ಲೇವಡಿ 🍁
ಎದುರೀಜಿದ್ದೆಲ್ಲ ಪ್ರವಾಹಗಳ.ಯಾವುದು ನೇರ , ಸುಲಭ ಎಂದೆನಿಸೊಲ್ಲ.ಎಲ್ಲವೂ ಹಳಸದ್ದು.ತಿರುವು ಬಯಸದವರ ಬಾಳಿಗೆ ದೂರದಿಂದಲೂ ಸಹ್ಯವಲ್ಲ.ಮುಂದಿನ ನಡೆ ಎಂದರೆ ಅದು ಲೇವಡಿ.ಈ ಬದುಕಿನ ಲೇವಡಿ.ಜಗದ ಲೇವಡಿ. ಲೇವಡಿಗೆ ತುತ್ತಾಗುವ ಹಂತಕ್ಕೆ ಬಂದು ಮುಟ್ಟಿತಾ ಮಾನವನ ಬದುಕು?ಬಹು ಅಪರೂಪವಾದದ್ದಂತೆ ಮನುಜ ಜನ್ಮ ಪಡೆಯುವ ಜೀವ.ಅಷ್ಟೊಂದು ಪುಣ್ಯದ ಕೊಡಪಾನ(?) ತುಂಬಿರಬೇಕಂತೆ.ಇಲ್ಲೂ ಲೇವಡಿ.ಅಷ್ಟಕ್ಕೂ ಸ್ಥೂಲವಾಗಿ ಪಕ್ಷಿನೋಟಕ್ಕೆ ಕಂಡದ್ದು ಬದುಕೇ ಒಂದು ಮೋಡವಿಲ್ಲದ ಬಾನಿನಂತೆ. ಮೋಡಗಳೇ ಇಲ್ಲದೆ ಪರಿ ತ್ಯಕ್ತ ಅಂತಲೋ ಅಥವಾ ಮೋಡಕ್ಕೆ ತನ್ನಂಗಳವ ಬಿಟ್ಟುಕೊಟ್ಟು ಅಸ್ತಿತ್ವವಿಲ್ಲದೇ ಎಲ್ಲಿಗೂ ಸಲ್ಲದ್ದು ಎಂದು ಹೇಳಬಹುದೇ?ಎರಡೂ ಸತ್ಯ.ಎರಡೂ ಸುಳ್ಳು.ಈ ದ್ವಂದ್ವ,ಲೇವಡಿಗಳ ಗುರು,ಗುರಿ ಎರಡೂ ಬದುಕೇ.ಮತ್ತೆ ಬೇರಾರಲ್ಲ. ಎಲ್ಲವೂ ಕ್ಷುದ್ರ ಚಿಂತನೆ.ದುಃಖದ ಮಡುವಲ್ಲಿ,ಋಣಾತ್ಮಕವಾಗಿ, ವೇದನಾತ್ಮಕ ಯೋಚನೆಗಳಲ್ಲೇ ಬದುಕುತ್ತಿರುವ ನಮಗೆ ಸುಸ್ತು ಎಂಬುದು ಆಗುವುದಿಲ್ಲವೇ?ಅಥವಾ ಇದೇ ವಾಸ್ತವ ಎಂದು ಒಪ್ಪಕೊಂಡಿದ್ದಾಗಿದೆಯೇ?ತೀಕ್ಷ್ಣ ಭಾವನೆಗಳ ಬಾಣಕ್ಕೆ ತುತ್ತಾಗುತ್ತಾ ಇದ್ದೀವ...