ಪ್ರೀತಿಯ ಪರಿಚಯ 💜
1. ಬದಲಿ ಎಳೆತವ ಪಡೆಯುವ ಭೀಕರ ಬರದಲ್ಲಿ ಮೌನಿಯೇ ಸೇನಾನಿ!
ಚೂರಿಯ ಮೊನೆಯಿಂದ ಎದೆಗಿರಿತಕ್ಕೊಳಗಾಗಿ ಚಿದ್ರವಾದ ಮನಸಾಕ್ಷಿ ಆಸರೆಯೆಂಬ ಚಿಕಿತ್ಸೆಯ ದಾರಿಕಾದು ಧೂಳಲ್ಲಿ ಧ್ವನಿಸಿದ್ದು ಒಂದೇ ದೂರು!
ನೀನೆಂದು ನನ್ನವನಲ್ಲ!ನೀನೆಂದು ನನ್ನವನಾಗಿರಲಿಲ್ಲ!
2.ಆಕೆಯ ನೋಡಿಯೇ ಪ್ರೆಮಿಯೊಳಗಡಗಿಕುಳಿತಿದ್ದ ಕವಿಯ ನಾಟಕದ ನಿದ್ರೆಯು ನಾಚಿತೇ?
ಆಕೆಯ ಸೌಂದರ್ಯವು ಪದಪುಂಜಗಳಿಗೂ ಅಪರಿ ಮಿತೆಯ ಆತಿಥ್ಯವ ನೀಡಿದವ?
ಆಕೆಯ ಲಾವಣ್ಯ ಲತೆಯು ಗರಿ ಬಿಚ್ಚಿ ಕುಣಿಯಲು ಆತನ ಹೃದಯವು ರಂಗ ಸಜ್ಜಿಕೆಯಾಗಿತ್ತೇ?
ಇಲ್ಲವಾದಲ್ಲಿ ಆತನ ಕವಿತ್ವವೇ ಆಕೆಯನ್ನು ತೇಜೋ ಗಣದಲ್ಲಿ ಎತ್ತು ಮೇರೆಸೀತೆ?
3. ವಿಧಿಯೆಂಬ ವೀರನ ವ್ಯಾಕುಲತೆಗೆ ತಡೆವಡ್ಡುವವ ರಾರು?
ಒಲ್ಲೆ ಎಂದರೂ ಮನದ ಖೈದಿಯ ಅನಿರ್ದಿಷ್ಟತೆಯ ಸರಪಳಿಯಿಂದ ಬಂಧಿಸಿ ಕರೆತರುವ ಕಾಮನೆ !
ನಂಟೆಂಬ ನಂಜ ನೆತ್ತಿಗೇರಿಸಿಕೊಳ್ಳಬೇಕಾದ ನಟನೆ !
4.ಸಾವಿರ ಚಾಕುಗಳ ಎದೆಗೆ ಇರಿದು ನಿನಗೆಂದೇ ಬಡಿಯುವ ಎದೆಬಡಿತವ ನಿರ್ದಾಕ್ಷಿಣ್ಯವಾಗಿ ನಿಲ್ಲಿಸುವ ತವಕ ನಿನಗೆ!
ನೀನೇ ಹಪಹಪಿಸಿದ ಅನುರಾಗವ ವ್ಯಾಖ್ಯಾನಿಸುವ ನಿನ್ನ ನಡೆ ಕಠೋರ...
ಅದನರಿಯ ಹೊರಟ ನನ್ನ ಹೋರಾಟವೇ ಒಂದು ಪ್ರಮಾದ ವೆಂದೆನಿಸಿದರೆ ,
ನನ್ನ ಸ್ಪಂದನೆಯೆಂಬುದು ನಡುಬೀದಿಯಲ್ಲಿ ರೋಧಿಸುವ ತಬ್ಬಲಿ ಕಂದನಂತೆ!
ದಿಕ್ಕು ತೋಚದೇ ಕುಳಿತಿದೆ!
Comments
Post a Comment