ಉಂಚಗಿ
ಅದು ಯಾರೋ ಅಂದ್ರಂತೆ... ಹಳ್ಳಿನಾ..Cost of Living ಕಮ್ಮಿ ಅಂತ ಅಲ್ಲೇ ಇದಾರೆ.. ಎಲ್ಲೋ ನಮ್ಮ ತರ Private school ಆಲ್ಲಿ ಕಲಿತಿರೋದು ಡೌಟು.(ಒಂದ್ವೇಳೆ ಸರಕಾರಿ ಶಾಲೆನಾ. ಇಂಗ್ಲಿಷ್ Medium ಮಾಡ್ಲಿ,ಈ ತರ ಹಲುಬೋರೆ ತಮ್ಮ್ ಮಕ್ಕಳನ್ನ ಇವರ ವೇದಾಂತ ಬಿಟ್ಟು ಸರಕಾರಿ ಶಾಲೆಗೆ ಸೇರಿಸಿ ಬಿಡ್ತಾರೆ.. ಗೆದ್ದಿತ್ತನ ಬಾಲ ಹಿಡಿ ಯೋದು ದುಡ್ಡ ಉಳಿಸೋಕೆ)
ಆದ್ರೂ Cost Of Living kinta Quality Of Living ಮುಖ್ಯ ಕಣ್ರೀ.. ಬರಿ ನೆಲದಲ್ಲಿ ಕುಣಿಯೋ ನವಿಲನ್ನ ಚಿನ್ನದ ನೆಲದ ಮೇಲೆ ಕುಣಿಸಿ ಮಜಾ ನೋಡೋ ತವಕ ಜನರಿಗೆ.ಆಸೆಗಳನ್ನು ನೆಲದಲ್ಲಿ ಹುಗಿದಿಟ್ಟು ತಿರ್ಪೇ ಶೋಕಿ ಅಥವಾ [Let me be humble] ತೋರಿಕೆ ಜೀವನವನ್ನ ಸುಳ್ಳುಗಳಿಂದ ಬೇಳೆಸ್ತಾ ಇದೀವಿ.
ಯಾರಿಗೆ ತಾನೇ ಖಾಲಿ ಬಯಲಲ್ಲಿ ಕೂತ್ಕೊಂಡು ಸಂಜೆಗೆ ಮನೆಗ್ ಹೋಗೊ ದನ,ಪಕ್ಷಿಗೆ ಬೀಳ್ಕೊಟ್ಟು,ನಾಳೆ ಬನ್ನಿ ನನ್ನ ಮೌನದ ಸಂವಾದ ಕೇಳಿ ಅನ್ನೋಕೆ ಇಷ್ಟ ಇರಲ್ಲ? ಕಾಲು ಧೂಳ್ ಆದ್ರೂ ಸೈ,earphone alli ಒಳ್ಳೇ ಹಂಸಲೇಖ ಹಾಡ್ ಹಾಕಿಕೊಂಡು ೫:೩೦ ಗೆ ಬರುವ ಟ್ರೈನ್ ನೋಡೋಕೆ ಇಷ್ಟ ಆಗಲ್ಲ? ಬೆಲ್ಬೇಳಿಗ್ಗೆ ಎಲ್ಲರ್ ಮನೆ ಆಕಳ್ ಗಳ ಜೊತೆ walk ಮಾಡ್ತಾ,ಕೆಲವೊಬ್ರ ಮನೆ ದೋಸೆ ಬಂಡಿ ಸೌಂಡ್ ಚೋಂಯ್ ಅಂತ ಕೆಳೀಸೋದು ಸರ್ವೇ ಸಾಮಾನ್ಯ! ಮನೆ ಆಕಳು ಬತ್ತಿಸ್ಕೊಂಡಿದೆ ಅಂತ ಕೇಸರಿ ಮುಂಡುಟ್ಟು(I mean Lungi ya) ಹಳೇ ಗಿಂಡಿ ಚೊಂಬು ತಕೊಂಡು ವರ್ಕಣಶಿಯಲ್ಲಿ (ನಿದ್ರೆ ಮಂಪರಿನಲ್ಲಿ) ಹೋಗೋ middle aged ಭಾವಂದಿರು! ಏನೂ ಬೇಡ, ಸುಮ್ನೇ packet ಹಾಲು ತರ್ಸಿಬಿಡೋಣ ಅಂತ ಹೇಳದೇ ಏನ್ ಇರಲ್ಲ ಬಿಡಿ!
ಬೆಳ್ಬೆಳಿಗ್ಗೆ ದೋಸೆ ಬಂಡಿಯ(ಹೆಂಚು/ಕಾವಲಿ) ಮುಂದೆ ನಿತ್ಕೊಳೋ wanna be modern ಸೊಸೆಗೆ ತಲೇಲಿ ಯೋಚ್ನೆ.. ಯಾಕಾದ್ರೂ ಚಿಕ್ಕ ವಯಸ್ಸಲ್ಲಿ ಹತ್ತು ವರ್ಷ ದೊಡ್ಡೋನ ಕಟ್ಕಂಡ್ನೋ..ಇಲ್ಲಾಂದ್ರೆ ಆರಾಮ್ ಬೆಂಗಳೂರ್ ಮನೇಲಿ cuddle ಮಾಡ್ತಾ morning cup of coffee ಕುಡಿತ ಇರಬಹುದಿತ್ತು ಅನ್ನೊ ಕಲರ್-ಕಲರ್ ಯೋಚ್ನೆಗಳು! ಅಷ್ಟ್ ಹೊತ್ತಿಗೆ ಬಂಡಿ ಗಾರ ಆಗಿ(ಹೆಂಚು ತುಂಬಾ ಕಾದ್ ಬಿಟ್ಟು) ಕನಸಿನ ಮಾಯಾಲೋಕಕ್ಕೊಂದು full stop ಬಿದ್ದೇ ಬಿಡ್ತು! ಊರ್ಮುಂಚೆ ಬೆಳಗಾಗೋ ಈ ಊರಲ್ಲಿ ಹತ್ತು ಘಂಟೆ ನಂತರ ಮುಂದೇನು ಅನ್ನೊಂದೆ ಯಕ್ಷ ಪ್ರಶ್ನೆರೀ!
ಹೊಸ ಮದುಮಗನ ತರ ಇರೋ ಟಾರ್ ರೋಡ್.ಚಲೋ(ಒಳ್ಳೇ) connectivity.. ಎಷ್ಟ್ ಜನ ತಿರುಗ್ತಾರೆ! ನೋಡ ನೋಡ ಎಷ್ಟ್ force ಅಲ್ಲಿ ಗಾಡಿ ಹೊಡುದು..ಒಂದ್ ಬದಿಗೆ ಹೆಕ್ತಾ..(It means he will fall off somewhere).. ಹನ್ನೆರಡನೇ ದಿನ ಕರೆಯ ಬತ್ತು(It means avan ತಿಥಿ-ವಡೆ ಹತ್ರಾ ಬಂತು ಅಂತ) ಅನ್ನೋ 70s-80s beauties.. ಅದೇ ಕಂಪಾದ ಮನೋರ(a kind of sweet made from besan flour) ಜೊತೆಗೆ ಕನಸಿನ ಲೋಕದಲ್ಲಿ ಮಗ್ನಳಾಗಿ ಮೈಮರೆತು ಸೊಸೆ ಮಾಡಿದ ಸ್ಟ್ರಾಂಗ್ ಕಹಿ ಚಾ!
ಅಲ್ಲೇ ಒಂದು ಸಣ್ಣ ಗಾಸಿಪ್ which ends up being an argument🙂. ಇವೆಲ್ಲದರ ಮಧ್ಯೆ ಮರುಭೂಮಿಯಲ್ಲಿ ನೀರ್ ಹುಡ್ಕೋ ತರ 4G ತಲಾಷ್ ಅಲ್ಲಿ ಇರೋ ಬೆಂಗ್ಳೂರ್ return ಹುಡ್ಗಿ.ಯಾರ್ ಯಾರು ಎಲ್ಲೆಲ್ಲಿ ತಿರುಗೋಕೆ ಹೋಗಿದಾರೋ ಒಂದ್ ಸಲ ನೋಡೀ ಕಣ್ಣ್ ತಂಪ್ ಮಾಡ್ಕಲೋಣ ..ಈ strict parents ಇರಬೇಕಾದರೇ ಅಜ್ಜನಮನೆಯೇ ಕಾಶಿ,ನಲ್ಲಿ(tap ಕಣ್ರೀ) ನೀರೇ ತೀರ್ಥ ಅನ್ನೋ ಕಟು ಸತ್ಯ flash ಆಯ್ತು.
ಅಂದಹಾಗೆ ಈ ಅಜ್ಜನಮನೆ ಇರೋದು ಉತ್ತರ ಕನ್ನಡದ ಕುಮಟಾದ ಉಂಚಗಿ ಊರಲ್ಲಿ..ಏನ್ ಅಷ್ಟ್ ಘೋರ ಹಳ್ಳಿ ಅಲ್ಲಾ..ಒಂದ್ 5-6 km ಆಗತ್ತೆ..(ನಡ್ಕೊಂಡ್ ಬಂದು ತುಂಬಾ ದೂರ ಅಂತ ದೂರ್ಬೇಡಿ..Government ಅವ್ರು ಐದಾರು ಖಾಲಿ bus ಬಿಡ್ತಾರೆ.. ಒಂತರಾ ಮೌನ ಹೇಳೋದು ಮುಖಕ್ಕೇ ರಾಚುವಂತೆ..ಅಷ್ಟ್ privacy😅) ಸದ್ಯ ವಾಲಗಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ಆಗಿತ್ತು..ಜನ ಇನ್ನೂ ಅದೇ hangover ಅಲ್ಲಿ ಇದಾರೆ..ಊರಿನ ತುದಿಲಿ big-bazaar ಅಂತ ಎರಡು ಅಂಗಡಿ ಇದೆ..ಮಜಾ ಅಂದ್ರೆ ಅದು ಕೂಡ ದಾಯಾದಿ ಕಲಹದ victim..news ಅವ್ರಿಗೆ ಕರೆಸ್ ಬಿಟ್ರು ಅಂತ ಅಂದ್ಕಳಿ..ಪಬ್ಲಿಕ್ TV ರಂಗಣ್ಣ ಅವರ range alli program ಬರ್ತಿತ್ತು ನೋಡೀ.. Mostly ಏಳು ಗಂಟೆಗೆ ಮೊಳಗೋ ಮಂಗಳ ಗೌರಮ್ಮನ ಕೃಪೆ ಅನಿಸುತ್ತೆ..(Btw,the stupidest serial ever). ಅಜ್ಜನಮನೆ ಅಂದ್ರೆ ಇಷ್ಟನೇ..ಆದ್ರೆ ಸಲ್ಪ ಜೀವದ ಭಯ ಕಣ್ರೀ.. ಎಳು ಘಂಟೆಗೆ ಕತ್ತಲಲ್ಲಿ ಕೂತ್ಕೊಂಡು ಜಂಗಮವಾಣಿ ನೋಡೋಕೆ ಜಿಗರ್ ಬೇಕಲ್ಲಾ 🙈(ಜಂಗಮವಾಣಿ ಅಂದ್ರೆ mobile ಕಣ್ರೀ)So by default ಮಂಗಳ ಗೌರಿ ಕರಕರೆ ನೋಡಲೇಬೇಕು..
ಉಂಚಗಿ ಒಂದ್ ತರ ಸಣ್ಣ ಊರು..ಊರಲೆಲ್ಲ ಒಂದೇ ಸಾಲಲ್ಲಿ ಮನೆ.. ಅಜ್ಜಂಗೆ ಕೇಳಿದ್ರೆ ಮತ್ತೊಂದ್ ಬದಿಗೆ ಸೊಡ್ಲೆಗುಡ್ಡೆ(ಸ್ಮಶಾನಕ್ಕೆ ಸೊಡ್ಲೆಗುಡ್ಡೆ ಅಂತ ಕರೆಯೋದು ನಮ್ ಕಡೆ) ಅಲ್ಲೆಲ್ಲಾ ಕಟ್ಟಲ್ಲ ಅಂತ ಹೇಳಿ ಮುಂದೆ ತಲೆ ತಿನ್ನೋ ಲಕ್ಷಣ ಕಂಡು ಎದ್ ಹೋಗ್ಬಿಟ್ರು! ಬೆಂಗ್ಳೂರ್ ಆಗಿದ್ರೆ ಇಂಚೂ ಬಿಡದೆ ಮನೆ ಕಟ್ ಬಿಡೋರು.. ಎಲ್ಲರದೂ ಮನೆ ಮುಂದೆ private acacia plantation ತರ (ನಂಗ್ ನನ್ enemies ಕಿಂತ ಈ ಆಕೇಶಿ ಮರ ಕಂಡ್ರೆ ಉರ್ಕೊಂಡ್ ಬರತ್ತೆ). ಊರಿಗೊಂದು ವಿಷ್ಣುಮೂರ್ತಿ ದೇವಸ್ಥಾನ!ಇದ್ದ ಬಿದ್ದ relatives ಮದ್ವೆ, ಮುಂಜಿ,ತಿಥಿ ಎಲ್ಲಾ ಅಲ್ಲೇ ಆಗಿರೋದು..ಇವಾಗ್ಲೆ ಹೇಳ್ತಿದೀನಿ ಅಪ್ಪ,ಅಲ್ಲೇ ಏನಾರೂ ನನ್ ಮದ್ವೆ ಇಟ್ರೋ,ನಾನ್ ಅಂತು ದೇವರಾಣೆ ಒಡ್ ಹೋಗ್ತೀನಿ..
ಅಂದಹಾಗೆ ನಾನೊಂತರ Lockdown ಸಂಚಾರಿ.. ಬೆಂಗ್ಳೂರ್ ಮಂಗ್ಳೂರು ಅಂತ ಓದಿ ಗುಡ್ಡೆ ಹಾಕಿ ಹೊದೋಳಿಗೆ Corona Time ಅಲ್ಲಿ ಕುಮ್ಟೆ ಪೇಟೆ (ಕುಮಟಾ ಟೌನ್) ಮನೇಲಿ ಉಸಿರು ಕಟ್ತಿತ್ತು.. ಎಷ್ಟೇ ಹೇಳಿ ಹುಟ್ಟ ಗುಣ ಸುಟ್ಟರೂ ಹೋಗುದಿಲ್ಲ ನೋಡಿ..I meant I had to shift to the town due to some reasons when I was 13.. ಒಂಥರಾ train ಅಲ್ಲಿ ಬೋಗಿ ತಪ್ಪಿದ ತರ.. ಅಂದ್ಹಾಗೆ ಹಳೇಮನೆಗೆ ಅಜ್ಜಿಮನೆಗೆ ಒಂದೇ km ಅಂತರ.. ಚಿಕ್ಕೊಳ್ ಇರಬೇಕಾದರೆ ಮನೆಮೇಲ್ cycle ಹೊಡೆಯೋಕೆ ಹೋದೊಳು ಅಜ್ಜನಮನೆಗೆ ಹೋಗಿ Landline call ಮಾಡ್ತಿದ್ದೆ.. ಇವತ್ ಇಲ್ಲೆ ಟೆಂಟ್ ಅಂತ..ನನ್ ಅಪ್ಪ ಅಮ್ಮನ ಜೊತೆ ಚಿರ ಭಾಂಧವ್ಯ ಅಷ್ಟೇ ಇತ್ತು ಬಿಡಿ.. ಒಂಥರಾ ನಂದೇ ರಾಜ್ಯ ಕಣ್ರೀ ಅಜ್ಜನಮನೇಲಿ..
Okay,fast forwarding to 2020.. ಅಜ್ಜನಿಗೆ ಉಂಚಗಿ ಅಂದ್ರೆ ಏನ್ meaning ಅಂತ ಕೇಳ್ದಾಗ ಮಾತಾಡಿದ್ರೆ meaning ಇರ್ಬೇಕು ಅಂತ ರವಿಚಂದ್ರನ್ dialogue ಹೇಳಿ ಬೈದು ಹೋಗಬೇಕಾ💔?
ಅಂದಹಾಗೆ ಉಂಚಗಿ ಊರಲ್ಲಿ ಶಾಸ್ತ್ರಿ, ಪಂಡಿತ್, ಶಾನಭಾಗ್, ಹೆಗಡೆ, ಭಟ್, ಯಾಜಿ ಎಲ್ರೂ ಇದಾರೆ..surname unique ಇದೆ ಅಂತ ಅದೇ ಹೆಸರಿಂದ ಕರೆಯೋದು ಕಣ್ರೀ..ಯಾಕೆ ಹೇಳಿ.. ಹೆಸರಿನಲ್ಲಿ ಎನಿದೆ 😅?
ಮೊದಲೆಲ್ಲ ಯಾವವು ಅಂತ ಗೊತ್ತಿಲ್ದೆ ಇರೋ ಮುಖ ಗಳೆಲ್ಲ ಮತ್ತಷ್ಟು ಹತ್ರ ಆಗೋಕೆ ಶುರು ಆದ್ವು.. ಎಲ್ ನೋಡಿದರಲ್ಲಿ Work from Home ಮಾಡೋ modernised ಗೂಡಿಗೆ ಬಂದ ಹಕ್ಕಿಗಳು ..ಈ show-off ನೋಡೋಕೆ ಆಗಲ್ಲ ಅಂತ ಬಯಲಿಗೆ ಹೋದ್ರೆ ಗತಕಾಲದ ದುಃಖ, ದರ್ದ್ ಗಳೆಲ್ಲಾ ಕಣ್ ಮುಂದೆ ಬರವು..ಅಂದ್ರೆ ನಮ್ಮಲ್ಲಿ ನಮ್ಮನ್ನ ಕಳೆದರೆ ಉಳಿಯೋದು ನಾವ್ ಮಾತ್ರ. ನಾವೇ ನಿರ್ಮಿಸಿದ ಕತ್ತಲಲ್ಲಿ ದಾರಿ ತಪ್ಪಿದಾಗ ದಾರಿ ಮುಗಿಯಿತೆಂದು ಹೇಳೋಕೆ ಕಾಲ್ಪನಿಕ ಕೋಗೊಂದು ಬೇಕು..ಹತ್ತು ವರ್ಷಗಳ ಕೆಳಗೆ ಇದು ನಾವೇ ನಾ ,ಇಷ್ಟು ಬದಲಾಗಿ ಬಿಟ್ಟಿದ್ಯ ನಮ್ ಜೀವನ? ಒಂಥರ life modern ಆಗಿದೆ ಎಂಬ ಭ್ರಮೆಲಿ , ಎಷ್ಟೊಂದು ಜೀವನ ಹಾಳಾಗಿದೆ ಎಂಬ ಕೀಳರಿಮೆಲಿ ಅಂಗೈ ಅಷ್ಟು ನೆಮ್ಮದಿ ಇಟ್ಕೊಂಡು ಜೀವನ ಮಾಡ್ತಾ ಇದೀವಿ..ಹೇಳೋಕೆ ಎಲ್ಲಾ ಇದೆ..ಅಧಿಕಾರ ಒಂದನ್ನ ಬಿಟ್ಟು ಅನ್ನೋದೇ ವಾಸ್ತವ!ಮುಗಿಯದ ದ್ವಂದ್ವ (ನೀವ್ confuse aagbedi.. ದ್ವಂದ್ವ ಅಂದ್ರೆ confusion ಕಣ್ರೀ).. ಇಷ್ಟೆಲ್ಲ ಡೀಪ್ ಯೋಚ್ನೆಗಳಿಗೆ support ಮಾಡೋ patho songs!(ಕೆಲವೊಮ್ಮೆ lyrics ಅರ್ಥ ಆಗಿಲ್ಲ ಅಂದ್ರೂ ಕೇಳೋ ಹುಚ್ಚು)
So, ಹೀಗೆ ನನ್ನ lockdown ಕಳೀತು.. ಮತ್ತೆ ಮುಂದೇನೂ ಕಳೀಬೋದು..
Comments
Post a Comment