ಮೂಕಿ 🍂
ಸುತ್ತಲಾವರಿಸಿ ಕೂತಿದ್ದ ಮುಖಗಳು ಪ್ರವಹಿಸುತ್ತಿದ್ದ ಅದೆಷ್ಟೋ ಮಾತುಗಳು... ಹೊಂದಿಕೆಯಾಗುವಂತಹ ಹಾವಭಾವಗಳು.. ಆಕರ್ಷಣೆಯ ಕೇಂದ್ರ ಬಿಂದುವಾಗಲು ಕ್ಷಣ ಕ್ಷಣಕ್ಕೂ ಧ್ವನಿಯ ಏರಿಳಿತದ ಬಗ್ಗೆ ಗಮನ ಕೊಡುತ್ತಿದ್ದ ಜನರು..ಮಾತಿನ ಮುತ್ತ ಪೋಣಿಸಲು ಹಠ ಬಿದ್ದ ವರಂತೆ ಅಲಿಖಿತ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ರು...ಮಾತಿಗೊಂದು ಪ್ರತಿಮಾತು...ಆ ಪ್ರತಿಮಾತಿಗೊಂದು ಊರ್ಜಿತವೆಂಬಂತೆ ಬರುವ ಸಣ್ಣ ಪ್ರತಿಕ್ರಿಯೆಗಳು...ಕೆಲವೊಮ್ಮೆ ಗಾಳಿ ಬಂದಲ್ಲಿ ತೂರಿಹೋಗುವ ತರಗೆಲೆಗಳಂತೆ ಎಲ್ಲದಕ್ಕೂ ತಲೆದೂಗುವವರು ಇವರೇ.. ಇನ್ನೂ ಕೆಲವೊಮ್ಮೆ ವ್ಯವ ಧಾನ ಕಳೆದುಕೊಂಡ ವಿಮರ್ಶೆಯಲ್ಲಿ ತೊಡಗುವವರೂ ಇವರೇ.. ಅದೆಷ್ಟೋ ಅಕ್ಷರಗಳ ಜೋಡಣೆಯ ಉಗಿಬಂಡಿಯೊಂದು ಸಲೀಸಾಗಿ ಎಲ್ಲರನ್ನೂ ತಲುಪುತ್ತಿತ್ತು.. ನಿರರ್ಗಳವೆಂದರೆ ಅಪಚಾರ ವಾಗಲಿಕ್ಕಿಲ್ಲ... ಬಹುಶಃ ಜಗತ್ತಿನಲ್ಲಿ ಅತ್ಯಂತ ಸುಲಭ ಕಾಮಗಾರಿ ಎಂದರೆ ಮಾತಿನಿಂದ ಬೇರೆಯವರ ಮನ ಮೀಟುವುದು ಎಂದು ಅವಳು ತಿಳಿದಿದ್ದಳು. ಆದರೆ ಇಂದು ಅವರೆಲ್ಲರ ಮಾತುಗಳಲ್ಲಿ ಅವಳು ಕೇಳ ಬಯಸಿದ್ದು ಗತದಲ್ಲಿ ಅವಳಾದುತ್ತಿದ್ದ ಮಾತುಗಳ! ಕಣ್ಣರಿಸುತ್ತಿದ್ದದ್ದು ಅವಳ ಮಾತಿನ ಶೈಲಿಯ!ಅವಳ ಮಾತು ಅವರಲ್ಲಿ ಸಿಗದೇ ಇದ್ದರೂ ತಾನಿಂದು ಮೂಕಿಯಾಗಿರುವೆ ಎಂಬುದು ಕ್ಷಣ ಮಾತ್ರದಲ್ಲಿ ಅರ್ಥವಾಗಿತ್ತು..ಮಾತು ಬಂದರೂ ಮೂಕರಾಗುವುದು ವಿರಳಾತ...