ಮಧ್ಯಮನ 🥀
1. ಸ್ವಪ್ನವೊಂದರ ಸಜ್ಜುಮಾಡಿರುವೆ ಜಗತ್ತೊಪ್ಪದ ಕಥೆಗೆ
ವಿತಂಡವಾದವೊಂದರ ಪ್ರಸ್ತಾಪಿಸಿ !
ನಿನ್ನೀ ಮನವ ಭಾವನೆಗಳ ಆವೃರ್ತದಲ್ಲಿ ಮೆರೆಸಿ ಮರೆಸಬೇಕೆಂದಿರುವೆ!
ಅಣಕವಿರಬಹುದು ಇದು ನೈಜತೆಗೆ, ಆದರೂ ಭಗ್ನ ಹಂಬಲಿಕೆಯ ಕಟ್ಟು ವಿಕೆಯು ಶಾಶ್ವತ !
2. ಅರಿವಾಯಿತೆಂದೆನೆಗೆ ಪ್ರೀತಿಯ ಹುಗಿದು ಹಾಕುವಿಕೆಯು ಕೂಡ ಪ್ರೀತಿಸುವ ರೀತಿಯೆಂದು !
ಉಚಿತವೋ ಅನುಚಿತವೋ ಪರಿಹರಿಯದ ಗೋಜಲಿದು!
ನಿನ್ನ ಮನದಾಳ ನನ್ನ ಧ್ವನಿಯಾಗಬೇಕೆಂಬ ಹುಂಬತನ ನಿನ್ನದು!
ನಿನ್ನ ಸನಿಹವ ಬಯಸಿ ಆಸೆಗಳ ಅಲೆಗಳಲ್ಲಿ ಕೊಚ್ಚಿ ಹೋಗುವ ಅನಿವಾರ್ಯತೆ ನನ್ನದು!
3. ಅಂತರಂಗದ ಅಂಗಳದಲ್ಲಿ ಪಸರಿಸಿದ್ದ ಹೂಗಳ ಕಂಪನ್ನು ಆತನಿಗೆ ತಲುಪಿಸಿದ ಮೋಡಗಳಿಗೂ ಮೇಘ ಬಂಧನವಂತೆ!
ಅಂತ್ಯದಲ್ಲಿ ಮೇಘಗಳ ಬೀಳ್ಕೊಟ್ಟು ಮಧ್ಯ ಮನಸ್ಥರಾಗಿ ನಿಂತಿದ್ದು ಆ ತಿಳಿಮುಗಿಲು ಹಾಗೂ ಈ ವಿರಹಿ ಮನ ಮಾತ್ರ!
Comments
Post a Comment