ಆಕೆ ❤️
ಗಂಟೆ ಐದಾದರೆ ಸಾಕು..ಮಧ್ಯಾನ್ಹದ ಚಹಾದ ನಾಲ್ಕೇ ಗುಟುಕನ್ನು ಅವಸರವಸವಾಗಿ ಹೀರಿ,ಹಬ್ಬಸಿಗೆ ಹೂವಿನ ಮಾಲೆಯನ್ನು ತುರುಬಿಗೆ ಸಿಕ್ಕಿಸಿ ಬಾರದೂರಿನ ಅತಿಥಿಯನ್ನು ಕಾಣಹೋಗುವ ಧಾವಂತದಲ್ಲಿದ್ದಳು!
ಇದು ನಿನ್ನೆ ಇಂದಿನ ಮಾತಲ್ಲ!ಎಷ್ಟು ಹಳೆಯ ರೂಢಿ ಎಂದು ಲೆಕ್ಕವಿಟ್ಟರೆ ಮನಸ್ಸಿನ ಕಂಬನಿ ಕಾಣದು ಆತನಿಗೆ ಎಂದು ಲೆಕ್ಕವೇ ಇಟ್ಟಿಲ್ಲ ಆಕೆ! ಬಣ್ಣ ಮಾಸಿದ ಜಂಗು ಹಿಡಿದ ಗೇಟಿಗೆ ಕೈ ಕೊಟ್ಟು ಒಂದೇ ಬಗೆ ಕಾಯುತ್ತಿದ್ದ ಆಕೆಯನ್ನು ನೋಡಿ ಹಿರಿತಲೆಯೊಂದು ಹುಚ್ಚುಮನದ ಹುಡುಗಿಯೇ ಒಮ್ಮೆಯಾದರೂ,ನನ್ನ ಅನುಭವವನ್ನು ಕೇಳು!ಆತ ಬರನು! ನಿನ್ನ ಆಸರೆ ಕೇವಲ ನಿನ್ನ ನಿರಾಸೆಯೊಂದೇ ಎಂದು ಮನದಲ್ಲೇ ಮುಮ್ಮಲಮರಗಿ ಕಾನಿಂದ ಹಿಂಬರದ "ಗಂಗೆ'ಯ ಹುಡುಕಿ ಹೊರಟಿತು! ಕಡೆಗೂ ರೋಧನೆಯೋ/ಸಂಭ್ರಮವೋ ಎಂಬ ಸಂಕೇತ ದಂತಿದ್ದ ಹಳೆಯ ಮುರುಕು ಕೊನೇ ಬಸ್ಸು ಖಟರ್- ಪಟರ್ ಎಂದು ಬಂದಾಗ,ಆಕೆಯ ಕಣ್ಣುಗಳು ಕಂಡಿದ್ದು ಆತನೆಂಬ ಆತ ನಿಲ್ಲವೆಂಬ ದ್ವಂದ್ವವ ಮಾತ್ರ! ಅಸ್ಟ್ರಲ್ಲೇ "ರೈಟ್ ರೈಟ್" ಎಂದು ಬನ್ಸೂ ಕೂಡ ಹೊರಟು ಹೋಯ್ತು! "ಬಹುಶಃ ತಡವಾಯಿತು ಆತನಿಗೆ!ನಾಳೆ ಬಂದೇ ಬರ್ತಾನೆ! ಅಯ್ಯೋ ನನ್ನ ಕಥೆಯ ಮುಂದಿನ ಭಾಗ ಅಪೂರ್ಣ ವಾಗಿದೆ! ನಾಳೆಯೇ ತರಂಗಕ್ಕೆ ಕಳಿಸ್ಟೇಕು! ತಡವಾದರೆ ಎಡಿಟರ್ ಬೈತಾನೆ!"ಎಂದು ಹುಡುಗಿ ಮನೆದಾರಿ ಹಿಡಿಯುತ್ತಾಳೆ! ಆಕೆಗೆ ನಿಜವಾಗಿಯೂ ಪ್ರೇಮವೇ? ಅಥವಾ ಬರೆಯಬೇಕೆಂದು ತಾನೇ ಸೃಷ್ಟಿಸಿಕೊಂಡ ಕಾಲ್ಪನಿಕ ಜಗತ್ತೇ? ಯಾವವುದಾದರೂ ಸರಿ,ಇಲ್ಲಿ ಅನಾಥವಾಗಿದ್ದು ಭಾವನೆಗಳು ಮಾತ್ರ!
Comments
Post a Comment