ಬಿಳಿಹೂವು - ನಿನ್ನ ಪ್ರೀತಿಯ ಬವಣೆ 🌼
1. ನಿನ್ನ ಪ್ರತಿ ನನ್ನೆದೆಯಲ್ಲಿ ಚಿಗುರೊಡೆವ ಪ್ರೀತಿಯ ಪುಷ್ಪವು ಒಂದು ಬಿಳಿಹೂವಿನಂತೆ!
ಪ್ರೇಮವೆಂಬ ಬಣ್ಣದಲ್ಲಿ ತೊಯ್ದು ಮರು ಜೀವಿಸುವ ಅದರ ನಿರೀಕ್ಷೆಯಿಂದು ದೇವರಿಲ್ಲದ ಗುಡಿಯ ಆರಾಧನೆಯಂತೆ!
ಬಣ್ಣದ ಬವಣೆಯು ತುಂಬು ತೇಜಸ್ವಿಯಂತೆ ದಹಿಸುತ್ತಿರೆ,ಪ್ರೀತಿ ಕಾಣದ ಬಿಳಿಹೂವೊಂದು ಸೌಖ್ಯದಿ ಬಾಡಿ ಬಾಳುತಿತ್ತು !
2.ಮನಸ್ಸಿನ ಬಾಂದಳಕೆ ಬೇಲಿ ಹಾಕಲೇ?
ನಿನ್ನಯ ಯೋಚನಾ ಲಹರಿಯ ಎಂದೂ ಕರಗದ ಮೇಘದಂತೆ ಅಲ್ಲಿ ನಾನು ಬಿತ್ತಲೇ?
ಎಲ್ಲವ ನಿನಗೆಂದು ಸಿಂಗರಿಸಿ ಸಂಸ್ಕರಿಸಲೇ?
ಆದರೆ ಇದ ನೋಡಲು ಅಲ್ಲೆಂದು ಬರದ ವ್ಯಸ್ಥ ಪಯಣಿಗ ನೀನು!
ನೀ ದಾರಿಮರೆತಿಹೆ ಎಂಬ ಮಣ್ಣಿನ ದೋಣಿಯಲಿ ಹೃದಯವನ್ನಿಟ್ಟು ಎಂದೋ ಬೀಳ್ಕೊಟ್ಟಾಗಿದೆ! ಅನಾಥ ಒಲವ ಜೊತೆಮಾಡಿ🥺❤️
3. ವಿರಹಕೂ ಬರಹಕೂ ಪ್ರೇರಣೆ ನೀನು!
ಈ ವಿರಹಕೆ ವಿವರಣೆ ವ್ಯಾಖ್ಯಾನವೂ ನೀನೇ!
ಏಕಿಂದು ಪ್ರೀತಿ ಸೂಸದೆ ಇನ್ನಷ್ಟು ಪ್ರೀತಿಸಲು ಪ್ರಚೋ ದಿಸುತ್ತಿರುವೆ?
ವಿಕೃತ ವಿರಹದ ರಾಗಕೆ ಎದೆ ಇಂದೇಕೋ ಭಾರವೆ ನಿಸುತಿದೆ!
ಕಣ್ಣಂಚಲಿ ಕೊನೆ ಕಾಣದ ಹನಿಯೂ ಕೇಳುವುದು ಹುಸಿಯಾಗದೇ ಈ ವಿರಹವೆಂಬ ಒಂದೇ ಪ್ರಶ್ನೆಯ!
Comments
Post a Comment