Posts

Showing posts from July, 2024

ಮಬ್ಬು

Image
              ಅದೀಗ ಮಬ್ಬು. ಬಿಸಿಯುಸಿರ ಮಾರುತಕ್ಕೆ ನೆನಪೆಲ್ಲ ಅಸ್ಪಷ್ಟ. ನನ್ನ ಹಾಗೂ ಸ್ತಿಮಿತದ ನಡುವೆ ಗೋಡೆಯ ದಿಗ್ಬಂಧನವನ್ನು ಆತನ ಬಾಹುಬಂಧನ ರೂಪಿಸಿತ್ತು.ಅನುಭವಿಸಿಯೇ ತೀರಬೇಕು ಎಂಬ ಅತೀವ ಹಪಾಹಪಿ. ಹೋಗಿದ್ದೆ ನಾನು, ಆತನುಲಿದ ಮಂತ್ರಕ್ಕೆ! ಮೋಡಿಗೊಳಗಾದ ಮಳ್ಳಿಯಂತೆ!              ಅಷ್ಟಕ್ಕೂ ಭಾವಗಳ ಅನುವಾದಕ್ಕೆ ಬಿಗಿದಪ್ಪುವಿಕೆ ಅಗತ್ಯವೇ? ಮನಸ ಬಯಕೆ ನನಸಾಯಿತೆಂಬ ಮೋಹರೆ ಅದು? ಸಾಲಿನಲ್ಲಿ ಬಂತು,ಆವರಿಸಿತು.. ಓಡುತ್ತಿತ್ತು..ನನ್ನನ್ನೂ ಸೇರಿ.ಕೊನೆಯೇ ಇಲ್ಲದ ಸುಖವೆಂದು ಅಭಿಪ್ರಾಯಿಸಿತು.           ಕರಗುತ್ತಿದ್ದೆ ಬೆಳಗಿನ ಕಿರಣಗಳಿಗೆ ಮೈಯೊಡ್ಡಿ ಬೆತ್ತಲಾದ ಇಬ್ಬನಿಗಳಂತೆ. ಮರೆತೆ ಕಾಮನಬಿಲ್ಲು ತಾತ್ಕಾಲಿಕವೆಂಬುದ. ಅನುಭವಿಸಬೇಕು ಎಂದು ಕೊಂಡಿದ್ದೆ , ಅನುಭವಿಸಿದೆ , ಈಗಲೂ ಅನುಭವಿಸುತ್ತಲೇ ಇರುವೆ! ಏನನ್ನು (?)               ಆತ ಮರೆಯುವುದರ ಮುಖಾಮುಖಿ ಮಾಡಿಸಲ್ಲೇ ಇಲ್ಲ ಕಡೆಗೂ. ಇದ ನಿನ್ನೆದೆಯ ಹೃದಯದಲ್ಲಿ ಕೆತ್ತಿಕೊ ಎಂದರಹಲೂ ಇಲ್ಲ.ನೆನಪಿನ ಅವಶೇಷಗಳಲ್ಲಿ ಸಮಾಧಿಯಾದ ಕತೆಗಳಲ್ಲಿ ಇದೂ ಒಂದಾಗಬಾರದೇ? ಉತ್ತರಕ್ಕಿಂತ ಪ್ರಶ್ನೆ ಸುಲಭ.ಪ್ರಶ್ನೆಗಳು ಮಿಂಚಾಗಿ ಏಕೆ ತಾಕುತ್ತವೆ? ನನ್ನನ್ನೇಕೆ ಮೂಕವಾಗಿಸುತ್ತಿವೆ? ಮಬ್ಬಾದ ಘಟನೆಗಳ  ಸ್ಪ...