ತಿರುಗಿ ಮತ್ತದೇ ಕಥೆಯೇ??
ಅಂದು ಆಕೆ ಗೊಂದಲದ ಗೂಡಾಗಿದ್ದಳು. ಜನುಮದಿನವೆಂದು ಸಂತಸ ಪಡಲೋ ಇಲ್ಲಾ ಜವಾಬ್ದಾರಿ,ಪ್ರಭುತ್ವಕ್ಕೆ ಮನಸ್ಸಿಲ್ಲದೆ ಹೆಗಲುಕೊಡಲೋ ಎಂಬ ದ್ವಂದ್ವದಲ್ಲಿ!
ಆದರೂ ವರುಷಪೂರ್ತಿ ಮಾತನಾಡದ ಗೆಳತಿಯರು ಅದೊಂದು ದಿನ ತೋರಿಕೆಯ ಹಾರೈಕೆಗಳ ಮಹಾಪೂರ ವ ತಂದೊಯ್ಯುವ ಅಂದಾಜು ಇತ್ತು!
ಮೊದಲೇ ೨೨ ಆಗುವ ಸಂಬ್ರಮ!ಹಿಂದಿನಿಂದ ಓದಿದರು ಒಂದೇ!ಮುಂದಿನಿಂದ ಓದಿದರೂ ಒಂದೇ!
ಅದರರ್ಥ ಹಿಂದಿನ ದೆಲ್ಲ ಮರುಕಳಿಸಲಿ ಎಂದೇನೂ ವಿಧಿಲಿಖಿತ ವಾಗಿರಲಿಲ್ಲ!
ಕಾಕತಾಳೀಯ ಅಷ್ಟೇ!
ಆಕೆ ೨೧ ರಿಂದ ೨೨ಕ್ಕೇ ಪ್ರಯಾಣ ಮಾಡುತಿದ್ದಳೋ ಹಾಗೇ ಊರಿಂದ ಊರಿಗೆ ಹೊಟ್ಟೆ ಪಾಡಿಗಾಗಿ ಪಯಣ ಸಾಗುತಿತ್ತು!
ಅನೀರಿಕ್ಷಿತ ವಾಗಿ ಸಿಕ್ಕಿದ ಗೆಳತಿಯೊಬ್ಬಳು ಆ ದಿನ ವಿಳಾಸ ವಿಲ್ಲದ ಅಂಚೆಯ ತಲುಪಿಸುವ ಅಂಚೆ ಪೇದೆ ಯಾದಳೆಂದರೆ ಬಹುಶಃ ಸುಳ್ಳಾಗಲಿಕ್ಕಿಲ್ಲ!
ಹಾಗೆ ನಿದ್ರೆಗೆ(ಭ್ರಮೆ ಎಂಬ ನಿದ್ರೆಗೆ) ಜಾರಿದಾಗ ಅಚಾನಕ್ಕಾಗಿ ಒಂದು ಬಿಂಬ ಕಣ್ಣ ಮುಂದೆ!ದಿನ ದಿನವೂ ಅನೇಕ ಬಿಂಬ ಗಳ ಕಾಣುವ ಕನಸುಗಾತಿಗೆ ಅದೇನು ವಿಶೇಷವಾಗಿರಲಿಲ್ಲ!ಹಠಮಾರಿ ಕನಸುಗಾತಿ!
ಆದರೂ ಆ ಬಿಂಬ ತೀಕ್ಷ್ಣ ವಾಗಿತ್ತು!ಸುಡುವ ಜ್ವಾ ಲೆಯಲ್ಲು ಅದರ ಚಂದ ಮನಕ್ಕೆ ತಂಪು ನೀಡುತಿತ್ತು!ವಿಳಾಸ ವಿಲ್ಲದ ಅಂಚೆಯೂ ಬಿಂಬವನ್ನೇ ಬೆರಳು ಮಾಡಿ ತಿಳಿ ಹೇಳುತಿತ್ತು!ಆಕೆ ನಾಲ್ಕು ಹೆಜ್ಜೆ ಮುಂದೆ ಹೋಗಿ ಬಿಂಬವನ್ನು ನೋಡಿದಾಗ ಆಕೆ ಇನ್ನಷ್ಟು ಗೊಂದಲ ಗೊಂಡಿದ್ದು ಸುಳ್ಳಲ್ಲ!ಆಕೆಯ ಕಲ್ಪನೆಯ ಪ್ರತಿರೂಪ ದಂತಿತ್ತು ಆ ಬಿಂಬ! ಆಯ ಕಟ್ಟಿನ ದೇಹ!ಮಿತಭಾಷಿ!ಸುಂದರ ರೂಪ!ಪ್ರತಿ ಕಿಡಿಯು ಅದರದ್ದೇ ಕಥೆ ಸಾರಿ ಸಾರಿ ಹೇಳುತ್ತಿತ್ತು!
ಬೆಂಕಿಯೊಡನೆ ಸರಸವೇಕೆ ಎಂದೆನಿಸಿದರೂ ಮನಸ್ಸು ಆಕೆಯ ಕೈ ತಪ್ಪಿತ್ತು!
ಈಕೆ ಮುಂದೆ ಹೋದಷ್ಟು ಹಿಂದೆ ಹೋದಂತೆ ಭಾ ಸವಾಗುತಿತ್ತು!ಆದರೆ ಬಿಂಬ ಮಾತ್ರ ಅಚಲ!ನಿಂತಲ್ಲೇ ತಾಳ್ಮೆಯ ಬೆಂಕಿಯ ಬಿಸಿಯ ಕಾಯಿಸುತಿತ್ತು!
ಬೆಂಕಿಯ ಬಿಂಬ ದೊಡನೆ ಆಟವಾಡುವ ತವಕ!ಆದರೆ ಆ ಬಿಂಬ ಎಂದೂ ಆರದ ಕಿಡಿ!ನೆಮ್ಮದಿಯಿಂದ ಉರಿಯುತ್ತಲೇ ಇತ್ತು!ಒಂದು ಕಿಡಿ ಆಕೆಯ ಮೈ ತಾಗಿದ್ದು ಸುಳ್ಳೇನಲ್ಲ!ಆದರೂ ಇನ್ನೂ ಹಲವಾರು ಕಿಡಿಗಳಿದ್ದವು!
ಆಕೆಗೆ ಎಲ್ಲವನ್ನೂ ಒಮ್ಮೆಲೇ ನೋಡುವ,ಬಯಸುವ ಹುಚ್ಚು ಕಾತರ!ಬೆಂಕಿಯ ಬಿಂಬ ಮಾತ್ರ ತಾಳ್ಮೆಯ ನಗು ಬೀರುತ್ತಿತ್ತು!
ಪ್ರತಿ ಕ್ಷಣವೂ ಆಕೆ ಹಾತೊರೆಯುತ್ತಿದ್ದಾರೆ,ಬೆಂಕಿ ಮಾತ್ರ ಸುಳಿವನ್ನು ನೀಡಿ ಸುಮ್ಮನಾಗಿ ಕಿರುನಗೆಯ ಬೀರುತ್ತಿತ್ತು!
ಆದರೆ ಅವಳಲ್ಲಿ ಒಲವೆನ್ನುವ ಕಿಡಿಯೊಂದು ಹೊತ್ತಿಕೊಂಡಿತು!
ಎರಡು ಜ್ವಾಲೆಗಳ ಮುಖಾ- ಮುಖಿ ಏರ್ಪಟ್ಟರೆ ಮೊದಲು ಆರುವುದು ಒಲವಾಗ್ನಿ ಯೇ- ಅಥವಾ ತಾಳ್ಮೆಯಾಗ್ನಿ ಯೇ?
ಆಕೆ ನಿದ್ರೆಯಿಂದ ಹೊರಬಂದಳೇನೋ ಸರಿ,ಆದರೆ ಸುಂದರ ಭ್ರಮೆಎಂಬ ಮುಖವಾಡವ ಕಳಚಿ ಬೀಳದಂತೆ ಎದೆಗಪ್ಪಿ ಹಿಡಿದಿದ್ದಂತು ಸುಳ್ಳಲ್ಲ!
ಬಹುಶಃ ಜೀವನ ಪರ್ಯಂತ ಒಲವಾಗ್ನಿಯ ಜ್ಞಾಪಿಸುವ ರಾತ್ರಿ - ಕನಸು - ಬಿಂಬಗಳೆಂದರೆ ಅವೇ ಸರಿ!
ಎದ್ದು ಕೂತ ಆಕೆಗೆ ೨೨ ಎಂಬ ಸಂಭ್ರಮ ಕ್ಕಿಂತ ಆದಿನ ಪೂರ್ತಿ ಬೆಂಕಿಯ ಬಿಂಬದ್ದೇ ಕನವರಿಕೆ!
Comments
Post a Comment