ನಲ್ಮೆ ~ ಉಯ್ಯಾಲೆ
ಅಲ್ಲೊಂದು ಉಯ್ಯಾಲೆ ತೂಗುತ್ತಿತ್ತು.. ಜಗತ್ತೇ ನೋಡದ ಕಂದನೊಬ್ಬ ಜೀಕಿ ಎಲ್ಲವ ಕಣ್ತುಂಬಿಕೊಳ್ಳುವ ಭರದಲ್ಲಿದ್ದರೆ, ಜಗತ್ತೆಲ್ಲವ ನೋಡಿ ಹಣ್ಣಾದ ಜೀವವೊಂದು ಸಿಗದ ಅರ್ಥವೊಂದರ ಕಂದನ ಮುಖದಲ್ಲಿ ಹುಡುಕುತ್ತಿತ್ತು.. ಎಲ್ಲವನ್ನ ನೋಡಿಯೂ ಏನನ್ನೂ ನೋಡದೇ ಇರುವ ಜೀವ ಅಂದು ಮುಗ್ದತೆಯ ತೇಪೆಯೊಂದರ ಓಡುವ ಸಮಯಕ್ಕೆ ನೀಡಿತ್ತು .
ಬಾಗಿದ ಬೆನ್ನು, ಸುಕ್ಕುಗಟ್ಟಿದ ಚರ್ಮ ಆದರೆ ಮಾಸದ ನಗು! ಎನದರ ಪರಿವೆಯೇ ಇಲ್ಲದೆ ನಗುವಿನಿಂದ ಇನ್ನೊಂದು ಜೀವಕ್ಕೆ ಕಳೆತುಂಬಿಸುವ ಕಂದ! ಕೃಷ ಹೆಜ್ಜೆ ಆದರೂ ಓಡುವ ಧಾವಂತ! ಕಾಲೇ ಬರದ ಕಂದ,ಆದರೂ ಆತನಿಗೆ ಓಡುವ ತವಕ! ಬಾಳಿನ ವಿರುದ್ಧ ಧ್ರುವಗಳೆಡೆನೆ ಧಾವಿಸುತ್ತಿರುವ ಈರ್ವರು ಕೌ ತು ಅಡ್ಡದಾರಿಯಲ್ಲಿ ಬಂದು ನಿಂತಿದ್ದರು!
ಜೀವಮಾನದ ಚಿತ್ರದ ಸಾರವ ಭಟ್ಟಿ ಇಳಿಸಲು ಅಣಿ ಎಂಬಂತೆ ವೇದಿಕೆ ಸಜ್ಜಾಗಿತ್ತು! ಏನನ್ನೋ ಸಾಧಿಸಿದ ,ಕೊಂಚ ಕಳೆದುಕೊಂಡೆ ಎಂಬ ತರ್ಕವು ಮಮತೆಯ ರೂಪ ತಳೆದಿತ್ತು! ಪಯಣವ ಮುಗಿಸಲಿರುವ ಯತ್ರಿಕನೊಬ್ಬ ಪ್ರಥಮ ಹೆಜ್ಜೆಯ ನೆನಪಲ್ಲಿ ಇನ್ನೂ ಪ್ರಯಾಣ ಶುರು ಮಾಡದ ಉತ್ಸಾಹಿ ಪ್ರವಾಸಿಗನನ್ನು ದಣಿವರಿಯದ ಕಣ್ಣುಗಳಿಂದ ನೋಡುವಂತಿತ್ತು.. ಏತನ್ಮಧ್ಯೆ ಆಕಾಶಕ್ಕೆ ಜೀಕುವ ಉತ್ಸಾಹಿ ಕಂದ! ಕಣ್ಣಮುಂದೆಯಿದ್ದೂ ಕಾಣದ ಅದೆಷ್ಟೋ ವಿಷಯಗಳಿಗೆ ಪೂರ್ಣವಿರಾಮ ನೀಡಿದ ಕೈ ಯೊಂದು ಕಾಲದ ಕೈಯಲ್ಲಿ ಸೋತು ಇಂದು ಆತ್ಮವಿಮರ್ಶೆಯ ಮಾಡಿಕೊಳ್ಳುತ್ತಿತ್ತು! ಅಲ್ಲಿದ್ದ ಇಬ್ಬರೂ ಒಂದೇ ರೇಖೆಯ ಬಿಂದುಗಳು! ವಿಪರ್ಯಾಸ ವೆಂದರೆ ಒಬ್ಬರಿಗೆ ಉತ್ತರವೆಂದರೆ ಪ್ರಿಯ,ಇನ್ನೊಬ್ಬರಿಗೆ ದಕ್ಷಿಣ ಕೈ ಬೀಸಿ ಕರೆಯುತ್ತಿತ್ತು! ಅಣು ಅಣುವಲ್ಲಿನ ಬೆಸೆದ ಭಾವಕ್ಕೊಂದು ಅಲ್ಲಿ ತರ್ಜುಮೆಯ ಅವಶ್ಯಕತೆ ಖಂಡಿತ ಬೇಕಾಗಿರಲಿಲ್ಲ!
ವಯೋವೃದ್ಧ ಪಕ್ಷಿಯೊಂದು ತನ್ನ ಹಾರಾಟ ನಿಲ್ಲಿಸಿ ಗೂಡು ಬಿಡಲಿರುವ ಮರಿಹಕ್ಕಿಗೆ ರೆಕ್ಕೆಯನ್ನು ತಿದ್ದಿ ತೀಡಿ ಬಾಳೆಂಬ ಆಗಸಕ್ಕೆ ಸಿದ್ಧಗೊಳಿ ಸುತ್ತಿತ್ತು! ಅವರ ಕಂಗಳು ಹಾಗೂ ನಗು ಬೆರೆತ ಸಂಪರ್ಕದಾರಿಗಳ ಸವಿ ಹೇಳತೀರದು! ವರ್ಣನಾತೀತ!
ಹಿಂದುರಿಗಿ ನೋಡುವುದು ಎದೆಭಾರವೆನಿಸಿದರೂ ಇನ್ನೂ ಇಂಗದ ವ್ಯಾಮೋಹ!ಕಂದನನ್ನು ಪೊರೆ ಯುವುದೋ ಅಥವಾ ಕಂದನಲ್ಲಿ ಕಳೆದುಹೋದ ಬಾಲ್ಯವ ಹುಡುಕುವುದೋ ಅಖಚಿತ! ಆದರೂ ಓಡುವ ಜಗತ್ತು ಹಾಗೂ ಕಾಡುವ ಪಾತ್ರಗಳಿಂದ ಕ್ಷಣಮಾತ್ರದ ವಿಮುಕ್ತಿಯ ದೊರಕಿಸಿತ್ತು ಆ "ಉಯ್ಯಾಲೆ "!!!
Comments
Post a Comment