ನೀನೆಂಬ ಭ್ರಮೆ!
1.ಮಾಸದ ಗಾಯವೆಂದರೆ ನಿನ್ನೀ ಪ್ರೀತಿ!
ಭಾವನೆಯೆಂಬ ಮದ್ದಿಲ್ಲದೇ ನೆನಪೆಂಬ ನಂಜಿನಿಂದ ಕೂಡಿದೆ!
ಆದರೂ ಗಾಯವಿರಲಿ ಹಸಿಯೆಂದು ಬಯಸುವ ಹುಚ್ಚು ರೋಗಿ ನಾನು!
2.ಮನದಲ್ಲಿ ಮನೆಮಾಡಿರುವ ನಿನಗೆ ಹೋಗೆನ್ನಲು ಮನಸ ಮಾಡದ ನಾನು!
ನೀನಿಲ್ಲದ ಮೇಲೆ ಮನಸಲ್ಲಿಳುಯುವುದು ಕಾಗದದ ಹೂವಂತೆ ಕೇವಲ ತೋರಿಕೆ!
3.ಮೌನ ಮಾತಾಗಲಿ ಎಂದು ಹಂಬಲಿಸುವ ಮೂಕ ವಾಗ್ಮಿ ವಿಳಾಸವಿಲ್ಲದ ಅಂಚೆಗೆ ಬರಕಾಯುತಿದ್ದಳು!
4.ಮೌನದಡಿಗೆ ಅವಶೇಷವಾಗಿದ್ದ ಭಾವನೆಗಳನ್ನು ಹುಡುಕಿ ಹೊರತೆಗೆಯುವ ಯತ್ನ ಆತನನ್ನು ಸೇರುವುದಕ್ಕಿಂತಲೂ ಕಷ್ಟವೆಂದು ಹತಾಶ ಮನಕ್ಕಿಂದು ಅರಿವಾಯಿತಲ್ಲ!
5. ಆತನ ಬರುವಿಕೆ ಕಲ್ಲು ಹೃದಯದಲ್ಲಿ ಹೂವನ್ನರಳಿಸಿತು!
ಹೂವು ಮುಡಿ ಸೇರುವ ಮುನ್ನವೇ ದಾರಿ ತಪ್ಪಿ ಮಣ್ಣು ಪಾಲಾಯಿತು!
6. ಪ್ರತಿ ಪ್ರೇಮಿಯು ಕವಿಯೇ ಅಥವಾ ಪ್ರತಿ ಕವಿಯೂ ವಿರಹಿಯೇ?
ಹೇಳಲಾಗದ ಮಾತುಗಳಿಗೆ ಕವನದ ರೂಪ ಕೊಟ್ಟು ಹೇಳ ಬಯಸುವ ಪ್ರಯತ್ನ!
7. ಸುಮ್ಮನೆ ಕುಳಿತಾಗ ಸುಳಿದು ಮರೆಯಾಗುವ ಮಾಯಾಮೃಗ ನೀನು !
8. ಪುನಹ ಪುನಹ ಓದಬಯಸುವ ಸುಂದರಕಾಂಡ ಆತ !
ಅರ್ಥ ಮಾಡಿಸಿಯೂ ಅರ್ಥವಾಗದ ಪ್ರೇಮದ ಲೇಖಕ!
ಆಸಕ್ತಿ ಕೆರಳಿಸಿ ಆಸಕ್ತಿ ಕಳೆಯುವ ಹುಳುಕ!
ಒಟ್ಟಿನಲ್ಲಿ ನನ್ನ ವಿರಹದುತ್ತರ ಆತ !
9. ಚಂದ್ರನಂತೆ ಚಂದಗಾರ ನೀನು!
ಆತನಂತೆ ನೀನು ಕೈಗೆಟುಕೆ.. ದೂರ.. ನೋಡಿದಷ್ಟು ದೂರ... ಯೋಚಿಸಿದಷ್ಟು ದೂರ ....
10. ನಿಜವಾಗಿಯೂ ನನಗಾಗಿದ್ದು ಪ್ರೀತಿಯೇ?
ಅಥವಾ ವಯೋ ಸಹಜ ಆಕರ್ಷಣೆಯೇ ?
ಇಲ್ಲವೆಂದರೆ ಒಂದು ಹೆಜ್ಜೆ ಮುಂದು ಹೋಗಿ ಹೇಳಬೇಕಂದರೆ ಅತಿಯಾದ ಹಠವೇ ?
ಆದರೂ ನಿನ್ನ ನೆನಪಿನ ಹಚ್ಚೆ ಉಳಿದಿದೆ ಮನದ ಗೋಡೆಯಲ್ಲಿ !
ಹಾಗಾದರೆ ನನಗಾಗಿರುವುದಾದರೂ ಏನು?
ಪ್ರೀತಿಯೇ? ಭ್ರಾಂತಿಯೇ?
11. ನಿನ್ನನ್ನು ಕನ್ನಡಿಯೆಂದು ಕರೆಯಲೇ?
ನಾನು ನಿನ್ನಲ್ಲಿ ಕಾಣುವುದು ಕಾಣಬಯಸುವುದು ನನ್ನ ಭಾವನೆಗಳ !
ನೀನೊ ಶೀಷ! ನಿನ್ನ ಗುಣದಂತೆ ನಕ್ಕು ಹೇಳುತ್ತಿರುವೆ!
ಎಷ್ಟದು ಸತ್ಯ ಬದಲಿಸುವ ಯತ್ನವೆಂದು !
ಆದರೂ ಬೇನೆ ಹಿಡಿದ ಕಣ್ಣು ಭಾವನೆಯ ಪೊರೆಯಲ್ಲಿ ಶಾಂತ ಮಲಗಿಹುದು!
12.ಬದುಕ ಕಾದಂಬರಿ ಬರೆಯಬೇಕಂದರೆ ಅದರ ಅಂತ್ಯ ನಿನಗರ್ಪಣೆ!
ಆದಿಯೆಲ್ಲೆಂದು ಕೇಳಿದರೆ ನಾನೂ ಅರಿಯೆ!
ಎಲ್ಲೆಂದು ಹುಡುಕಲಿ ನಿನ್ನ ಸೆಳೆತ ಶುರುವಾದ ಸಮಯವ!
13. ಪ್ರತಿಯೋರ್ವ ಪ್ರೇಮಿ ಬಯಸುವುದು ಸೂರ್ಯನಂತೆ ಅಚಲ , ಶಶಿಯಯಂತೆ ತಂಪಾದ ಪ್ರೀತಿಯ!
ಆದರೆ ನನ್ನ ಪ್ರೀತಿ ಹಗಲಿನ ನಕ್ಷತ್ರ ದಂತೆ!
ಸಮಯದ ಸಂಕೋಲೆಗಳಡಿಗೆ ಕಾಣದಾಗಿದೆ!
ಅವು ಎಂದಾದರೂ ಬೆಳಗಬಲ್ಲವೆ!
14. ತುಟಿಯಂಚಿಗೆ ಬಂದು ನೀರಮೇಲಿನ ಗುಳ್ಳೆಯಾಗುವ ನನ್ನ ಧೈರ್ಯ ಪ್ರೀತಿಸಬೇಕಾದರೆ ಹಸಿದ ಹುಲಿಯ ಶೌರ್ಯ ಪಡೆದಿತ್ತು!
ಕಾಲದ ಮರ್ಮವೋ!ಅಧೀರ ಮನವೋ!
15.ಪ್ರೀತಿಯೆಂದರೆ ಎಲ್ಲವ ದಾಟಿ ಬರುವ ಶಕ್ತಿಯೇ?
ಅಥವಾ ಎಲ್ಲವ ಹುದುಗಿಸುವ ಅಪರಿಮಿತೆಯೆ!
16. ಮನಸ್ಸು ತುಂಬಿರುವಾಗ ಬಾಯಲ್ಲಿ ಹೊರಬರದ ಏಕೈಕ ಜಿಜ್ಞಾಸೆ ಎಂದರೆ ನಿನ್ನ ಸೆಳೆತವೇ ಸರಿ!
ಹೇಳ ಲಾಗದೆ ಚಡಪಡಿಸುವ ನಿನ್ನ ಚಟುವಟಿಕೆಯೋ ಊಹು ನೋಡಲೇ ಚೆನ್ನ!
17.ಪ್ರೀತಿ ಮತ್ತೆ ಉಂಟಾಗ ಬಹುದೇ?
ಮತ್ತೆ ಮತ್ತೆ ಹುಟ್ಟುವಂತದ್ದಾದರೆ ಪ್ರೀತಿಗ್ಯಾಕೆ ಜನ ಹಾತೊರೆಯುತ್ತಿದ್ದರು?
ಆದರೂ ಮತ್ತೆ ಹುಟ್ಟು ವುದಂತದಲ್ಲ ಎಂದಾದರೆ ಎಷ್ಟು ಮನಸ್ಸುಗಳು ಬಂಜರವಾಗುತ್ತಿದ್ದವೋ?
18. ಎಲ್ಲರಿಗೂ ಪ್ರಥಮ ಪ್ರೇಮ ಶಶಿ ಸ್ಪರ್ಷದಂತೆ!
ಆತನಂತೆ ತಂಪು!
ಆದರೆ ಬಹುಬೇಗ ಅಳಿಸಿಹೋಗುತ್ತದೆಯಲ್ಲ!
19.ವಿರಹವ ದೂರಮಾಡಲು ಬರಹದ ಮೊರೆ ಹೋಗುವ ವೈರಾಗ್ಯ ನನ್ನದು!
ಬರೆದರೆ ಬಂದು ಬಿಡುವನೇ ಆತ!
ಆದರೂ ಅದೇನೊ ಸಂತಸ!
ಶಬ್ಧದ ರೂಪದಲ್ಲಿ ಆತನನ್ನು ಕಾಣುವ ಸಮರಸ !
20.ಬಯಕೆಯೆಂಬ ಶರಧಿಯ ಅಲೆಗಳ ಕಟ್ಟಿಹಾ ಕಲಾದೀತೆ?
Comments
Post a Comment