ನಾಗರಚುಂಬನ 💔
ಖಾಲಿತನದಗ್ನಿಯಲ್ಲಿ ಬೆಂದು ಸಾಯುತ್ತಿದವನಿಗೆ ಪ್ರೀತಿಯ ಸಹಾಯಹಸ್ತ ನೀಡಿದರಂತೆ!ಆದರೆ ಮರುಳ ಆತ..ಸುಖಕ್ಕೊಂದು ದುಃಖದ ನೆರಳಿರುವುದನ್ನು ಮರೆತೇ ಬಿಟ್ಟಿದ್ದ..ಕ್ಷಣಿಕ ಸುಖಕ್ಕೆ ನಾಂದಿಹಾಡಿ ತಾಳ್ಮೆಯ ಬಲಿ ಅರ್ಪಿಸಿಯೇ ಬಿಟ್ಟಿದ್ದ!
ಜೀವ ಉಳಿಸುವ ಅಮೃತ ಅತಿಯಾದರೆ ವಿಷವೆಂದು ಅಮೃತಪಾನದ ಮತ್ತೇರಿದವರಿಗೆಂದು ತಿಳಿ ಯದು..ಪ್ರೀತಿಯೆಂಬುದು ಹಾಗೇ.. ಮಂದಗತಿಯ ವಿಷ! ನಮಗರಿವಿಲ್ಲದಂತೆ ನಮ್ಮನ್ನು ಶರಣಾಗಿಸಿಕುಳ್ಳುವ ಸುಂದರ ಕಲ್ಪನೆಯ ಜೈಲು!ಆ ಜೈಲೂ ಕೂಡ ಅರಮನೆಯೇ!
ಮೋಹದ ಮತ್ತು ಮಸ್ತಕಕ್ಕೆರಿದಾಗ ಸುಳ್ಳೆಂಬ ಸರ್ಪವ ಬರಸೆಳೆದರಂತೆ!ಅದರೊಡನೆ ಕಾಳರತ್ರಿಯಲ್ಲಿ ಕಾದಾಟ!ಬಿಡಿಸಲಾಗದ ಕಣ್ಣಪರ ದೆಯೊಂದು ಕಟ್ಟಿದಾಗ ವಿಷವೇರಿದ ನಾಗನ ಬಿಗಿದಪ್ಪಿ ಚುಂಬಿಸಿದರಂತೆ!ಆಗ ಅದು ಜೀವ ಉಳಿಸುವ ಮದ್ದೋ ಅಥವಾ ಜೀವ ತೆಗೆಯುವ ವಿಷವೋ!
ಕೂಲಂಕುಷವಾಗಿ ನೋಡಿದರೆ ಎರಡೂ ಸರಿಯೇ!ಸಿಕ್ಕಾಗ ಬಿಗಿದಪ್ಪದೇ ಜೀವನಪೂರ್ತಿ ಅನುಭವಿಸುವ ವೇದನೆ ಒಂದು ಕಡೆಯಾದರೆ, ಸಿಕ್ಕಿದ್ದನ್ನು ಎದೆಗಪ್ಪಿ ಮೋಹದಲ್ಲಿ ಚಿರಂಜೀವಿಯಾಗುವುದು ಇನ್ನೊಂದು ಕಡೆ!
ಅದೂ ಸರಿ,ಇದೂ ಸರಿ!ಈ ತೀರ್ಮಾನಕ್ಕೆ ಬಂದು ತಲುಪುವಲ್ಲಿ ಮೊಹವೆಂಬ ಮೈಗಂಟಿದ ಬಣ್ಣ ಸಮಯವೆಂಬ ಮಳೆಯಲ್ಲಿ ತೊಯ್ದು ನಮ್ಮನ್ನು ಬೆತ್ತಲಾಗಿಸುತ್ತದೆ!
ಬೆತ್ತಲಾಗಲು ಇಷ್ಟ ಪಡದ ನಾವು ಎಂದೂ ಮುಗಿಯದ ಕದನದ ಸೇನಾನಿಗಳು!
Comments
Post a Comment