ವಿರಹ ಮತ್ತು ವ್ಯಾಮೋಹ
1. ಒಮ್ಮೆಯಾದರೂ ನನ್ನ ನಂತರ ನನ್ನ ಮೇಲೆ ಪ್ರೇಮ ವುಂಟಾದರೆ ನಿನ್ನಲಿಯ ಭಾವನೆಗಳ ಹೂಗುಚ್ಚ ವತಂದು ಗೋರಿಯ ಮೇಲಿಡು!
ಜಗದ ಕಣ್ಣಿಗೆ ನೆಮ್ಮದಿಯಲ್ಲಿರುವ ನನಗೆ ನೆಮ್ಮದಿ ಸಿಗುವುದು ನಿನ್ನ ಹೂಗುಚ್ಚಗಳಿಂದಲೆ!
2.ಆಕೆಯು ಎಲ್ಲರಂತಿರಲು ಪ್ರಯತ್ನಿಸಿದಳು
ಎಲ್ಲರಂತೆ ಆಕೆಯದ್ದು ಮರುಳಾಗುವ ಹುಚ್ಚು ಮನಸ್ಸು!
ಹುಚ್ಚು ಹಿದಿಸಿದವ ಹಿಂದಿರುಗಿ ನೋಡಲಿಲ್ಲ!
ಸಮಯ ಸಾಗುತಿತ್ತು..ಆದರೆ ಆಕೆಯಿನ್ನು ಅಲ್ಲೇ ನಿಂತಿದ್ದಳು..ಅವನನ್ನು ನೋಡಿದಲ್ಲಿಯೇ!
3. ಅಮಾವಾಸ್ಯೆಯಲ್ಲೂ ಪೌರ್ಣಿಮೆಯನ್ನು ಕಾಣಬಯಸುವ ಚಂದಿರನಲ್ಲಿರುವ ನೂನ್ಯತೆಗಳು ಕಾಣಿಸುತ್ತಿಲ್ಲ!
ನಿನ್ನ ಓರೆಕೋರೆಗಳು ಕೂಡ ಸುಂದರ ರೇಖೆಗಳೆ!
4.ಹೋಗಲಿ ಬಿಡು ಎನ್ನುವ ಮನ
ಸಮ್ಮತಿಯಿಲ್ಲದ ಹೃದಯದ ಸಾಂತ್ವನ
ಒಮ್ಮೆ ಮಾತನಾಡಿಸಿಬಿಡಲ ಎಂಬ ಮಂಥನ
ಇವೆಲ್ಲದರ ಮಧ್ಯೆ ಆಕೆಯೊಬ್ಬಳು ದಿಕ್ಕು ತೋಚದೇ ನಿಂತಿದ್ದಳು!
5. ಬಣ್ಣದ ಚಿಟ್ಟೆ ಯಂತೆ ನೀ ಹಾರಿ ಹೋಗಿರುವಾಗ
ಕೈಯ್ಯಲ್ಲಿ ಕೇವಲ ವಿರಹದ ಬಣ್ಣವುಂಟಷ್ಟೆ!
6. ಬಹುಶಃ ನಿನ್ನ ಮೊಂಡುತನವೆ ನಿನ್ನ ಬಗೆಗಿನ ನೆನಪುಗಳ ತಂದ್ಯೊತಿವೆ!
ಆದರೂ ಮನಸ್ಸಿನ ಮೂಲೆಯಲ್ಲಿ ಕೂತ ಅಪೂರ್ಣ ವಾದ ನಿನ್ನ ಚಿತ್ರವೊಂದು ಬಾರಿ ಬಾರಿ ಕೆಳುತ್ತ ಲಿತ್ತು..ನಾನು ಪೂರ್ಣನಾಗುವುದು ಯಾವಾಗ ಎಂದು!
7.ಮಸಣದ ಹೂವೊಂದು ಮೂಲೆಯಲ್ಲಿ ಮರಗಿತಂತೆ
ಬಯಸಿದ್ದೇನೋ ನಿಜ ನಿನ್ನ ಸಾಮೀಪ್ಯ ವನ್ನ!
ಆದರೆ ಸ್ಮಶಾನದಲ್ಲಲ್ಲ ಎಂಬ ಸಂಕೋಚದಿಂದ..
ಕಡು ಮೌನ ವೊಂದು ಆವರಿಸಿತ್ತು ಎಲ್ಲೆಲ್ಲೂ!
8. ಬೆಕ್ಕಸ ಬೆರಗು ಮಾಡುವ ಹೂವಿನಂತಹ ಕೋಮಲನವ
ಕಾಲಕ್ರಮೇಣ ಚಂದದ ಪಕಳೆಗಳುದುರಿ ಉಳಿದಿದ್ದು ಮನಸ್ತಾಪದ ಮುಳ್ಳುಗಳಷ್ಟೇ!
ಆದರೂ ಪಕಳೆಯಲ್ಲಿನ ಮೃದುತ್ವ ವನ್ನು ಆಕೆ ಮುಳ್ಳಿನಲ್ಲಿ ಕಾಣಹೊರಟಳು!
Comments
Post a Comment