ಹರಿವು
ಪ್ರೀತಿ ನಶೆಯಂತೆ..ಶುದ್ಧ ಅಮಲು.ಏಕಂದರೆ ಇನ್ನೂ ಜತನವಾಗದು.ಪ್ರೀತಿಯ ಹರಿಯಬಿಟ್ಟರೆ ಅದರ ಸೆಳೆತ ಹೆಚ್ಚೋ ಅಥವಾ ಬಚ್ಚಿಟ್ಟು ಕೂಡಿಟ್ಟರೆ ಹೆಚ್ಚು ಪ್ರಛ್ಚನ್ನ ವೋ?ಇನ್ನೂ ತಿಳಿಯದೇ ಅರಿಯದೆ ನಿಂತಿರುವೆ.. ಆದರರಿಯದೂ..ಆದರೂ ಪ್ರೇಮಿಸುವೆ!
ನನ್ನ ಪ್ರೀತಿಗೆ ಹರಿವಿಲ್ಲವೆಂದೇ ಒಂದು ಪಕ್ಷ ಅಂದುಕೊಂಡರೆ ಆ ಪ್ರೀತಿಯಲ್ಲಿ ಮಂಟಪ ಕಟ್ಟಿಸಿ ನಿನ್ನನ್ನು ಇಡೀಯಾಗಿ ಅನುಭವಿಸಿವೆ! ಬಚ್ಚಿಟ್ಟ ಪ್ರೀತಿ ಹಕ್ಕನ್ನೀಯುತ್ತದೆ.ಅತ್ಯಂತ ಶ್ರೇಷ್ಠವಾದ ಪ್ರೀತಿಯ ಆದಿ ಕೂಡಾ ಹರಿಯುವಿಕೆಯನ್ನು ವಿರೋಧಿಸಿಯೇ ಅಲ್ಲವೇ? ಪ್ರೀತಿ ಹರಿಬಿಟ್ಟರೆ ಖಾಲಿತನ ಆವರಿಸಿ ಕಿತ್ತು ತಿನ್ನುತ್ತದೆ.ನಿನ್ನ ಪ್ರೀತಿ ಕಣಕಣದಲ್ಲೂ ಶೇಖರಿಸಿ ಮೊರೆಯಬೇಕು!
ಆದರೆ ಹರಿಯಬಿಡದಿದ್ದರೆ ನನ್ನಲ್ಲಿ ಬಚ್ಚಿಟ್ಟ ಪ್ರೀತಿಯ ಶಾಖ ನಿನ್ನನ್ನು ತಾಕುವುದಾದರೂ ಹೌದೇ? ನನಗೆ ಅಷ್ಟೊಂದು ನಶೆಯೇರಿದೆಯೇ?ಹರಿವು ಮಲೀನ ರಹಿತವಂತೆ!ಆದರೆ ನಾನಿಲ್ಲಿ, ನನ್ನಲ್ಲಿಟ್ಟುಕೊಂಡ ಪ್ರೀತಿ ಬಹಳ ಶುದ್ಧವಾದದ್ದು..ಹೊರಗಿನ ಕಿರಣ ಕೂಡ ಬೀಳದಂತೆ ಕಾಯುತ್ತಿರುವೆ!
ಆದರೂ ನಿನಗೆ ಈ ಅಪರಿಮಿತವಾದ ಆಸೆಯ ಮಿತಿ ಎಟುಕದು.ಸಾವಿಲ್ಲದ ಹಂಬಲ ನನ್ನದು. ಒಮ್ಮೆಲೇ ಎಲ್ಲವನ್ನೂ ನಿನ್ನ ಕೈಗಿತ್ತು ನಂತರ ಖಾಲಿತನವನ್ನು ಸಂತಸದಿಂದ ಅನುಭವಿಸಬೇಕೆಂದಿರುವೆ ..
ಪ್ರೀತಿ ಹುಟ್ಟುವುದು ಮಾಯೆ!ಆದರೆ. ಅದು ಸಾಯದೇ ಬದುಕಿ ಕಿತ್ತು ತಿನ್ನುತ್ತದೆ.ಅದು ಮಾಯೆಗೆ ತಿಳಿಯದ ಮಾಯೆ!ಆ ಅರಿಯದ ಶಕ್ತಿಗೆ ನಾವೆಲ್ಲ ಚುಕ್ಕಿಗಳಂತೆ..ಆ ಚುಕ್ಕಿಗೆ ಜೀವಿತಾವಧಿ ಎಷ್ಟೆಂದು ಹೇಳಬೇಕಾಗಿಲ್ಲ!
ಈ ಪ್ರೀತಿಯನ್ನು ಹೆದರೋ,ಆದರಿಸೋ ಬಚ್ಚಿಟ್ಟು ಶಾಖದ ಗುಳ್ಳೆಗಳೆದ್ದಿವೆ..ನೋವು ಒಸರುತ್ತದೆ..ಆದರೆ ಈ ನೋವಿಗೆ ಹೆದರಿ ಪ್ರೀತಿ ಹರಿಬಿಟ್ಟರೆ ಅದು ದಾರಿ ತಪ್ಪಿ ನನ್ನ ಹೃದಯವೇ ಸ್ಥಂಬಿಸುತಿತ್ತು..ಆ ನೋವಿಗೆ ಹೋಲಿಸಿದರೆ ಈ ನೋವು ಸಾವಿರ ಪಟ್ಟು ವಾಸಿ..ಈ ನೋವನ್ನು ಮುಂದೊಂದು ದಿನ ಸಾಕಿ ಸಲುಹಿ ಪ್ರೀತಿಯ ಹೆಮ್ಮರವನ್ನು ನಿನ್ನ ತಾಬೆಗೆ ನೀಡುವಾಗ ಮರೆತುಬಿಡುವೆ ♥️ಆ ನೋವನ್ನು ಮರೆಯಲು ಒಂದು ಅವಕಾಶವನ್ನು ನೀಡುವೆಯಾ?
Comments
Post a Comment