ಚಂಚಲೆ🍂
ಇದಕ್ಕೆ ಬಹುಶಃ ಭಿದುರ ಮನ ಕಾದಿದ್ದು! ಆತನಿಂದ ಕಿರು ಪರೀಕ್ಷಣೆಯ ಬಯಕೆ! ಆತನ ಮನದ ಗೋಡೆಯಲ್ಲಿ ಒಂದು ತೂಗುಪಟ ವಾಗುವ ಉತ್ಪ್ರೇಕ್ಷತೆ! ಏತನ್ಮಧ್ಯೆ ಆತನಿಂದ ಒಂದು ಕೂಗು ಆಕೆಯಡೆಗೆ... ವ್ಹಾ...ಬಹುದಿನದ ಹುಡುಕಾಟದಲ್ಲಿದ್ದ ಸಂತಸವೊಂದು ಕಣ್ಣ ಮುಂದೆ ಪಾತ್ರ ಧರಿಸಿ ರಂಗ ವೇದಿಕೆಯ ಸಜ್ಜು ಮಾಡಿದಂತೆ!
ನೀನೆಂದರೆ ಚಡಪಡಿಸುವೆ! ಇನ್ನೂ ಕೆಲವೊಮ್ಮೆ ಪರಿತಪಿಸುವೆ... ಕಾರಣ ವಿಷ್ಟೇ... ನೀನೆಂದ ಹಾಗೆ ನಾನು ಚಂಚಲೆ..ಕೊನೆಯಿರದ ಕಾಯುವಿಕೆ ಹಾಗೂ ಪರಿತಪಿಸುವಿಕೆಯೇ ಬಹುಶಃ ಚಂಚಲತೆ!
ಹೊರಜಗತ್ತಿಗೆ ಹಾಗೂ ಅದರಲ್ಲಿ ಸಕ್ರಿಯ ಸ್ಪರ್ಧಿ ಎಂದು ಗುರುತಲಿಚ್ಚಿಸಲ್ಪಡುವ ನನಗೆ ದಿನ ದಿನವೂ ಅಚಲ ವೆಂದೆನಿಸಿಕೊಳ್ಳುವ ಹೆಬ್ಬಯಕೆ ಎಂಬ ಹೆಮ್ಮಾರಿ!ಆದರೆ ನನ್ನ ಸ್ಥಾನದಿಂದ ನನ್ನನ್ನೇ ಅವಲೋಕಿಸಿಕೊಂಡಾಗ ಆತನ ಇರುವಿಕೆಯೇ ಇಲ್ಲದ ಸೂತ್ರ ಹರಿದ ಗಾಳಿಪಟ!
ಈ ಚಂಚಲತೆಯು ವೇದನೆಯೋ ಅಥವಾ ಆಸೆಯ ಅಲಿಖಿತ ನಿಯಮವೋ ಇನ್ನು ಅಸ್ಪಷ್ಟ! ಆತನಿಂದ ಇದ್ದದ್ದು ಒಂದೇ ಒಂದು ಅಪೇಕ್ಷೆ.. ಆತನ ಕಣ್ಣಲ್ಲಿ ನಾನಾರೆಂಬುವ ತಿಳಿಯುವ ತವಕ! ಅದೂ ಒಂದು ಸಲ ಸತ್ಯ ಎಂದು ಒಪ್ಪಿಕೊಳ್ಳದಷ್ಟು ಅಸ್ಮಿತೆ!
ಅಂಗೀಕರಣವೊಂದು ಸಿಗ ಬೇಕಾದ ಅಂತರಾತ್ಮವೆಂದೆನಿಸಿದರೆ ಬಹುಶಃ ತಪ್ಪಲ್ಲ! ಆತ ನೀಡಿದ ಹೆಸರಿಂದ ಬರಡು ಮನ ಹಸಿರಾದ ಕ್ಷಣ ಇನ್ನೂ ಅಚ್ಚಳಿಯದ ಮುದ್ರೆ!
ಚಂಚಲತನವ ಸೃಷ್ಟಿ ಸಿದ ಆತನಿಗೆ ಚಂಚಲತೆಯ ಚಿಗುರೊಡೆದು ಹೂವಾದ ಮೇಲೆಯೇ ಮೇಲೆಯೇ ಬಹುಶಃ ಆರ್ಥವಾಗಿದ್ದು! ಆದರೂ ಒಣಗಿದ ಕಾಗದದ ಹೂವಂತೆ ಆ ಚಂಚಲತೆಯ ಪುಷ್ಪ ವ ಎದೆಗಪ್ಪಿಕೊಂಡಿರುವೆ...
ಈ ಚಂಚಲತೆಯು ತಪ್ಪಲ್ಲ.. ಆತನೆಡೆಗಿನ ಆಸೆಯೆಂಬ ಬೆಂಕಿಗೆ ಗಾಳಿ ಸೋಕಿ ತನು - ಮನವ ತನ್ನ ಕೆನ್ನಾಲಿಗೆಗೆ ವಶಪಡಿಸಿಕೊಂಡಿದೆ!ಈ ಚಡಪಡಿಕೆಯ ಚಟುವಟಿಕೆಯು ಚೆಂದನೆಯ ಚುಟುಕೇ ಸರಿ! ನಿನ್ನ ಬಗೆಗೆ ಕ್ಷಣ ಕ್ಷಣಕ್ಕೂ ರೆಕ್ಕೆ ಪಡೆದು ಕೊನೆಯೇ ಇಲ್ಲದ ದಾರಿಯಲ್ಲಿ ಹಾರುವ ಭಾವನೆಗಳ ಮೂಲ ಈ ಚಂಚಲತೆ!
ಸುಖ ಸಿಗುವಾದದರೆ ಚಂಚಲತೆಯಾದರೇನು? ಎಲ್ಲವೂ ಸೌಖ್ಯವೆ!
Comments
Post a Comment