ಹಕ್ಕೆಂಬ ಹಠ!
1. ನವವಧುವಿನಂತೆ ಷೋಡಶ ಶೃಂಗಾರಪೂರ್ಣವಾದದ್ದು ಮನಸ್ಸು ಕೇವಲ ಸಾಯಲೇಂದೆ?
ದುಃಖವೆಂಬ ಗಾಯಕ್ಕೆ ಅಲಂಕಾರವೆಂಬ ಕಾರಣದ ಪಟ್ಟಿ ಕಟ್ಟಿ,
ಸ್ವಂತದಲ್ಲದ ಬದುಕಿನಲ್ಲಿ ಅನಾಮಧೇಯ ಪಾತ್ರಗಳ ಅರಸಿ ಆರಿಸಿ ಆರಾಧಿಸಿ ಸಿಂಗರಿಸಿ ಅಂತ್ಯದಲ್ಲಿ ಸಾಯಲೂ ಸನ್ನದ್ಧ ವಾಯಿತು ಮನಸ್ಸು!
2. ಸುಳ್ಳುಗಳ ಸಮಜಾಯಿಷಿಯ ಸರಮಾಲೆಯೊಂದ ಸುರಿದು ಸುಂದರ ಸ್ವಪ್ನಗಳಿಗೆ ತೋರಣವನ್ನಾಗಿಸಲಾಗಿದೆ!
ಆದರೋ, ಅದು ಇಂದು ಕೊರಳಬಿಗಿಹಿಡಿದು ಸತಾಯಿಸುತ್ತಿವೆ!
ಅದನ್ನಿಂದು ಧರಿಸಲೆ? ಕಿತ್ತು ಒಗೆಯಲೆ ?
ಆದರೂ ಸುಳ್ಳುಗಳು ನನ್ನದು!
ಸುಳ್ಳುಗಳ ಮೇಲೆಯೂ ಒಡೆತನ ಸಾಧಿಸಿ ಆಗಿದೆ!
ಹಕ್ಕೆಂಬ ಹಠವೊಂದು ಹಾದಿ ತೋರಿಸಿ ಸುಮ್ಮನೆ ಕುಳಿತಿದೆ!
3. ಕಾಯುವ ಖಾಹಿಲೆ ನನಗೆ,
ಕಾಯಿಸುವ ಖಾಹಿಲೆ ನಿನಗೆ!
ಒಲುಮೆಯ ಮದ್ದು ನೀಡಿ ಗುಣ ಪಡಿಸುವ ಖಯಾಲಿಯೊಂದು ಕಾಣೆಯಾಗಿದೆ!
ಹುಡುಕುವ ತವಕರೋಗ ರೋಗಿಗೂ ಬತ್ತಿಹೋಗಿದೆ!
ಜೀವವೊಂದು ಶಿಶಿರದ ಕೊನೆಯೆಲೆಯಂತೆ ಕಾದು ಸೋತಿದೆ!
ಸಿಗದ ನಿನ್ನ ಪ್ರೀತಿಯ ಗುಟುಕು ಬೆತ್ತಲಾಗಿ ಬರದಾಗಿದೆ!
Comments
Post a Comment