ಕಣಿವೆ


ಧಾವಿಸಬೇಕೆನಿಸುತಿದೆ ಈ ಮನ ಬೆಂಗಾಡ ಬಯಲ ಸೀಮೆ ಮೀರಿ ,
ಮೌನಗೀತವ ಮಾರ್ದನಿಸಬೇಕಿದೆ ನನ್ನಯದೆಂಬ  ಆ ಶೀತಲ  ಕಣಿವೆಗಳಲ್ಲಿ !! 
ಸೇರಬೇಕೆನಿಸುತಿದೆ ಎಂದೂ ಕೈಗೆಟುಕದ ಹುದುಗಿದ ಮನದಾಳದ ಹಸಿವ,
ಪಯಣಿಸಬೇಕೆಂದು ನಾನು ಗೊತ್ತು ಗುರಿಯಿಲ್ಲದ ವಿಳಾಸವ ತುರ್ತಿನಲಿ!!
ಬಹುಶಃ ತನುವು ಬಳಲಬಹುದು ಎಂದೂ ಗುರಿಯು ನನ್ನದಾಗದೆ
ಇದ್ದರೂ ಇರಲಿ, ನೋಡಬೇಕೆನಿಸುತಿದೆ ಹಾದಿಯ ಸುಂದರತೆಯ ಕರುಳ
ಅದು ನೀಡಲು  ಬೆಚ್ಚನೆಯ ಭಾವವೊಂದ!
ಮಥಿಸುವೆನು ನಾನು ಎಲ್ಲ ಅಸ್ಪಷ್ಟ ಮಂಥನಗಳ
ಹೃದಯಹೀನ ಹಾಳೆಗಳಲ್ಲಿ ಬರೆಯುವೆನು ಈ ದಿನಚರಿಗಳ
ಎಂದಾದರೊಮ್ಮೆ ಕಣಿವೆಯಂಚಿನಲಿ ಕೂತು ಕಮರಿದ ಕಥೆಗಳ ನೆನಪ  ಕಸ್ತೂರಿಯ ಹೀರುವೆ
ಅದೇ ಶೀತಲ ಕಣಿವೆಯಂಚಲ್ಲಿ!!!

Comments

Popular posts from this blog

ಇಷ್ಟಪಡೋದಾ?? ಇಷ್ಟವಾಗೋದಾ?

ಮಬ್ಬು

ಆಂತರ್ಯ