ನನ್ನ ಮನದಾಳ❤️

1.ಏನೆಂದು ಅರಿಯುವ ಮುನ್ನವೇ ಮುಗಿಯಿತೆಂದರೆ ಅದು ಪ್ರೇಮವೇ ಸರಿ!

2.ಮತ್ತದೇ ಕಥೆ! ಆಸೆಗಳಿಗೆ ತೆರಿಗೆಯಿದ್ದಿದರೆ ಬಹುಶಃ ಬದುಕಿನ ದಾರಿಯಲ್ಲಿ ಭಿಕಾರಿಯಾಗುತ್ತಿದ್ದೆ! ಆದರೇನು ಈಗಲೂ ಭಾವಲೋಕದ ಬೀದಿಯಲ್ಲಿ ನಿನ್ನ ಕಾಣಬಯಸುವ ಭಿಕಾರಿಯೆ!

3.ಆರಿತು ಉಂಟಾದರಷ್ಟೇ ಪ್ರೇಮವೇ? ಅರಿಯದೇ ಅರಿವಾಗುವ ಪ್ರೇಮಕ್ಕೆ ಮೋಹದ ನಾಮಕರಣ!

4.ಪ್ರೀತಿ ~ಇಬ್ಬರಿಗೂ ಗೊತ್ತಿದ್ದು ಗೊತ್ತಿರದ ಸತ್ಯ!

5..ನಾವಿಕನೊಬ್ಬ ನದಿಗೆ ಪ್ರಶ್ನಿಸಿದನಂತೆ.. ಒಂದೇ ಗುರಿಯನ್ನು ಮುಟ್ಟಲು ಹರಿಯುವ ನಿನ್ನ ಆ ದೃಢ ಮನಸ್ಸು ಕೇವಲ ಒಂದು ತೋರಿಕೆಯಾ ಎಂದು!           ಆಗ ನದಿಯು ನಾವಿಕನನ್ನು ದಿಟ್ಟಿಸಿ ನಕ್ಕು "ಏಕ್ ತರ್ಫಾ ಪ್ಯಾರ್ ಮಾಡಿ ದಿನ ದಿನವೂ ಕೊರಗುವ ದುನಿಯಾ ನನಗೆ ಕೇಳುವ ಪ್ರಶ್ನೆಯಲ್ಲ ಇದು" ಎಂದಾಗ ನಾವಿಕ ಮೂಕನಾದ!

6.ನಿನ್ನ ನೆನಪನ್ನು ಹೊತ್ತ ತನುವು ನಿನಗಾಗಿ ಕೂತು ಕಾಯುತ್ತಿದ್ದರೆ, ನಿನ್ನನ್ನು ಹುಡುಕುತ್ತಿದ್ದ ಹೃದಯವು ಜಿಂಕೆಯಂತೆ ಓಡುತಿತ್ತು! ಚಲನೆಯ ನಿಯಮಗಳೇ ತಪ್ಪೇ? ಅಥವಾ ನೀನೆಂಬುದೇ ಕಲ್ಪನೆಯೇ?

7.ಹೋಗಬಯಸಿದರೂ ಹೋಗಲಾಗದ ಹಳೆಯ ದಾರಿಗಳು ಬಹುಶಃ ನಿಶೆಯ ಪಾಷವೆಂದರೆ ಇದೇ ಇರಬೇಕು!

8.ಬರೆದಷ್ಟು ಬಯಸುವ ಮನ ಮರೆತಷ್ಟು ಮರುಕಳಿಸುವ ನೆನಪು ಕೂತಷ್ಟು ಕೈ ಬೀಸಿ ಕರೆಯುವ ಕನಸು ಕೇವಲ ಒಂದು ಮರೀಚಿಕೆಯಾಯಿತೆ? ಉತ್ತರವ ಅವನೂ ಬಲ್ಲ ಅವಳೂ ಬಲ್ಲಳು!

9.ನಾಚಿಕೆಯ ಮುಳ್ಳೇ ನಾಚದಿರು! ನಿನ್ನನ್ನೂ ಮೀರಿಸುವವರು ಇರುವರೆಂದು!              (ನಾಚಿಕೆಯಲ್ಲೋ ಅಥವಾ ನಾಚಿಕೆ ಎಂಬ ಮುಳ್ಳಲ್ಲೋ?)

10.ಮನಸ್ಸು ಸೋಮವಾರದ ಸಂತೆಯಂತೆ! ಸದಾ ಗಿಜಿಗುಡುವ ಸದ್ದು! ಆದರೂ ಹೃದಯ ಬಯಸಿದ್ದು ಮೂಲೆ ಮನೆಯ ಮಾಧವನ ಹೆಜ್ಜೆಗಳ!

11.ಶರವೇಗದಲ್ಲಿ ನೀನೇ ಗುರಿಯೆಂದು ಮನಸ್ಸು ಆದರೆ ಗೌರಿಯು ಹತ್ತಿರವೆಂದು ಭಾಸವಾದಾಗ ದೂರವಾಗುತಿತ್ತು.. ಇದರಲ್ಲಿ ಗುರಿತಪ್ಪಿದ ಮನವು ಕ್ಷಣ ಕ್ಷಣಕ್ಕೂ ಮರಗುತಿತ್ತು!

12.ನೀನೋ ನನ್ನ ಬಂಗಾರದ ಗೊಂಬೆ ಜೀವವಿಲ್ಲ ನನ್ನ ಭಾವನೆಗಳಂತೆ!

13.ಜೊತೆಯಾಗಿ ನೆಡೆವೆ ನಿನ್ನ ಜೊತೆ ನಾನು ಎಂದಾಗ ಆಕೆ ಗೊಳ್ಳನೆ ನಕ್ಕಳು.. ಕಾರಣವರಿಯದ ಅವನ ಮುಖದ ಮೇಲೊಂದು ಪ್ರಶ್ನಾರ್ಥಕ ಭಾವನೆ ಹುಟ್ಟಿತು. ಆಕೆ ಅವನಿಗೆ ಹಳಿಗಳನ್ನು ಕಾಣಿಸಿ ಇವು ಜೊತೆಯಾಗಿ ಇದ್ದರೂ ಯಾವಾಗಲು ಒಂದಾಗಲ್ಲ ಎಂಬ ಅವಳ ಮಾತಿಗೆ ಆತ ಒಪ್ಪಿ ತಲೆತೂಗಿದನು! ಆತನ ಪ್ರೇಮ ಅಷ್ಟು ಗಟ್ಟಿಯೇ?

14.ಜನ್ಮಾಂತರಗಳ ಬಗ್ಗೆ ನಂಬದ ನಾಸ್ತಿಕ ಮನವು ಅವನಿಗಾಗಿ/ಆಕೆಗಾಗಿ ಮರುಜನ್ಮದಲ್ಲೂ ಕಾಯುತಿತ್ತಂತೆ.

15.ಹೇಳಲು ಬೆಟ್ಟದಷ್ಟಿರುವ ಅನಾಥ ಭಾವನೆಗಳು Midnight ನಲ್ಲಿ ಜೀವ ಪಡೆಯುವವು ಕತ್ತಲಲ್ಲಿ Ceiling ಫ್ಯಾನ್ ಅನ್ನು ದಿಟ್ಟಿಸುವ ಭರದಲ್ಲಿ ನಾಳೆ ಯೋಚ್ಚೆ ಮಾಡೋಣ ಅಂತ ಮುಗ್ಧ ಕಣ್ಣು ನಿದ್ರೆಗೆ ಜಾರಿತು.!

16.ಹಲವು ಬಾರಿ ಹೇಳಿದರೂ ನಿನ್ನ ಪೆದ್ದುಮನಕ್ಕೆ ಅರ್ಥವಾಗದ ಕವನವಿದು ನಿನಗೇನಾದರೂ ಅರ್ಥವಾದಲ್ಲಿ ಒಮ್ಮೆಯಾದರೂ ಸ್ಪಂದಿಸಿ ಬಿಡು ಸಾಕೀ ಮನಕ್ಕೆ..

17..ಗೂಡು ಬಿಟ್ಟ ಮರಿ ಹಕ್ಕಿಯಂತ ಮನಸ್ಸು! ನಿನ್ನ ಕಲ್ಪನೆಗಳಲ್ಲಿ ದಾರಿತಪ್ಪಿಹುದು! ಮುಗ್ಧ ಮರಿಹಕ್ಕಿ ತನ್ನ ಗೂಡು ಸೇರಬಲ್ಲದೇ?

18.ಬರೆಯಬೇಕೆಂದಿರುವೆ ಸುಂದರ ಕಥನವ ಆದರೂ ಲೇಖನಿಯೆತ್ತುಕೊಂಡಾಗ ಅದೇನೋ ಅಳುಕು ಕಣ್ಣಹನಿ ಜಾರುತ್ತಿದ್ದರೂ ಒಳಗಿದ್ದ ಹತಾಶ ಮನವಂತು ಬರೆದು ಬಿಡು ಎಲ್ಲವ… ಇದೇ ಆಸರೆಯೆಂದು!

19.ನಿನಗೆ ರಾತ್ರಿಯೆಂದರೆ ಇಷ್ಟವೆಂದು ಹಗಲನ್ನು ರಾತ್ರಿ ಮಾಡಿದೆ ಆದರೆ ನಾನೇ ನಿರ್ಮಿಸಿಕೊಂಡ ರಾತ್ರಿಯ ಕತ್ತಲಲ್ಲಿ ದಾರಿ ತಪ್ಪಿಹೆ! ಈಗ ನಿನ್ನ ಒಂದೇ ಕೂಗು ಸಾಕು ದಾರಿ ಮುಗಿಯಲು…

20. ಬಯಸಿದರೂ ಬಾರದ ಅತಿಥಿಯೆ ನೀನೆಂದು ಬಾರದಿರು!






Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ