ಅಭಿವ್ಯಕ್ತಿತ್ವವೇ ನೀನಾರು?
1. ನಿನ್ನಲ್ಲಿ ನನ್ನ ಕಾಣುವ ಹಠಾತ್ ಮಹಾಹರಿವಿಗೆ ನನ್ನಲ್ಲಿದ್ದ ನಾನೆಂಬ ಭಾವವು ಕೊಚ್ಚಿ ಹೋಗಿದೆ!
ಮುಂದೆಲ್ಲಾದರೂ ಅದು ಅಂಗೈ ಯಲ್ಲಿ ಹನಿ ಜೀವವ ಉಳಿಸಿಕೊಂಡು ಅರ್ಣವನ ಸೇರಬಲ್ಲದೆ?
ಅಥವಾ ಅಸ್ವೀಕೃತ ಆತ್ಮವಾಗಬಹುದೆ?
2. ಖಾಲಿತನ ವೆಲ್ಲವೇಕೊ ಇಂದು ಖಾಲಿ ಖಾಲಿ ಅನಿಸುತ್ತಿದೆ!ಕಾಲು ಭಾಗ ಖಾಲಿತನದ ಕಲಿಕೆಯೂ ಕೈಯಲಿಲ್ಲವೆಂದು ಚಡಪಡಿಕೆಯೊಂದು ಚಿಗುರೊಡೆ ಯುತ್ತಿದೆ!
ಖಾಲಿತನ ಕೊಟ್ಟ ಅನುಮಾನದ ಅನುರಾಗಗಳೆಲ್ಲ ಗಾಳಿಗೆ ಸಿಕ್ಕ ತರಗೆಲೆಯಂತೆ ಹಾರಿಹೋಗುತ್ತಿದೆ!
ಅಸಹಿಷ್ಣುವಾದ ಮೊಂಡತನ ನನ್ನದಾಗುತ್ತಿದೆ! ಎಂದಿಗೆ ಹಿಂದಿರುಗಬಹುದು ಈ ಖಾಲಿತನ!
3. ನೇಸರನಿಗೂ ಬೇಸರ ಪಡಿಸುವಷ್ಟು ಪ್ರೀತಿ ಸೂಸಬೇಡ!
ನನ್ನ ಒಡಲಿನ್ನು ಅಷ್ಟು ಬಲಿತಿಲ್ಲ!
ಏನೇಂದು ಆರ್ಥೈಸಿಕೊಳಲಿ ಈ ಒಗಟ!
ನನಗೆ ನಾನೇ ಎಳೆದುಕೊಂಡ ಬೆಂಕಿಯ ಚಪ್ಪರವೆ?
ಅಥವಾ ನಿನ್ನ ಹುಚ್ಚು ಪ್ರೀತಿಯ ರೀತಿಯೇ?
4.ಎಂದೋ ಬೂದಿಯಾದ ಅಂತರಂಗದ ಅರಗಿಣಿಯ
ಇಂದಿಗೂ ಹುಡುಕಿ ಮುದ್ದಾಡುವ ಆಸೆ!
ಹತ್ತಿರ ಬರಸೆಳೆದು ಕವನ ಹೇಳುವ ಆಸೆ !
5. ಬಾಳಪುಟದಲ್ಲಿ ಅದೆಷ್ಟೋ ಗೀಚಿದ ಕವನಗಳೆಲ್ಲ ಅನಾಮಧೇಯವಾಗಿ ಹೇಳ ಹೆಸರಿಲ್ಲದೆ ಗತವ ಸೇರಿ ಕೊಂಡರೂ
ನೀ ಬರೆದ ಕವಿತೆಯ ಸಾಲೊಂದು ಅಚ್ಚಳಿಯದೆ ಹೃದಯವ ಹಚ್ಚ ಹಸಿರಾಗಿಸಿದೇ!
6. ಬೆಟ್ಟದಷ್ಟು ಆಸಕ್ತಿ ಕಾದು ಕುಳಿತಿದೆ!
ಕೇಳಲು ಕೇಳುಗನಿರುವಾಗ ಹೇಳಲು ನೀನು ಬೇಕಷ್ಟೇ!
7. ಸತ್ಯ ದೊಲ್ಲೊಂದು ಸುಳ್ಳಡಗಿದೆ ಎಂಬಂತೆ
ಒಂದೇ ಒಂದು ಸಲ ಮನದ ಮಾತು ಕೇಳುವೆಯ!
8. ದೂಷಿಸಬೇಕಾದುದು ಸಂದರ್ಭವ ಅವನನ್ನಲ್ಲ/ಅವಳನ್ನಲ್ಲ
ಹೇಳಲಾಗದ ವ್ಯಾಮೋಹದ ಆಣೆಕಟ್ಟು ತುಂಬಿದ್ದರೂ
ಪರಿಸ್ಥಿತಿಯು ಆತನ/ಆಕೆಯ ಕೈಗಳನ್ನು ಕಟ್ಟಿ ಹಾಕಿರಬೇಕಾದರೆ ಮಾತಿದ್ದು ಮೂಕ ಆಕೆ/ಆತ

Comments
Post a Comment