ಸರ್ವನಾಮ ನಿನ್ನ ಬಗೆಗಿನ ಒಲವು💜

1. ನಯನಗಳೆದುರು ಸತ್ಯದ ಪ್ರಜ್ವಲಿಸುವ ತೋರಣವೊಂದು ಕಟ್ಟಿರುವಾಗ
ದಹಿಸುತ್ತಿರುವ ಅಗಣಿತ ದೀಪ ಸಾಲುಗಳಲ್ಲಿ ಒಂದಾಗಲು ಒಪ್ಪದ ವಿದ್ರೋಹಿ ಮನಸ್ಸು!
ಬೆಳಕಿಗೆಂದೇ ಅಂಜುವ ಮನಸ್ಥಿತಿ ನನ್ನದಾಗಿರುವಾಗ
ಕತ್ತಲಲಿ ಕಳೆದ ಕರಡು ಪ್ರತಿಯ ನಿನ್ನ ಪ್ರೀತಿ ನನ್ನನ್ನು ಹಿಡಿದಿಟ್ಟಿವೆ!

2. ನಿನ್ನೊಲುಮೆಯ ಪ್ರಾಂತಗಳಲ್ಲಿ ಮಾರ್ದನಿಸ ಬೇಕಾದ ನನ್ನ ಹೆಸರನ್ನು ಎಂದೂ ಅಳಿಸದ ಅಕ್ಷರಗಳಲ್ಲಿ ಕೆತ್ತ ಬಯಸಿರುವ ಹುಚ್ಚು ತತ್ವ!
ನೆರವೇರಿಕೆಯೋ ಸತಾಯಿಸುವಿಕೆಯೋ ನಾ ಕಾಣೆ!
ಪದೆ ಪದೇ ಉದ್ಬ ವಿಸುತ್ತಿರುವ ಕವಲು ದಾರಿಯ ಕಾರ್ಮಿಕನಿಂದು ಗುಮಾನಿಯೊಂದ ಹೊತ್ತು ನಿಂತಿಹನು!
ಎಂದಿಗಾದರೂ ನೀನಿರಿದ,ನೀನಿಲ್ಲವೆಂಬ ಹತಾಶೆಯ ಗವಸು ಕಳಚಿ ಬೀಳಬಹುದೇ ಎಂದು!

3.ನಿನ್ನ ಬಗೆಗಿನ ಸಹಸ್ರ ಕಲ್ಪನೆಗಳ ಗುಪ್ತ ಪ್ರೇಮ ಪತ್ರಗಳ ಗುಚ್ಛ ವನ್ನು ಎದೆಯ ಬೆಂಕಿಯಲ್ಲಿ ಸುಟ್ಟು ಹಾಕಾಗಿದೆ!
ಆ ಬೆಳಕಲ್ಲಿ ನಿನ್ನ ಹೃದಯದ ಕದ ತಟ್ಟುವಿಕೆ, ಸಮರ್ಪಣೆ ಎಂಬ ಸುರಹೊನ್ನೆ ಯಂತೆ!
ನಿರಂತರತೆಯು ನಾಚುವಂತೆ ಇನ್ನಷ್ಟು ಪ್ರೇರೆಪಿ ಸುವುದು!

4. ಎಂದೆಂದೂ ಮಾಸದ ಮನಸಿನ ಹೋರಾಟವೆಂದರೆ ಅದು ನಿನ್ನಿಂದ ಪ್ರೇಮದ ಸಂಭವಿಸುವಿಕೆಯ ತಿಳಿಯಬಯಸುವುದು!
ಭಾಗಶಃ ಕ್ರೂರಿ ನೀನು!
ಎಲ್ಲಿ ಒಲವಿನ ವ್ಯಕ್ತ ಪಡಿಸುವಿಕೆಯಿಂದ ನಿನ್ನ ನಿಶಾನೆಗಳನ್ನು ನನ್ನ ಮನದ ಪುಟಗಳಲ್ಲಿ ತಿರುವಿ ಹಾಕಲಾಗುವುದೇನೋ ಎಂಬ ಅಧೀರತೆ ನಿನ್ನದೆಂದು ನಾನು ಭಾವಿಸಿದರೆ ಅತಿರೇಕವಾಗುತ್ತದೆಯೇ?

5.ಮರಣ ಶಯೆಯಲ್ಲಿ ಮಲಗಿ ಮುಷ್ಟಿಯಲ್ಲಿ ಕೆಲವೇ ಕ್ಷಣಗಳ ಹಿಡಿ ದಿಟ್ಟುಕೊಂಡಿರುವೆ ಎಂದರೆ,
ಆ ಕ್ಷಣಗಳು ನಿನ್ನ ನೀರಿಕ್ಷಣೆಗೆಂದು ತಿಳಿ!
ಉಸಿರ ಬಿಗಿ ಹಿಡಿದು ಕಾಯುತ್ತಿರುವೆ!
ನಿನಗೆಂದೇ ಬರೆದಿಹ ಹೇಳದ ಕವನಗಳ ಋಣವ ಹೆಗಲಮೇಲೇರಿಸಿ ಬೇರೊಂದು ಲೋಕಕ್ಕೆ ಹೋಗಲಾರೆ!
ಚಿತ್ತವಿಂದು ಕಂಪಿಸುತ್ತದೆ, ನಿನಗೆಂದೆ ಕಾಯುತ್ತಿದೆ!
ನೀನು ಬರುವೆ ಎಂದು ಜೀವನವ ತ್ಯಜಿಸುತ್ತಿರುವೆ!
ನಕ್ಷತ್ರ ಗಳಲ್ಲಿ ಒಂದಾಗುವೆ!
ನಿನಗೆಂದೇ ಬರೆದಿರುವ ಸಾಲುಗಳಲ್ಲಿ ಸೋಲ ಬಿಗಿದಪ್ಪುವೆ!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ