Posts

Showing posts from October, 2022

ಆಪೋಷಣಕ್ಕೊಂದು ಆಹ್ವಾನವಿತ್ತರೆ!

Image
                         ಈ ಲೇಖನ ಭಾವನೆಗಳ ಸಂಕಲನ. ಕಷ್ಟವೆನಿಸಿದರೂ ಅಪ್ಪಿಕೊಂಡಿರುವೆ. ತುಡಿತಗಳಿಗೆ ಸ್ಪಂದನವಾದರೂ ಆಗಲೆಂದು.ಅದೇ ಲಗ್ನದಲ್ಲಿ  ನಿಸ್ತೇಜ ಹೃದಯಕ್ಕೆ ತುಮುಲಗಳ ಸೈನ್ಯದ ಆಗಮನ ಬೇರೆ.ಯೋಚನಾಶಕ್ತಿಯ ಅಪೋಷಣವೆಂದರೆ ಇದೇ ತಾನೇ?                     ದಕ್ಕುವುದಕ್ಕಿಂತ ಮುಂಚೆಯೇ ಹೊಳೆದು ಹೊಳೆದು ಕಣ್ಣುಕುಕ್ಕಿ ದೃಷ್ಟಿಯನ್ನೂ,ಬುದ್ಧಿಯನ್ನು ಆಪೋಷಣದ ತೆಕ್ಕೆಗೆ ಬರಮಾಡುವ ಆಸೆ.ದಕ್ಕಿದ ನಂತರ ಏಕಾತಾನತೆ ಸಂಪ್ರಾಂಪ್ತಿಯಾಗಿ ತುಕ್ಕು ಹಿಡಿದು ಜಂಘಾಬಲವಡಗಿಸಿ ಎಲ್ಲವ ಆಪೋಷಣದ ತೆಕ್ಕೆಗೆ ದೂಡುವ ದ್ವಂದ್ವ ಮನಸ್ಸು.                       ಇಷ್ಟೆಲ್ಲ ಅರ್ಥ ಆಗೋ ವಿದ್ವತ್ತು ಇರಬಾರದು. ಎಲ್ಲೆಲ್ಲೋ ಒಯ್ದು ಬಿಡುತ್ತೆ,ಹಾಗೆ ತೂರಿಕೊಂಡು ಹೋದ ನಕಲಿ ಜಗತ್ತಿನಲ್ಲಿ ಅಸಲಿಯ ಮೂಲವಾದರೂ ಎಲ್ಲಿ? ಸುಳ್ಳನ್ನು ಕೂಡ ಸೃಷ್ಟಿಸಿದ ದಾಖಲೆಗಳು ಎಷ್ಟಿಲ್ಲ?ಅನುಭವಕ್ಕೂ ನಿಲುಕದೇ ಇರೋದು ಅನಂತ.ಆದರೆ ಅನುಭವಿಸಿಯೇ ಬಿಡಬೇಕು ಅನ್ನೋ ತುಮುಲ. ನಿರ್ವಾತದಲ್ಲೂ ನೆನಪು ನೂರೆಂಟು.ಕೆಲವೊಂದು ನಿನ್ನದು,ಆದರೂ ನೀನಿರದ ನನ್ನವು.ನೀನಿದ್ದ ನಿನ್ನೆಗಳು ಅಥವಾ ನೀನು ಇರದ ನಾಳೆಗಳು..ಎಲ್ಲವೂ ಇಂದೇಕೋ ಅಪರಿಚಿತವೆನ್ನಿಸುತ್ತ...