ಇನ್ನೂ ಇದೆ❤️

1. ಮನಸ್ಸೆಂಬ ಮರುಭೂಮಿಯಲ್ಲಿ ನಿನ್ನ ಮೇಲಿನ ಒಲವಿನ ಕಳ್ಳಿಯ ಗಿಡಕ್ಕೆ ಆಸೆಯ ನೀರೆದರೆ ಪ್ರೀತಿಯೆಂಬ ಹೂವರಳೀತೆ?

2.ಪೂರ್ಣವಿರಾಮದ ನಂತರ ಕಥೆಯೊಂದು ಶುರುವಾದರೆ ತಾರ್ಕಿಕ ಅಂತ್ಯ ದೊರಕಬಹುದೇ?
ಎಳನೇ ಜನ್ಮದ ಕೊನೆಯಲ್ಲೂ ವಿರಹಿ ಮನವು ಮತ್ತೆ ಪುನರ್ಜನ್ಮದಲ್ಲಿ ಆತನನ್ನು ಸೇರುವ ಕನಸ ಕಟ್ಟಿತಂತೆ!

3. ಬಾರದೂರಿನ ಅತಿಥಿಗೆ ದಾರಿ ಕಾಣುತ್ತಾ ಬಗೆಬಗೆಯ ಖಾದ್ಯವ ಮಾಡಿ ಬಾಗಿಲಲ್ಲಿ ಬರಮಾಡೋ ಭಿನ್ನಹವಂತೆ!

4. ಮನದಾಳದಲ್ಲಿರುವ ನೀನು ಕ್ಷಣ ಕ್ಷಣಕ್ಕೂ ಎಚ್ಚರಿಸುವೆಯಾದರೂ ಅದರಿಂದ ವಿಮುಕ್ತಳಾಗಳು ಕೈಗಳಿಗೇಕೆ ಮೋಹವೆಂಬ ಬೇಡಿ ತೊಡಿಸಿರುವೆ?

5. ಆಸೆಗಳಿಗೂ ತೆರಿಗೆಯಿದ್ದಿದರೆ ಬಹುಶಃ ಆಸೆಯೆಂಬ ಆಕಾಶವು ಕೆಲಸವಿಲ್ಲದೆ ಬೇಸರದ ಹೂದಿಕೆಯಲ್ಲಿ ಬೆಚ್ಚಗೆ ಮಲಗುತಿತ್ತೇನೋ?

6. ಉಧೋ ಎಂದು ಸುರಿವ ಮಳೆಯ ಮೈಚಳಿಯ ಕೊಡವಬಹುದೇನೋ!
ಆದರೆ ಮನದಲ್ಲಿ ಆತನಿಲ್ಲದ ಮರಗೆಟ್ಟಿದ ಭಾವನೆ ಗಳು ಎಂದಿಗಾರೂ ಜೀವ ಪಡೆವುವವೇ?

7.ಕಥೆಯೊಂದಿಲ್ಲದೇ ಸನ್ನಿವೇಶಕ್ಕೆ ಮುನ್ನುಡಿ ಬರೆಯಬಲ್ಲ ಮಾಯಗಾರ!
ಆದರೆ ನೆನಪೇ ಉಳಿಸದಂತೆ ಕಥೆಯ ಮಧ್ಯೆ ಮಾಯವಾಗೋದು ಎಷ್ಟು ಸರಿ?

8. ಸಿಗಲಾರದ ಚಂದ್ರನ ಬೆನ್ನೆಟ್ಟಿ ಬೆನ್ನಹಿಂದಿರುವ ನೆರಳನ್ನು ಮರೆಯಲಾದೀತೆ?

9.ಪ್ರೇಮವೆಂಬ ಪರದೆ ಮೈಸುತ್ತಿ ಕೊಂಡಿರುವಾಗ ಆತನ ಕರೆಯು ಕೂಡ ಆಲಾಪದಂತೆ ಭಾಸವಾಗುವ ಅಯೋಮಯ ತೊಳಲಾಟ!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ