ಅಲೆಮಾರಿ ಹೃದಯ!

 1. ತೆರೆಮರೆಗೆ ಸರಿಯಲೆಂದೆ ಚಿಗುರೊಡೆದ ನಿನ್ನ ಪ್ರೇಮ ಕಾವ್ಯಕ್ಕೆ ಇಂದೇಕೋ ಉದಾಸೀನವಂತೆ!
ನಿನಗೆಂದೆ ಹಾಕಿದ್ದ ಪೀಠಿಕೆಯು ದಾರಿ ತಪ್ಪಿ ಅಂತ್ಯದಲ್ಲಿ ಬೇರೊಬ್ಬರ ಬಾಗಿಲಿಗೆ ಬಂದು ನಿಂತಿಹುದಂತೆ!
ಕಥೆಯೇ ನಶಿಸಿ ಕಾವ್ಯವೊಂದು ಕನ್ನಡಿಯಲ್ಲಿ ಕುರುಹುವೊಂದರ ಹುಡುಕಿ ಕೈಚೆಲ್ಲಿತಂತೆ!

2. ಆಸೆ ಪಟ್ಟಿದ್ದೇನೋ, ದಕ್ಕಿದ್ದೇನೋ!
ಆದರಿಂದು ದಹಿಸುವಿಕೆಯ ಅಪಸ್ವರವೊಂದು ಹೃದಯದ ತಂತಿಯಿಂದ ಜೋರಾಗಿ ಮಿಡಿದಂತಿದೆ!

3.ಕಾಣದ ಕೈ ಗಳೆರಡು ಎಳೆದಾಗಿವೆ ಅಲೆಮಾರಿ ಚಿಂತನೆಗಳಿಗೊಂದು ಎಲ್ಲೆಯ !
ಆಸೆಗಳಿನ್ನೂ ತನ್ನ ನಕ್ಷೆಯ ಗೊತ್ತು ಮಾಡುವಿಕೆಯಲ್ಲಿ ಎಡುವುತ್ತಿದ್ದರೆ , ಕಲ್ಪನೆಗಳು ಸೀಮೋಲ್ಲಂಘನದ ಕುರುಡು ಕನಸು ಕಂಡು ಬೇಸರಿಸುತ್ತಿವೆ!
ಇವನ್ನೆಲ್ಲ ಬಲ್ಲ ಅದೇ ಕಾಣದ ಕೈಗಳು ಮೌನಕ್ಕೆ ಶರಣಾಗಿವೆ!


Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ