ಬತ್ತದ ನಂಜು💔
ಕನಸಿನ ಸೀಮೆಯ ದಿಬ್ಬಕ್ಕೆ ಕರೆದೊಯ್ಯುತ್ತದೆ
ನಿನ್ನ ಜೊತೆ ವಿನಿಮಯವಾದ ಶೃುತಿಯೊಂದು
ಮಹಾಪೂರದಂತೆ ಹರಿದು ಬಂದು ನೀ ಮನಸ್ಸ ಹಿಡಿದು ಹಿಪ್ಪೆ ಮಾಡುತ್ತಿರೆ
ಬಯಸದೆಯೂ ನಿನ್ನ ಅಸ್ತಿತ್ವ ಬೆಟ್ಟು ಮಾಡುತ್ತಿದೆ ನನ್ನಯತನಗಳಿಗೆ!!
ನೆನಪಿನ ಕಟು ಶಿಕ್ಷೆಗೆಸಂದ ರಿಯಾಯಿತಿಗೆ ನೀನಿಂದು ತಡೆ ಒಡ್ಡುತ್ತಿರುವೆ
ಕೇಳಬಯಸದ ಹಳೆಯಹಿತಗಳ ಎನ್ನಯ ಕಿವಿಗಳೆಡೆಗೆ ತೂರಿ
ರೇತಿಯದ್ದ ಸುಳಿಗಾಳಿಯನ್ನೀಯುತ್ತೀವೆ ನನ್ನೊಳಗಿನ ಪ್ರಕೃತಿಗೆ
ಹೇಳ್ವೆನು ಕೇಳಿಲ್ಲಿ,ಇರುವುದು ಕಲ್ಮಶವೇ ಹೊರತು ಕುರುಡು ಪ್ರೇಮವಲ್ಲ!!
ಬೇಕೆಂಬುವಿಕೆಯ ಹರಿವ ನೀರ ದಿಕ್ಕ ಬದಲಿಸಬೇಡ
ನಿನ್ನನ್ನೂ ಸೇರಿ ಕೊಚ್ಚಿ ತೊಯ್ಯುವುದು ಅದು
ಇದೊಂದು ತಳವಡೆದ ದೋಣಿ
ಮಗುಚಿ ಮೊರೆಯಬೇಡ ಹಳೆಯ ಸಾವುಗಳ!!
ಇದೇ ಗೆಳೆಯ,ಅಂತ್ಯ ಕಂಡ ಕಥೆಯ ಅನಂತವ ಹುಡುಕಿ ಹೊರಡುವುದು..
Comments
Post a Comment