ತಪ್ಪಾ? ಕಲಿಕೆಯಾ?

                  ಜೀವನದ ಓಟದಲ್ಲಿ ಎಲ್ಲರೂ ತಪ್ಪಿತಸ್ತ ರೇ! ನಿತ್ತು ನೋಡುವ ಜಾಗವಷ್ಟೇ ಬೇರೆ! ಆದರೂ ತಪ್ಪಿನ ವರ್ಗೀಕರಣವೊಂದೆ!
                  ಹೊಳೆಯ ನೀರಿನಂತೆ ಹರಿದು ಹೋಗಲಸಾಧ್ಯವಾದ ಪ್ರೀತಿಯೆಂಬುದು ಮನಸ್ಸೆಂಬ ಕೆರೆಯ ನೀರಂತೆ - ಸ್ತಬ್ಧ!  ಸಮಯವನ್ನೇ ತನ್ನಡಿಯಾಳಾಗಿ ಮಾಡುವ ಮಾಯಾಜಾಲ!ಮುಂದಿನ ಪರಿಣಾಮಗಳ ವಿಶ್ಲೇಷಿಸುವಲ್ಲಿ ಮರಗೆಟ್ಟಿದ ಮನಸ್ಸು! ಆಕರ್ಷಣಾ ಹಠದ ಸರಪಳಿಯೊಂದು ಮುಗ್ಧ ಮನಗಳ ಬಂದಿಸಿ ಕೀಲಿ ಕೈಯನ್ನು ಬೇಕೆಂದೇ ಅಡಗಿಸಿಟ್ಟ ಪರಿ!
                   ನಿರ್ಮಲ ಪ್ರೀತಿಗೆ ಗೀಳೆಂಬ ತುಕ್ಕು ಹಿಡಿದು ಬಂದ ಧ್ಯೇಯ ಮರೆತಾಗ ಮನಸ್ಸು ಗಳೆರಡು ಮುಮ್ಮಲ ಮರಗಿತಂತೆ... ಎಂದೂ ಹಿಂದಿರುಗಲಾಗದ ಗತಕಾಲಕ್ಕೂ ಸೇರದೇ ಇತ್ತ ಇರದ ಮನಸ್ಸಿನಿಂದ ಭವಿಷ್ಯಕ್ಕೂ ಹೋಗದೇ ಅನಾಥವಾಗಿ ರೋದನೆಯಿಡುತ್ತಿರುವುದು ವಿಶಾಲ ಅಂಗಳದಂತಿರುವ ಖಾಲಿ ಮನಸ್ಸು!
                   ಹೊರಜಗತ್ತಿಗೆ ಮೂಳೆ ಅಸ್ಥಿಮಜ್ಜೆಗಳಿಂದ ಚಂದನೆಯ ರೂಪ ಪಡೆದ ಮನುಷ್ಯನು ಒಳಗಡೆ ಭಾವನೆಯೆಂಬ  ಛಾವಣಿಯಿಲ್ಲದ ಮುರುಕು ಮನೆಯಂತೆ!ನಗುವಿನ ಮುಖವಾಡವ  ಹೊತ್ತು ಕಾಳಸಂತೆಯಲ್ಲಿ ತಿರುಗುವುದು ದಿನಚರಿಯಾಗಿದೆ!
                    ಮತ್ತೆ ಬಂದದಾರಿಯಲ್ಲಿ ಎಲ್ಲವನ್ನೂ ಸರಿ ಮಾಡಲೇ ಎಂಬ ವಿದ್ರೋಹಿ ಮನ! ಇನ್ನೊಂದು ಕಡೆ ಕ್ಷಣಕ್ಷಣಕ್ಕೂ ಎಚ್ಚರಿಸುವ ಪ್ರಜ್ಞಾವಂತ ಮನ! ಈ ಸಮರಸಕ್ಕೆ ಪ್ರೀತಿಯದ್ದು ಒಂದೇ ಪ್ರಶ್ನೆ! ನನಗೇಕೆ ಜನ್ಮ ನೀಡಿದಿರೆಂದು!
                  ಬದುಕ ಪಡೆವ ಎಲ್ಲ ಪ್ರೀತಿಯು ತಪ್ಪೇ ಆಗಬೇಕೆಂದಿಲ್ಲ! ಕಲಿಕೆಯೂ ಆಗಬಹುದು! ಇನ್ನೂ ಆರದ ಗಾಯದಂತಿರುವ ಮನಸ್ಸಿಗೆ ಅಂದವರಿಸಿ ಬಂದ ಬೇರೊಬ್ಬರು ಮಾಯೆಯೆಂಬ ಗುದ್ದಲಿಯಿಂದ ಗಾಯವನ್ನು ಮತ್ತಷ್ಟು ಕೆದಕಿದರಂತೆ! ಆದರೂ ಪ್ರಜ್ಞಾವಂತ ಮನ ಇನ್ನಷ್ಟು ಕಾಯುವ ಧಾವಂತದಲ್ಲಿತ್ತು!
                   ಎಲ್ಲದಕ್ಕೂ ಪ್ರಬುದ್ಧತೆಯ ಚೌಕಟ್ಟ ಎಳೆಯಲಾಗದ ನಾವು ಎಲ್ಲವನ್ನೂ ಪ್ರಶ್ನಾರ್ಥಕ ದಂತೆಯೇ ನೋಡುವಾಗ ಪ್ರೀತಿಯು ತನ್ನ ಅಸ್ಥಿತ್ವವನ್ನು ವಿಮರ್ಶಿಸಿಕೊಳ್ಳುವಲ್ಲಿ ವಿಫಲವಾಯಿತಂತೆ!
                      ತಪ್ಪು - ಕಲಿಕೆಗಳ ಜುಗಲ್ ಬಂದಿ ಎಂದಿಗೂ ನಿರಂತರ!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ