ಮರಗೆಟ್ಟಿದ ಮನಸ್ಸು!

ಬರದ ಕ್ಷಣಗಳ ಭ್ರಮೆಯಲ್ಲಿ ಕಳೆದು ಹೋದ ಅವಳನ್ನು ಶೀತಗಾಳಿ ಸೋಕಿ ಎಚ್ಚರಿಸಿತು...
                ಹದಗೆಟ್ಟ ದೇಹದ ಆರೋಗ್ಯವ ನಿರ್ಲಕ್ಷಿಸಿ ಎಂದೂ ಗುಣಮುಖವಾಗದ ಮನಸ್ಸಿಗೆ ತಾತ್ಕಾಲಿಕ ಮದ್ದನ್ನರಸಿ ಹೋದಳಂತೆ!
                ಅಲ್ಲಿದುದು ಕೊರೆವ ಚಳಿ,ಕಾಡುವ ಮೌನ,ಬರದ ಆತನ ಉತ್ತರದ ಎದುರು ನೋಡುವಿಕೆ!
                ಆತನಿಲ್ಲದ ಜಗವೇ ತನ್ನಂಗಳವೆಂದು ದಿನ - ದಿನವೂ ಅಲೆದಾಡುವ ಆಕೆಗೆ ಅದೇನು ದೊಡ್ಡ ನೋವಾಗಿರಲಿಲ್ಲ!ಆದರೂ ಕ್ಷೀಣಿಸುತ್ತಿರವ ದೇಹವೊಂದು ಕೇಳಬೇಕಲ್ಲ!
                ಕಣ್ಣುಗಳು ಸದಾ ಬೀಳುತ್ತಿದ್ದ  ಹಿಮಪಾತವ ನ್ನು ಬಿಟ್ಟು ಬೇರೇನನ್ನೂ ನೋಡುತ್ತಿರಲಿಲ್ಲ! ಆದರೂ ಅವಳ ಮನಸ್ಸು ಇನ್ನೇನನ್ನೋ ಹೇಳುತ್ತಿತ್ತು, ಬಯಸುತ್ತಿತ್ತು!
                ಆತನ ಪ್ರತಿ ಅವಳ ಪ್ರೀತಿ ಹಿನಪರ್ವತದಂತೆ ಅಚಲ..ಅಲ್ಲಿ ಸೂರ್ಯರಶ್ಮಿ ಎಂದರೆ ಆತನ ಒಂದು ಮಾತು!ಆದರೆ ನೇಸರನಿಗೆಂದು ಪುರುಸೊತ್ತೊ?ಅವಳ ಒಂದೇ  ಆಸೆ ಕೆಲವೊಮ್ಮೆ ಮರೆತುಬಿಡುವನು ಎಂಬ ಬಯಕೆ ಸುಳ್ಳಾಗಲಿ ಎಂಬುದು..
                ಆಕೆಯ ಕಣ್ಣುಗಳು ದೂರ ಹಾಯುವಷ್ಟು ಆತನನ್ನೇ ಹುಡುಕುತ್ತಿತ್ತು! ಮಾಸಿದ ಶಾಲುಗಳಲ್ಲಿ ಬಂಧಿ ಯಾಗಿದ್ದ ಆಕೆಯ ಹೃದಯ ತಾಳ್ಮೆಯ ಪ್ರತಿರೂಪದಂತಿದ್ದರೂ ತಳಮಳಗೊಂಡಿತ್ತು! ಕೈಯಲ್ಲಿ ಬಿಗಿಯಾಗಿ ಹಿಡಿದಿದ್ದ ಪತ್ರದ ಲಕೋಟೆ ಮುದ್ದೆಯಾಗಿತ್ತು! ಗಾಳಿಗೆ ಆಕೆಯ ಮುಂಗುರುಳು ಕ್ಷಣ - ಕ್ಷಣಕ್ಕೂ ಆಕೆಯ ಮನಸ್ಥಿತಿಗೆ ಕನ್ನಡಿ ಹಿಡಿಯುತ್ತಿತ್ತು!
                ಅಂದು ಆಕೆಯ ಮೈ - ಮನ ಎರಡೂ ಮರಗೆಟ್ಟಿತ್ತು..ದೇಹ ಚಳಿಗೆ ,ಮನ ಆತನ ಕಾಯುವಿಕೆಗೆ.. ಕೈಯಲ್ಲಿದ್ದ ಪತ್ರವೊಂದೇ ಮೂಕಸಾಕ್ಷಿ ಅದಕ್ಕೆ...ದಿನ ದಿನವೂ ಹೊಸ ಹೊಸ ಸಾಲುಗಳಿಗೆ ಅದು ಒಡಲಾಗುತ್ತಿತ್ತು!
                ಇತ್ತ ಈಕೆಯ ಕಾಲುಗಳು ಹಿಮದಡಿಯಲ್ಲಿ ಹೂತು ಹೋಗುತ್ತಿದ್ದರೂ ಅದೇನೋ ನಂಬಿಕೆ ಬಲಹೀನ ಮನಸ್ಸಿಗೆ! ಕತ್ತಲಾವರಿಸಿದ್ದರೂ ನಂಬಿಕೆಯ ದೀಪ ಚೆನ್ನಾಗಿಯೇ ಉರಿಯುತ್ತಿತ್ತು!
                ಒಂದು ಕ್ಷಣ ಆತನೇ ಬರದಿದ್ದರೆ ಎಂಬ ಪ್ರಶ್ನೆ ಮೈಸವರಿ ಹೋಗಿದ್ದು ಸುಳ್ಳಲ್ಲ.. ಆದರೂ ಕೃಷ  ದೇಹ ಸಹಕರಿಸುತ್ತಿರಲಿಲ್ಲ!ಕಾಯುವಿಕೆ ನಿರಂತರ ಕೃಷಿಯೆಂದು ಕರಗತ ಮಾಡಿಕೊಂಡಿದ್ದ ಆಕೆ ಮನೆದಾರಿ ಹಿಡಿಯುವಾಗ ಕಂಗಳ ಪದೇ ಪದೇ ಹಿಂದಿರುಗಿ ನೋಡುತ್ತಿದ್ದದ್ದು ಇನ್ನೂ ಬತ್ತದ ನಂಬಿಕೆಯ ಸಂಕೇತವಾಗಿತ್ತು!!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ