ಅನುರಾಗದ ಶೋಧನೆ ❤️

1.ಚೂರಾದ ಮನಸ್ಸಿನ ಪುನಃಶ್ಚೇತನವಿನ್ನು ಅಂಬೆಗಾಲಿಡುವ ಮಗು!
ಅನುರಾಗದ ಶೋಧನೆಯಲ್ಲಿ ಅನುದಿನವೂ ಆ ಅಬಲೆ ಎಡವಿ ಬೀಳುತ್ತಿರಲು,ಮೋಹದ ಮಾರ್ಜಾಲವೊಂದು ಮೂಖೆಯಲ್ಲಿ ಮನಸ್ಸೂರೆಗೊಳಿಸುತ್ತಿತ್ತು!
ಶೈವಾವಸ್ಥೆಯ ಮನವು ಅದರ ಬೆನ್ನೆಟ್ಟಿ ಹೊರಟಿತ್ತು!
ಅದೆಷ್ಟೋ ಆರದ ಗಾಯಗಳ ಎದೆಗೂಡಲ್ಲಿ ಅಡಗಿಸಿಕೊಂಡು ತುಟಿಕಚ್ಚಿ ಸಾಗುವ ಮಗುವಿನ ಬಳಲಿಕೆಗೆ ಕಣ್ಣೀರೇ ದಾಹ ತೀರಿಸುವ ಜವಾಬ್ದಾರಿಯ ಹೊತ್ತಿತ್ತು!
ಕಳೆದು ಹೋದ ಮನಸ್ಸೆಂಬ ಮಗುವಿನ ದಾರಿಕಾದು ತನುವೆಂಬ ತಾಯಿಯ ಮಾತೇ ಮುಗಿದಿತ್ತು!

2. ಸತ್ಯಾ ನ್ವೇಷಣೆಯ ನಾಂದಿ ಹಾಡಿದರೆ ಅದು ನನ್ನ ಪ್ರೇಮದ ಅಂತ್ಯವೇ?
ಒಳಗಡಗಿ ಕುಳಿತ ಪ್ರೇಮಿಗೂ ಸುಂದರ ಸುಸ್ತಿನ ತಾಪ ತಾಕೀತೆ?
ಕಂಡರೂ ಕಾಣಬಯಸದ ಸತ್ಯಗಳ ಪೋಣಿಸಿದ ಸರವು ಕೊರಳ ಬಿಗಿದರೂ, ಪ್ರೀತಿಯು ಇತಿಹಾಸದಲ್ಲಿ ಒಂದಾಗಲು ಬಿಡದ ನನ್ನೊಲವು!

3.ಸುಳ್ಳಿನ ಗೋಡೆಗೆ ನಂಬಿಕೆ ಒರಗಿ ಕೊರಗುತಿತ್ತು!
ಸತ್ಯವೆಂಬ  ಅಗೋಚರ ಗೆಳೆಯ ಬಂದು ಹೆಗಲನೀಡಿದರೂ,
ಒಲ್ಲದ ಅಶಕ್ತ ಪ್ರೀತಿ ದುರಂತ ಅಂತ್ಯವ ನಾಳಿನ ದಿನಕ್ಕೆಂದು ಕಾದಿಡುತ್ತಿತ್ತು!
ಮಿಡುಕಾಡಿದ ಮನವು ಜಗತ್ತಿಗೆ ಬೆನ್ನು ಮಾಡಿ ಮೂಕ ವೇದನೆಯ ರಾಗವ ಹಾಡುತ್ತಿತ್ತು!

4. ಅತಿಶಯೋಕ್ತಿಯು ವಾಸ್ತವವಾಗಬಾರದೇ ತಕ್ಷಣ?
ಸಂತಸದ ಪರಿಚಯವಾಗಬಾರದೇ ಅನುಕ್ಷಣ?
ನನ್ನ ಸನಿಹವೇ ನಿನ್ನಯ ಆಗಮನದ ಸುರಿಮಳೆ ಸುರಿದರೂ,ಈ ರಂಗಿನ ಕಲ್ಪನೆಗಳು ವಶಕೆ ಸಿಗದೆ ಸತಾ ಯಿಸುತ್ತಿವೆ!
ಎಂದೋ ಕಳೆದ ಗತದ ಹುಣ್ಣಿಮೆಯು ತಿರುಗಿ ನನ್ನ ಬಾಳಪುಟದಲ್ಲಿ ಇನ್ನೊಮ್ಮೆ ಬರಬಾರದೇ?



Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ