ಅರಂಧತಿಯ ಮೌನ
ಅಲ್ಲಿ ಬೆಳಕು ಸತ್ತಿತ್ತು.ಬಾಗಿಲುಗಳ ಹಿಂದಿನ ಕಿರಣಗಳ ಕತ್ತಲೆಯ ಹಸಿವು ಬಗೆದು ತಿಂದು ಮುಗಿಸಿತ್ತು.ಆದರೂ ತೀರದ ಹಸಿವು. ಅರುಂಧತಿಯ ಮೌನದ ಹಸಿವಿನಂತೆ.ಎದೆಯ ಆಳಕ್ಕೆ ಇಳಿದಷ್ಟೂ. ಟಿಸಿಲಾಗಿ ಒಡೆದ ಆತನ ನೆನಪು.ದಿನವೂ ಆಳವನ್ನು ಅರಿದು ಹಸಿವು ಶಮನವಾಗದಿರುವುದು ಪದ್ಧತಿ. ಕತ್ತಲು ಕವಿದ ಬಾಗಿಲ ದಿಟ್ಟಿಸಿ ನೋಡಿದವಳ ಕಣ್ಣ್ಣೀರ ಹನಿ ತಾಳ್ಮೆ ಕಳೆದುಕೊಂಡು ಗಲ್ಲಗಳ ತೊಯ್ದಿತ್ತು.ಆತ ನೆನಪಿನಂಗಳದ ಅತ್ತಕಡೆ ನಿಂತು ನಕ್ಕ ಕ್ಷಣವೇ ಆಕೆಯ ಕಣ್ಣೀರಿನ ಜೀವಜಲ ಬರುವ ವಿರಹದ ಕಡು ಬೇಸಿಗೆಗೆ ಆವಿಯಾಗಿ ಅರ್ಪಣೆ ನೀಡಿತ್ತು. ಅಂತಹ ಕತ್ತಲ ಸೀಳಿಯೇ ಆತ ಕಾಲಿಟ್ಟಿದ್ದು.. ಅವಳೆದೆಯ ಅಂಗಳಕ್ಕೆ..ಅದೇ ರಂಗಮಂದಿರದ ಪಾತ್ರವಾಗಿ.ಅವಳ ಅಚ್ಚರಿ ತುಂಬಿದ ಅಗಲ ಕಣ್ಣುಗಳ ನಾಚಿಕೆಯ ದೆಸೆಯಿಂದ ಕೆಳಗೆ ನೋಡುವಂತೆ ಮಾಡಿದ್ದು ಅವನ ಕ್ಷುದ್ರ ತೇಜಸ್ಸು..ಮುಂದೊಂದು ದಿನ ಬದುಕಿನ ಎಲ್ಲ ಬಣ್ಣಗಳೂ ಕರಡಿ ಮಾಸಿ ಹೋಗುವಂತೆ ಮಾಡಿದ ಯಾರೂ ಅರಿಯದ ಕ್ಷುದ್ರ ತೇಜಸ್ಸು..ಅನುದಿನವೂ ಬರಿಯ ಬಾಳನು ದಿಟ್ಟಿಸಿ ನೋಡುವ ಕ್ರಮಕ್ಕೆ ಆದಿಯನ್ನ ಬರೆದವನು.ಪಾತ್ರ ಪಾತ್ರವಾಗಿ ಪತ್ರ ಪ್ರೇಮವಾಗಿ ಪ್ರೇಮ ಪಾಶವಾಗಿ ಪಾಶ ಪ್ರಾಣವಾಗಿ ಪ್ರಾಣವೇ ತನ್ನ ಆಟ ಮುಗಿಸಿ ಮುಂದಿನೂರಿಗೆ ಹೋಗುವ ಸೊಲ್ಲೆತ್ತಿದರೆ?ಅರುಂ...