ಏಕೆ ಹೀಗೆ?
1.ಎಲ್ಲವನ್ನೂ ಮುಕ್ತವಾಗಿ ಹೇಳಲು ಪ್ರೀತಿಯೇ ಮುಗಿದಿರುವಾಗ ಮತ್ತೊಂದು ಮಾತು ಮನದ ಕಿಟಕಿ ಯಿಂದ ಇಣುಕಿ ನೋಡಿತಂತೆ!
2. ಗತಕಾಲ ದಿಂದ ಹುದುಗಿರುವ ಭಾವನೆಗಳ ಬಡಿದೆಬ್ಬಿಸುವವ ನೀನೆಂದು ಮನಕ್ಕೆ ತಿಳಿದಿದೆ!
ಆದರೆ ಹೇಗೆ ಹೇಳಲಿ ನಾ ನಿನಗೆ?
3.ಮನದಾಳದಲ್ಲಿಯ ನಾಚಿಕೆಯೆಂಬ ಆಣೆಕಟ್ಟ ದಾಟಿ ಬರುವ ಧಾವಂತವಂತೆ, ಗುರಿಯಿಲ್ಲದ ಗೊಂದಲ ಭಾವನೆಗಳಿಗೆ !
4.ಉತ್ತರವಿಲ್ಲದ ಪ್ರಶ್ನೆ - ನಿನ್ನ ಪ್ರೇಮ!
ಉತ್ತರ ಹುಡುಕ ಹೊರಟಾಗ ಮತ್ತೆ ಬಂದು ತಲುಪಿದ್ದು ಶುರು ಮಾಡಿದ ಶೂನ್ಯಕ್ಕೆ!
5. ನಿನ್ನಯ ನಿನ್ನೆಗಳೆಂಬ ಕನವರಿಕೆಗಳೊಂದು ನಾಳೆಯೆಂಬ ಮರೀಚಿಕೆ!
6.ಭಾವನೆಗಳ ಬಡಿದೆಬ್ಬಿಸಿ ಮರೆಯಾದೆ ನೀನು,
ಆದರೆ ನೀನಿಲ್ಲದ ಮನವು ಜೀವಂತ ಶವದಂತೆ!
7.ಆತನ ಸವಿಯಿಸಿರ ಸೆರೆಯ ತಪ್ಪಿಸಲು
ತನಗೆ ತಾನೇ ಮನವಳೆದುಕೊಂಡ ಬೆಂಕಿಯ ಬೆಂಗಾವಲು!
8. ಸುಪ್ತಮನದ ಕದ ತಟ್ಟಿದೆ ನೀನು!
ಬಾಗಿಲಿಗೆ ಬರುವಷ್ಟರಲ್ಲಿ ನೀನೊಂದು ಕಲ್ಪನೆಎಂದು ಅರಿವಾಯಿತು!
ಆದರೆ ಏನು ಮಾಡಲಿ!ನನ್ನ ಮನಸ್ಸಿನ ತುಂಬ ನೀನೇ ಆವಸಿರುವೆ!
9.ಮೌನ ಕೋಟೆಯೊಳಡಗಿತ್ತು ರೆಕ್ಕೆಯಿಲ್ಲದ ಚಿಂತೆಗಳು!
ಕಟ್ಟೊಡೆದು ಧುಮ್ಮಿಕ್ಕ ಲೋ ಎಂಬ ಅಂತೆಕಂತೆಗಳು!
10.ವಿರಹವ ಪರಿಚಯಿಸಿದ ನೀನು,
ನನ್ನ ಪರಿಚಿತನಾಗುವ ಕಾಲವ ಹೇಳಿಬಿಡು!
ತಾಳ ತಪ್ಪಿದ ಮನವು ತಾಳ್ಮೆ ಕಳೆದುಕೊಂಡಿದೆ!
ಆದರೂ ಸುಪ್ತ ಮನ ಹೇಳುತ್ತಿದೆ ಕಾಯಿ ಗೆಳತಿ!
ಈ ವಿರಹವು ಸುಖವೇ!
11. ಸ್ವಾಭಿಮಾನ,ಭ್ರಮೆ, ಕೀಳರಿಮೆಗಳ ಮಧ್ಯೆ ಬರಡಾದುದು ಪ್ರೀತಿ ಮಾತ್ರ!
Comments
Post a Comment