ಹಾಡಲು ಬಾರದ ಕೋಗಿಲೆ 💛
ಮೋಡವಿರದ ಬಾನಿನ ತಪ್ಪೇನು?ಹೂವು ಬಿಡದ ಗಿಡದ ಗತಿಯೇನು?ಹಾಡಲು ಬಾರದ ಕೋಗಿಲೆಯ ಕತೆಯೇನು? ಪ್ರಶ್ನೆ ಎಂಬುದು ಶರಧಿಯ ಅಲೆಗಳಂತೆ ಲೆಕ್ಕವಿಲ್ಲದಷ್ಟು ಅನಂತ.ಮನಸ್ಸಿನ ಗೋಡೆಗೆ ಬಂದು ಅಪ್ಪಳಿಸುತ್ತಲೇ ಇರುತ್ತದೆ.ಅಷ್ಟಕ್ಕೂ ಪ್ರಸ್ತುತ ಪ್ರಶ್ನೆ ಹಾಡಲು ಬಾರದ ಕೋಗಿಲೆಯೂ ಒಂದು ಕೋಗಿಲೆಯೇ? ಒಮ್ಮೆ ಈ ಕೋಗಿಲೆ ಕೂಡ ಒಡನಾಡಿಗಳಂತೆ ಹಾಡಲು ಪ್ರಯತ್ನಿಸಿತು, ಚೀರಿತು, ಕಣ್ ಪನಿಗಳ ಧಾರೆ ಹರಿಸಿತು,ಹಠ ಹಿಡಿಯಿತು,ವೃತ ಗೈದಿತು.. ಆದರೂ ಸ್ವರ ಬತ್ತಿಹೋದ ಕಂಠ ಅದರ ಪಾಲಿಗೆ ಬಂದಿತ್ತು.. ಅಷ್ಟಕ್ಕೂ ಕೋಗಿಲೆಯ ಕಾಯಕ ಕೇವಲ ಗಾಯನವೇ? ಜಗತ್ತು ಅದರ ವಿಭಜಿತ ವ್ಯಕ್ತಿತ್ವ ವನ್ನು ನೋಡಲು ತಿರಸ್ಕರಿಸಿದಂತಿದೆ! ಏಕಾಂತವನ್ನರಸಿ ಕೊಂಬೆಯ ತುದಿಗೆ ಕುಳಿತ ಕೋಗಿಲೆ ಕಾಣದ ಕಿವಿಗಳಿಗೆ ಇಂಪಿನ ತಂಪೆರೆಚಬೇಕೆ?ಅನುದಿನ ಹಾಡುವ ಬೇರೆ ಕೋಗಿಲೆಗಳ ಜೀವನದ ಒಳಅರ್ಥ ಅವು ಹಾಡುವ ಹಾಡಲ್ಲಿ ಅಡಗಿದೆಯೇ? ಸತ್ಯಕ್ಕೂ ಭೂತಗನ್ನಡಿ ಬೇಕೇ? ಕೋಗಿಲೆಗೆ ಗಾಯಕ/ಗಾಯಕಿ ಎಂಬ ಗುರುತಿನ ಹಣೆಪಟ್ಟಿ ಬೇಕೇ? ಪಟ್ಟ್ಟಿ ಕಳಚಿದ ಕೋಗಿಲೆ ನಿಜವಾಗಿಯೂ ಮುಕ್ತಾಕಾಶದಲ್ಲಿ ಬಹುಎತ್ತರಕ್ಕೆ ಹಾರುವ ಸ್ವತಂತ್ರಪಕ್ಷಿ!ಬಂಧನಗಳೆಲ್ಲವ ಕಿತ್ತೊಗೆದು ಮುಗಿಲೆತ...