ಮಂತ್ರವಿದ್ಯೆ ಪ್ರೇಮ 🤍🌸

1. ಪ್ರಕೃತಿ ಎಂಬುದು ನೀನು,ನೀನೆಂಬ ಸುಂದರ ಸ್ವಪ್ನ ವಾದರೆ,
ವಿಕೃತಿ ಎಂಬುದು ನಿನ್ನ ಕುರಿತಾದ ಬಣ್ಣದ ಜಗತ್ತಿನ ನನ್ನೀ ಉತ್ಕಟ ಹಠ!
ಆದರೆ ನಾವಿಂದು ಸನಿಹ ಕಾಣದ ದೂರದ ದ್ವೀಪಗಳಾದರೆ, ಬಾಳ ಪಯಣದಲ್ಲಿ ಸೇರೋ ಸುಯೋಗವೇನಾದರು ನಮ್ಮದಾಗಬಹುದೇ?

2. ಮೌಢ್ಯಕ್ಕೆ ಪ್ರೀತಿಯ ನಾಮಾಂಕಿತವೆಂಬ ಸಹಜವಾದ ಸತ್ಯ!
ಆದರೂ ಕೃತಕ ಜೀವನದ ಆಸರೆಯಿಂದ ಬಾರದ ದಿನಗಳ ಎದುರು ನೋಡುವಿಕೆ ಮಿತ್ಯ!
ಬಹುಶಃ ಇದೇ ಪ್ರೇಮವೆಂಬ ಮಂತ್ರವಿದ್ಯೆಯೇ?
ಈ ಮಂತ್ರವಿದ್ಯೆ ಎಂದಿಗೂ ನಿರಂತರ, ನಿತ್ಯ!

3. ಮಧುರಾತೀ ಮಧುರ ಸನ್ನಿವೇಶವೊಂದ ಭಾ ವಲೋಕದ ಅಂಕಣದಲ್ಲಿ ಸೃಜಿಸಲಾಗಿದೆ!
ಹೀಗಿದ್ದರೂ ಕಥೆಯ ಅಂತ್ಯ ನನ್ನಲ್ಲಿದೆ ಎನ್ನಲು ಕೊರಳಿಂದು ಕಟ್ಟುತ್ತಿದೆ!
ಮಂತ್ರಗುರಿ ಆತನೇ ಎಂದು ಬಯಕೆಯ ಬಳಗವಿಂದು ಧೃಡೀಕರಿಸಿದಾಗ,
ಮಿನುಗಿ ದಹಿಸುತ್ತಿರುವ ತಾರಾಗಣವೇ ನನ್ನ ಹೃದಯವೆಂಬುದು ಭಾಸವಾಯಿತು!

4. ಜಗತ್ತು ಸ್ಥಬ್ದವಾದಾಗ ಜೀವ ಪಡೆವ ಈ ಮನದಾಳಕ್ಕೆ ನಿಶೆಯ ನಶೆಯು ತುಸು ಹೆಚ್ಚೇ ಮನದಟ್ಟು ಮಾಡಿಸಿದ ವಿಷಯವೆಂದರೆ ನಮ್ಮೆಲ್ಲರ ರಾತ್ರಿಗಳು ಒಂದೇ ಅಲ್ಲವೆಂದು !
ಈ ಮಧ್ಯೆ ಹೃದಯವ ಕಾಡುವ ಕಂಗಳವನ ಕೈಗಳಲ್ಲಿ ಒತ್ತೆ ಇಟ್ಟರೆ, ಅದನೆಂದಾರು ಹಿಂಪಡೆಯಬಹುದೆ?


Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ