Posts

Showing posts from December, 2022

ಕೃರ್ತ - ಕಾರಣ!

Image
ಮನಸ್ಸಿಗೆ ದಾರ್ಶನಿಕವಾಗುವ ತುಮುಲ ಹುಡುಕಲು ಹೊರಟು ಮೂಲವನರಸಿ ದಾರಿ ತಡೆದು ನಿಂತವಂತೆ ವಿಕಾರಗಳು ತೀರದ ಋಣದ ವಕಾಲತು ವಹಿಸಿ! ಜಿಜ್ಞಾಸೆಗೆ ತೂರಲ್ಪಟ್ಟ ಮನಸ್ಸಿಗೆ ತುಟಿಗಳ ಬಂಧನ, ಮೌನದುಡುಗೆಯ ತೊಟ್ಟು ಪ್ರತಿಭಟಿಸದೇ.. ಅವು ಕೇಳಿದವಂತೆ ನೂರೆಂಟು ಸವಾಲುಗಳ ಮೌನಿಯಾಗು ನೀನೆಂದು ಬಂಧಿಗೆ.. ಈತನ್ಮದ್ಯೆ ಅಸಹನೆಯ ಬೇಡಿಗಳ ಕಲಕುವ ದ್ವನಿ ಕೊಂದೇಬಿಡಲು ಮನಸ್ಸ!! ಮಾಯವಾದ ಘಳಿಗೆಯಲ್ಲಿ ತುಣುಕು ಜೀವವ ಅಂಗೈಲಿಡಿದು ಬತ್ತದ ದಾಹಿಯಂತೆ ಬಂಧಿ ಮನಸ್ಸು ಓಡೋಡಿ ಬಂದು ಚರಣವಿಲ್ಲದ ನೀಳ್ಗವನದ ಕಡುದಾರಿಯಲ್ಲಿ ಬಸವಳಿದಾಗ, ಸಾವರಿಸಿಕೊಂಡಿತಂತೆ,ಮತ್ತೆ ಕಾಡಲು ಅದೇ ಪಾಶ.. ನೆನೆಯಲಿ ಕಾರಣವನ್ನೋ ಯಾ ಕೃರ್ತವನ್ನೋ?

ಸಂಚಿಕೆ ♥️

Image
ಭಾವನೆಗಳಿಂದ ಕಟ್ಟಲ್ಪಟ್ಟ ದೇಹವೊಂದು ಪ್ರೀತಿಸಿತಂತೆ, ಪದೇ ಪದೇ,ಆದರೆ ಮಾತೇ ಆಡಲು ಬರದೆ! ಎದೆಗೂಡಲ್ಲಿ ಪ್ರವೇಶಕ್ಕೆ ತಡೆಯೊಡ್ಡಿ ಬೇಸರಿಸಿದನಂತೆ, ಮತ್ತದೇ ರೀತಿಯಲ್ಲಿ, ತುಸುವೂ ಯೋಚಿಸಲು ಬಾರದೇ!! ಕಣ್ಣಂಚಿನಲ್ಲಿ ನೀರು ಜಿನುಗಿದರೆ ಕಾರಣಗಳ ರತ್ನಗಂಬಳಿ ಹಾಸುವುನಂತೆ, ಸಂತೈಸಲು ದಿಕ್ಕೆಟ್ಟ ದಾರಿಮರೆತ ಮರಿ ಹಕ್ಕಿಯಂತೆ! ಕಾಡುವ ಕಂಗಳ ಸ್ಮೃತಿ ಪಟಲದಲ್ಲಿ ಚಿತ್ತಾರಗೈವ ಆಸೆ ಅವನಿಗೂ ಅಂತೆ, ಆದರೆ ಕುಂಚ ಮರೆತ ಅಂತರ್ಮುಖಿ ಕಲಾವಿದ ಕೈಚೆಲ್ಲಿರಲು!! ಹೇಳಿದರೆ ಪ್ರೀತಿಯಲ್ಲ ಹೇಳದೆಯೂ ಮೋಹಿಸಬಹುದಂತೆ ಎಂದು ಅರಹುವನು, ತೀವ್ರಗತಿಯ ಮೋಹದ ಬೂದಿಯ ಮೈಗರಿಚಿಕೊಂಡು!  ಪ್ರೀತಿಯ ಪರಿಭಾಷೆಯೇ ಅವ್ಯಕ್ತವೆಂದು ಮೌನಿಯಾಗುವನಂತೆ, ಅರ್ಥೈಸಿಕೊಳ್ಳಲಾಗದ ದಡ್ಡಿಗೆ ಹೃದಯವ ಬಳುವಳಿಯನ್ನಿತ್ತು!! ಹಠವ ಸಾರೋ ಈ ವೇದಾಂತಿಯು ಮನಸೋ ಇಚ್ಛೆ ಪ್ರತಿಪಾದಿಸಿದನಂತೆ ತನ್ನದೇ ಹಾದಿಯಲ್ಲಿ ಪ್ರೇಮವ, ಬೇರೆಯವರ ಹೃದಯವ ಪಣಕಿಟ್ಟು!! ಆಹುತಿಯ ಬಲೆಗೆ ಬೀಳಲು ಅರ್ಪಿಸಿದರಂತೆ ಜೀವಶ್ರುತಿಯ ಘಂಟಾಘೋಷವಾಗಿ, ಮರೆಯಲಾಗದ ಅಧ್ಯಾಯ ಸಂಚಿಕೆಯಾಗಿ ಪ್ರವಹಿಸಲು!! ಈ ಛಲಗಾರ ಮೌನಿಯ ಮೇಲೆ ಬತ್ತದ ಪ್ರೇಮದ ಸೆಲೆಯಂತೆ ಪ್ರೀತಿಸಿದ ಹುಡುಗಿಗೆ,ಹೃದಯವ ಸಂಪರ್ಕಕ್ಕೆ ಸಿಗದ ದ್ವೀಪವನ್ನಾಗಿಸಲು!! ಆತನರಿತು ಎಲ್ಲವನರಿಯುವ ಹೆಬ್ಬಯಕೆಯಂತೆ ಸೋಲನರಿಯದ ಮಬ್ಬಿಗೆ, ತಿಳಿದೂ ಸಹ ಎಂದಿಗೂ ಪರಿಪೂರ್ಣವಾಗದ ತನ್ನಾಸೆಯ ವಿಶ್ವಕೋಶ ಅವನೆಂದು!!!

ಆಂತರ್ಯ

Image
                       ಒಳ್ಳೆ ಪ್ರೇಮಿಗಳು ಸಿಗೋದು ಕಷ್ಟ.ಅವರ ಮೇಲೆ ಕತೆ ಬರೆದರೆ ಜನ ಅದನ್ನ ಓದುತ್ತಾರ?ದಂತಕತೆ ಅಂತ ಅನಿಸುತ್ತಾ?ಈ ತರಹದ ಪ್ರೇಮಿಯ ಪ್ರೇಮ ಪತ್ರ ಓದಿ ಕಣ್ಣಾಲಿಗಳು ಒದ್ದೆ ಆಗುತ್ತಾ? ನನ್ನದೇನೋ ಎಂಬ ಭಾವ ಬೆಳೆಯುತ್ತಾ? ಇಂತಹ ಪ್ರೀತಿಗೆ ಬೆಲೆ, ಆಕಾರವಿಲ್ಲದಿದ್ದರೆ ಇನ್ನು ಕಾಡ್ಗಿಚ್ಚಿನಂತೆ  ಅಣು ಅಣುವಿಗೂ  ಹರಡಿರುವ ವಿರಹಕ್ಕುಂಟೆ?                 ವಿರಹದಲ್ಲಿ ನೆನಪು ದುಃಖವನ್ನು ಉಮ್ಮಳಿಸಿ ತರದಿದ್ದರೆ,ಎದೆಯ ಬಯಲಿನಲ್ಲಿ ತೇಲಿಬಂದ ಪ್ರೀತಿ ಗಾಳಿ ಮಿತ್ಯವೇ?ಪ್ರೀತಿ ಎಷ್ಟು ತಂಪು ಅನಿಸಿತ್ತೋ,ವಿರಹ ಯಾಕೆ ಇನ್ನೂ ತೀವ್ರವಾಗಿ ಕಿತ್ತು ತಿನ್ನುತ್ತಿಲ್ಲ?ಪ್ರೀತಿ ಮಾಸಿದ ಮೇಲೆ ಕಲೆಯೇ ಇಲ್ಲವೆಂದರೆ,ಒಂದು ಕಾಲದ ಅಸ್ತಿತ್ವ ಸುಳ್ಳೇ?                ಬದುಕ ಸವೆಸಲು ಪ್ರತಿಕ್ಷಣದ ಸಾಕ್ಷಿ ಬೇಕೇ? ಇಲ್ಲವಾದ ಪ್ರೀತಿ ಅನುಕ್ಷಣ ಸಾಕ್ಷಿ ಬೇಡಿತ್ತು!ಪ್ರೀತಿಯ ಧಿಕ್ಕರಿಸಿದವರು ಶಕ್ತಿಶಾಲಿ ಆಗ್ತಾರಾ?ಅಥವಾ ಗೊಡ್ಡು ತೋರ್ಪಡಿಕೆಯ ಪರಮಾವಧಿಯಾ?ಹಳೆ ನೆನಪುಗಳು ಸಮುದ್ರದ ಅಲೆಯ ತರ ವಿರಾಮವಿಲ್ಲದೇ ಬಂದಪ್ಪಳಿಸುತ್ತಲೇ ಇರಬೇಕಾ?ಬರದೇ ಇದ್ದರೆ?                ಪ್ರೀತಿ ಅಂಗಡೀಲಿ...