ಮಾತೊಂದು ಬೇಕಾಗಿದೆ 💙🥀
1. ಒಂಚೂರು ಪಾಪಿ ನಾನಾಗಲೇ?
ಇನ್ನೊಂಚೂರು ಪಾಪ ನಿನ್ನದಾಗಬಹುದೆ?
ಪ್ರೀತಿಸಿದ ಪ್ರಮಾದಕ್ಕೆ ನಾಟಕದ ನರಕವೂ ಸಲ್ಲದೇ?
2.ಪಟ್ಟು ಹಿಡಿದ ಪ್ರೇಮವಿದು,ಪ್ರತಿಯಾಗಿ ಪಟ್ಟಿ ಯಾಗಿಸಿಕೊಂಡಿಹೆ ಒಡಕು ಹೃದಯಕ್ಕೆ!
ನಿನ್ನನ್ನು ಓಲೈಸಲು ಮಾತೊಂದು ಬೇಕಾಗಿದೆ!
ಆದರೆ ಪ್ರತಿಧ್ವನಿಸಲು ನೀನು ಕೈಗೆಟುಕನಾಗಿಹೆ!
3. ಭಾವನೆಗಳ ಸ್ಥೂಲನಕ್ಷೆಯೇಕೋ ಬದಲಾಯಿಸಿದೆ ವರಸೆಯ
ಕಿಡಿಗೇಡಿ ವ್ಯವಸ್ಥೆಯೊಂದು ಕಳ್ಳ ಹೆಜ್ಜೆಯೊಂದ ಇಟ್ಟಾಗಿದೆ!
ನಾಜೂಕಿನ ನೀರುಣಿಸಿ ಬೆಳೆಸಿದ ಹೂವೊಂದು ಇಂದೇ ಬಾಡಿದೆ!
ಜೊತೆಗಾಗಿ ನಿರ್ಜೀವ ನಗುವೊಂದು ಕೈ ಬೀಸದೆ?
Comments
Post a Comment