ಅಪ್ಪಳಿಸಬಲ್ಲದು! ಆದರೆ,ಆತ ದಿನ ನಿತ್ಯ ಅಲ್ಲೇ ಬಂದು ಹಾಜರಿಯನ್ನೀಯುವನೆ? ಪ್ರೀತಿಯ ಧಾತುವನ್ನು ಸಿಂಗರಿಸಿ ಕಳಿಸುವೆ ಈಗ ಸ್ವಾರ್ಥಕ್ಕೆಂದು ಹಠಮಾರಿಯಾಗಿಹೆ,ಒಂದಾದರೂ ಪ್ರತಿ ಉತ್ತರ ಬರಬಾರದೇ? ೩.ಅತಿಯಾದ ಒಲವು ಎಷ್ಟು?ಅದು ಅಪರಿಮಿತವೋ, ಅಗಣಿತವೋ, ಅನಂತವೋ? ಅದಕ್ಕೂ ಮೀರಿ,ಊಹೂ ಗೊತ್ತಿಲ್ಲ... ಗೊತ್ತಾದರೂ,ಸಂಖ್ಯೆಯಲ್ಲಿ ಸೋಲುವೆ! ಪ್ರೇಮದ ದಾರಿಯಲ್ಲಿ ಬಳಲಿ ಇಲ್ಲೂ ಸೋಲಲಾರೆ! ಬದಲಿ,ಆತನಿಗೆ(ಆತನ ಪ್ರೀತಿಗೆ) ಸೋತು ಇಲ್ಲಿ ಗೆಲ್ಲಬೇಕೆಂದಿರುವೆ!! ನಾನಿನ್ನು ಸೋಲಿನ ಮನೆಯ ಮೆಟ್ಟಿಲನ್ನು ತುಳಿಯಲಾರೆ! ಅಸ್ತಿತ್ವವಿಲ್ಲದ,ಅಸ್ತಿತ್ವ ಕಳೆದುಕೊಂಡ ಬಾವಿಯಲ್ಲಿ ಬಿದ್ದ್ದ ಚಂದ್ರಮ ನಾನಾಗಲಾರೆ. ೪.ಪ್ರೀತಿ ಒಸರಿ ಮುಗಿಯಿತು,ಮಾತನಾಡಲು ಬಹಳಷ್ಟಿದೆ ಅಥವಾ ಮಾತನಾಡಲು ಏನೂ ಉಳಿದಿಲ್ಲ. ಬಿದಿಕಾಗದಗಳ ಚೂರನ್ನು ಆಯ್ದುಕೊಂಡಿಹೆ ಟೊಳ್ಳು ಹೃದಯದ ಮೇಲೆ ಅವುಗಳ ತೇಪೆ ಹಾಕಿಹೆ ಹಾನಿಯಾಗಲಿರದೆಂದು! ಮುಗಿದಿದೆಯಲ್...