ಒಲವು ಭೀಭತ್ಸ
1. ಒಲವೇ ನಿನ್ನ ರೂಪ ಯಾಕಿಷ್ಟು ಭೀಭತ್ಸ?
ಸೌಜನ್ಯವೆಂಬುದು ನಿನಗೆ ಕಾಣದೂರಿನ ಬಂಧುವೇ?
ನಿನ್ನ ಮೂಲವೇ ನಿರರ್ಥಕವೆಂಬ ಪ್ರಶ್ನೆಯಿಂದು ನನ್ನ ಎದುರು ಅವಿಚಲಿತ ದುಃಖದ ಸೋಗ ಧರಿಸಿ ನಿಂತಿದೆ !
ಈಗ ಹೇಳು ಭಾವನೆಗಳ ಭೋಗವೆಂಬುದು ದುರಂತವೇ?
ನಾನೇ ಕಟ್ಟಿದ ಪ್ರೇಮಸೌಧವದು,ಹೇಗೆ ಅದರ ನಾನು ಕೆಡವಲಿ?
ಇಂದಿಗೂ ಅಲ್ಲಿಯೇ ಕಂಬನಿಗಳ ತೋರಣಕಟ್ಟಿ ಕಣ್ಣು ಮಿಟುಕಿಸದೆ ಕಾಯುತ್ತಿರುವೆ!
ಪ್ರಾಸವಿಲ್ಲದ ಪ್ರಣಯ ತುಂಬಿದ ಕವಿತೆ ಹೇಳಲು ಪರಿತಪಿಸುತ್ತಿರುವೆ !
ತುಸು ನನ್ನ ನೀ ನೋಡ ಬಾರದೇ? ಪ್ರೇರೇಪಿಸಬಾರ ದೇ?
2. ವೇದಾಂತ ಕವಿತ್ವದ ಮಿಲನವೇ ಪ್ರೀತಿಯಂತೆ!
ಪ್ರಶಾಂತ ತನುವಿನ ತನ್ನತನ ಅದೆಂದೋ ಸಂಗ್ರ ಹಾಲಯದಲ್ಲಿ ಇಡುವ ಪಳಯುಳಿಕೆಯಾಗಿದೆ!
ಅಲ್ಲಿ ಹೃದಯವರಸಿ ಬಂದ ಭಗ್ನಮನಗಳಿಗೆ ಮೋಹವೆಂಬ ಹುಚ್ಚು ಕುದುರೆಯೊಂದು ಮಾಸಿಯೂ ಮೀರದ ಅಗಾಧ ವೇದವ ವಿವರಿಸುತ್ತಿರೆ,
ಸತ್ತ ಪ್ರೀತಿಯು ಮಂತ್ರಮುಗ್ದನಂತೆ ತಲೆದೂಗುತಿತ್ತಂತೆ!
3. ಪ್ರೇಮದ ತುತ್ತ ತುದಿಯ ನೋಡಿರುವರೆ ಯಾರಾದರೂ?
ನೋಡಿದ್ದರೆ ಆ ಪರಾಕಾಷ್ಟೆಯು ಶಬ್ಧಗಳಲ್ಲಿ ವಿವರಣಾತೀತವಾಗಿರುವುದೇ?
ಇತ್ತಕಡೆ ಎಲ್ಲೂ ಸಲ್ಲದ ಪ್ರೇಮಿಯ ಹಂಬಲದ ಹೊ ತ್ತಿಗೆಯು ಹರಿಯುತ್ತಿರೆ,
ಎತ್ತಿ ಎದೆಗಪ್ಪಲೂ ತಡೆ ಒಡ್ಡುವ ನೀನು, ಒಮ್ಮೆ ಆದರೂ ನನ್ನ ಸಂದೇಶಗಳ ಓದಬಾರದೇ?
Comments
Post a Comment