ಕೃರ್ತ - ಕಾರಣ!

ಮನಸ್ಸಿಗೆ ದಾರ್ಶನಿಕವಾಗುವ ತುಮುಲ
ಹುಡುಕಲು ಹೊರಟು ಮೂಲವನರಸಿ
ದಾರಿ ತಡೆದು ನಿಂತವಂತೆ ವಿಕಾರಗಳು
ತೀರದ ಋಣದ ವಕಾಲತು ವಹಿಸಿ!

ಜಿಜ್ಞಾಸೆಗೆ ತೂರಲ್ಪಟ್ಟ ಮನಸ್ಸಿಗೆ ತುಟಿಗಳ ಬಂಧನ,
ಮೌನದುಡುಗೆಯ ತೊಟ್ಟು ಪ್ರತಿಭಟಿಸದೇ..
ಅವು ಕೇಳಿದವಂತೆ ನೂರೆಂಟು ಸವಾಲುಗಳ ಮೌನಿಯಾಗು ನೀನೆಂದು ಬಂಧಿಗೆ..
ಈತನ್ಮದ್ಯೆ ಅಸಹನೆಯ ಬೇಡಿಗಳ ಕಲಕುವ ದ್ವನಿ ಕೊಂದೇಬಿಡಲು ಮನಸ್ಸ!!

ಮಾಯವಾದ ಘಳಿಗೆಯಲ್ಲಿ ತುಣುಕು ಜೀವವ ಅಂಗೈಲಿಡಿದು ಬತ್ತದ ದಾಹಿಯಂತೆ ಬಂಧಿ ಮನಸ್ಸು ಓಡೋಡಿ ಬಂದು ಚರಣವಿಲ್ಲದ ನೀಳ್ಗವನದ ಕಡುದಾರಿಯಲ್ಲಿ ಬಸವಳಿದಾಗ,
ಸಾವರಿಸಿಕೊಂಡಿತಂತೆ,ಮತ್ತೆ ಕಾಡಲು ಅದೇ ಪಾಶ..
ನೆನೆಯಲಿ ಕಾರಣವನ್ನೋ ಯಾ ಕೃರ್ತವನ್ನೋ?

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ