Posts

Showing posts from April, 2022

ಸ್ತಬ್ಧ 💜

Image
                   ಅಂದು ಅಲ್ಲಿ ನೀರವ ಮೌನದ ಏಕಾದಿ ಪತ್ಯಕ್ಕೆ ಕೊಂಚ ಅಡ್ಡಿ ಮಾಡುತ್ತಿದ್ದದ್ದು ಬೇರೆಡೆಗೆ ನೆಟ್ಟ ನೋಟಗಳು.. ಒಂದೆರಡು ಮಾತುಗಳು.. ಆದರೆ ಉದ್ದೇಶವೇನೋ ಕಣ್ಣೋಟಗಳಿಂದ ಕೈ ತಪ್ಪಿಸಿಕೊಳ್ಳುವುದೇ ಆಗಿತ್ತು..ಬಹುಶಃ ಇದ್ದರೇ ಪ್ರೀತಿಯೇ ಇರಬಹುದಾದ ಅಬಲ ನೂಲಿನಿಂದ ಹೃದಯಕ್ಕೆ ಬೇಲಿ ಹಾಕಿ ಕೊಂಡು ಇಬ್ಬರೂ "ಸ್ತಬ್ಧ"ರಾಗಿ ಕೂತಿದ್ದರು..                 ಅಂದು ಸೇರಿದ್ದು ಜಗಕ್ಕೆ ನಿರೀಕ್ಷಿತ ವಾಗಿದ್ದರೂ ಅವರಿಗದು ಅನಿರೀಕ್ಷಿತವಾಗಿತ್ತು..ಅತಿಯಾದ ಪ್ರೀತಿಯ ಕೊಡಲಿಯ ಏಟಿಗೆ ಬಲಿಯಾದ ಹೃದಯ ಹೊತ್ತ ಜೀವ ಒಂದು ಕಡೆಯಾದರೆ ,ಪ್ರೀತಿಯ ಅವಶೇಷಗಳ ಇನ್ನೂ ಪೊರೆಯುತ್ತ ಹೃದಯದ ಜೋಪಡಿಯಲ್ಲಿ ಭಧ್ರವಾ ಗಿಸಿಟ್ಟುಕೊಂಡ ಜೀವ ಇನ್ನೊಂದೆಡೆ!                   ಅವರ ಕನಸುಗಳಲ್ಲಿ ಕಾಮನಬಿಲ್ಲ ಬಿಡಿಸಿದ, ಏಕಾಂತದಲ್ಲಿ ನೆವವೊಡ್ಡಿ ಬರುವ,ಕವಿತೆಗಳಲ್ಲಿ ವರ್ಣನೆಗಳ ನೈವೇದ್ಯ ಪಡೆಯುವ, ಮಿಂಚಿನಂತೆ ಝಳಪಿಸುವ ನಗುವಿಗೆ ಕಾರಣರಾದ, ಹತಾಶೆಯ ಕಣ್ ಹನಿಗಳ ಅರ್ಪಣೆ ಪಡೆದ ಇನ್ನೊಬ್ಬರು ಊಹೆಗೂ ನಿಲುಕದ ಸನಿಹದಲ್ಲಿ ವರ್ತಮಾನದ ಬೇಗೆಯ ಅನುಭವಿಸುತ್ತಿದ್ದರೂ ಕಾಣದ ಸಂಕೋಲೆಗಳಲ್ಲಿ ಬಂಧಿಯಾಗಿದ್ದರು!                 ...