ಇಷ್ಟಪಡೋದಾ?? ಇಷ್ಟವಾಗೋದಾ?
ಒಂದು ವಾಸ್ತವ,ಇನ್ನೊಂದು ಕಲ್ಪನೆ ಒಂದು ತಾಮಸ,ಇನ್ನೊಂದು ಸಾತ್ವಿಕ ಒಂದು ಚಲ,ಇನ್ನೊಂದು ಛಾಯೆ ಒಂದು ಗುರಿಯಾದರೆ, ಇನ್ನೊಂದು ಗಟ್ಟಿ ಗುರುತು ಅದು ಜೀವ,ಇದು ಭಾವ ಒಂದು ಭ್ರಮೆ,ಇನ್ನೊಂದು ಬದುಕು ಒಂದು ಉಷೆ,ಇನ್ನೊಂದು ತುಷಾರ ಒಂದು ಚೆಲುವು,ಇನ್ನೊಂದು ಬಿಂಬ ಅದು ಹಠ,ಇದು ದಾನ ಒಂದು ಚಂಚಲ,ಇನ್ನೊಂದು ಅಚಲ ಒಂದು ಅರ್ಥವಾಗದ ಕಿರು ಕವಿತೆ,ಇನ್ನೊಂದು ಎಲ್ಲವ ಅರ್ಥವಾಗಿಸುವ ನೀಳ್ಗತೆ ಒಂದು ನಿನ್ನೆಯಲ್ಲಿ ನಾಳೆಯ ಕಂಡರೆ,ಇನ್ನೊಂದು ನಾಳೆಯಲ್ಲೂ ನಿನ್ನೆಯ ಕಾಣುವುದು!! ಆ ಮುಖ ಬೇಡಿದ್ದು ಮನ್ನಣೆ,ಈ ಮುಖ ಅರಿಯದು ಮಾನ್ಯತೆ!! ಎಲ್ಲವೂ ಬೇಕಿದ್ದೂ, ದಕ್ಕಿದ್ದೂ ದಕ್ಕದಾಯಿತೆ?? ಹೇಳಬೇಕೆಂದರೆ ಮನ್ನಣೆ ಸುಲಭದ ಎಟುಕು. ಇತ್ತ ಮಾನ್ಯತೆಗಾಗಿ ಕಾದು ವಸಂತಗಳು ಹಳೆಯ ಹಳದಿ ಪುಟ ಸೇರಿ ಕುಳಿತವು... ಹಣ್ಣಾದವು..ಒಳಿತು ಎನಿಸಲಾರದಷ್ಟು ಸಿಹಿಯಾದವು...ಮನ್ನಣೆ ಸಿಕ್ಕಿದ ಪೂರ್ವಾರ್ಧ ಉತ್ತರಾರ್ಧದ ಜಂಘಾಬಲವನ್ನೇ ಅಡಗಿಸಿತು ...ಪೂರ್ವಾರ್ಧ ಸೂರ್ಯನಡಿಯಲ್ಲಿ ಪ್ರಜ್ವಲಿಸಿ ಧಗೆ ಸೂಸಿದರೆ,ಉತ್ತರಾರ್ಧ ಕೃತ್ತಿಕೆಯ ಕತ್ತಲಲ್ಲಿ ಕಳೆದೇಹೋಯಿತು.. ಆದಿಯಿರದ ಕಥೆಗಳಿಲ್ಲ...ಆದರೆ ಅಂತ್ಯವಿಲ್ಲದ್ದು??ಅಗಣಿತ!! ಈ ಶೃಂಗಗಳು ಮನಸ್ಸಿನ ಮೂಖೆಯಲ್ಲಿ ಸ್ಥಾನಪಲ್ಲಟ ಬಯಸಿಯೇ ಇರುತ್ತವೆ..ಆದರೆ ಮಧ್ಯವರ್ತಿ ಆ ಸೂತ್ರಧಾರ ಬಹುಜಾಣ..ಸೂತ್ರ ಹರಿಯದಂತೆ,ತಾಳ ತಪ್ಪದಂತೆ ಮೇಳ ನೆಡೆಸುವನಂತೆ..ಆದರೆ ಸೂತ್ರ ಗಟ್ಟಿಯಲ್ಲ..ಅಕಸ್ಮಾತ್ ಗಟ್ಟಿಯಿದ್ದಿದ್ದರೆ ಸೂತ್ರಧಾರನಿ...