Posts

ಮಬ್ಬು

Image
              ಅದೀಗ ಮಬ್ಬು. ಬಿಸಿಯುಸಿರ ಮಾರುತಕ್ಕೆ ನೆನಪೆಲ್ಲ ಅಸ್ಪಷ್ಟ. ನನ್ನ ಹಾಗೂ ಸ್ತಿಮಿತದ ನಡುವೆ ಗೋಡೆಯ ದಿಗ್ಬಂಧನವನ್ನು ಆತನ ಬಾಹುಬಂಧನ ರೂಪಿಸಿತ್ತು.ಅನುಭವಿಸಿಯೇ ತೀರಬೇಕು ಎಂಬ ಅತೀವ ಹಪಾಹಪಿ. ಹೋಗಿದ್ದೆ ನಾನು, ಆತನುಲಿದ ಮಂತ್ರಕ್ಕೆ! ಮೋಡಿಗೊಳಗಾದ ಮಳ್ಳಿಯಂತೆ!              ಅಷ್ಟಕ್ಕೂ ಭಾವಗಳ ಅನುವಾದಕ್ಕೆ ಬಿಗಿದಪ್ಪುವಿಕೆ ಅಗತ್ಯವೇ? ಮನಸ ಬಯಕೆ ನನಸಾಯಿತೆಂಬ ಮೋಹರೆ ಅದು? ಸಾಲಿನಲ್ಲಿ ಬಂತು,ಆವರಿಸಿತು.. ಓಡುತ್ತಿತ್ತು..ನನ್ನನ್ನೂ ಸೇರಿ.ಕೊನೆಯೇ ಇಲ್ಲದ ಸುಖವೆಂದು ಅಭಿಪ್ರಾಯಿಸಿತು.           ಕರಗುತ್ತಿದ್ದೆ ಬೆಳಗಿನ ಕಿರಣಗಳಿಗೆ ಮೈಯೊಡ್ಡಿ ಬೆತ್ತಲಾದ ಇಬ್ಬನಿಗಳಂತೆ. ಮರೆತೆ ಕಾಮನಬಿಲ್ಲು ತಾತ್ಕಾಲಿಕವೆಂಬುದ. ಅನುಭವಿಸಬೇಕು ಎಂದು ಕೊಂಡಿದ್ದೆ , ಅನುಭವಿಸಿದೆ , ಈಗಲೂ ಅನುಭವಿಸುತ್ತಲೇ ಇರುವೆ! ಏನನ್ನು (?)               ಆತ ಮರೆಯುವುದರ ಮುಖಾಮುಖಿ ಮಾಡಿಸಲ್ಲೇ ಇಲ್ಲ ಕಡೆಗೂ. ಇದ ನಿನ್ನೆದೆಯ ಹೃದಯದಲ್ಲಿ ಕೆತ್ತಿಕೊ ಎಂದರಹಲೂ ಇಲ್ಲ.ನೆನಪಿನ ಅವಶೇಷಗಳಲ್ಲಿ ಸಮಾಧಿಯಾದ ಕತೆಗಳಲ್ಲಿ ಇದೂ ಒಂದಾಗಬಾರದೇ? ಉತ್ತರಕ್ಕಿಂತ ಪ್ರಶ್ನೆ ಸುಲಭ.ಪ್ರಶ್ನೆಗಳು ಮಿಂಚಾಗಿ ಏಕೆ ತಾಕುತ್ತವೆ? ನನ್ನನ್ನೇಕೆ ಮೂಕವಾಗಿಸುತ್ತಿವೆ? ಮಬ್ಬಾದ ಘಟನೆಗಳ  ಸ್ಪ...

ಕಣಿವೆ

Image
ಧಾವಿಸಬೇಕೆನಿಸುತಿದೆ ಈ ಮನ ಬೆಂಗಾಡ ಬಯಲ ಸೀಮೆ ಮೀರಿ , ಮೌನಗೀತವ ಮಾರ್ದನಿಸಬೇಕಿದೆ ನನ್ನಯದೆಂಬ  ಆ ಶೀತಲ  ಕಣಿವೆಗಳಲ್ಲಿ !!  ಸೇರಬೇಕೆನಿಸುತಿದೆ ಎಂದೂ ಕೈಗೆಟುಕದ ಹುದುಗಿದ ಮನದಾಳದ ಹಸಿವ, ಪಯಣಿಸಬೇಕೆಂದು ನಾನು ಗೊತ್ತು ಗುರಿಯಿಲ್ಲದ ವಿಳಾಸವ ತುರ್ತಿನಲಿ!! ಬಹುಶಃ ತನುವು ಬಳಲಬಹುದು ಎಂದೂ ಗುರಿಯು ನನ್ನದಾಗದೆ ಇದ್ದರೂ ಇರಲಿ, ನೋಡಬೇಕೆನಿಸುತಿದೆ ಹಾದಿಯ ಸುಂದರತೆಯ ಕರುಳ ಅದು ನೀಡಲು  ಬೆಚ್ಚನೆಯ ಭಾವವೊಂದ! ಮಥಿಸುವೆನು ನಾನು ಎಲ್ಲ ಅಸ್ಪಷ್ಟ ಮಂಥನಗಳ ಹೃದಯಹೀನ ಹಾಳೆಗಳಲ್ಲಿ ಬರೆಯುವೆನು ಈ ದಿನಚರಿಗಳ ಎಂದಾದರೊಮ್ಮೆ ಕಣಿವೆಯಂಚಿನಲಿ ಕೂತು ಕಮರಿದ ಕಥೆಗಳ ನೆನಪ  ಕಸ್ತೂರಿಯ ಹೀರುವೆ ಅದೇ ಶೀತಲ ಕಣಿವೆಯಂಚಲ್ಲಿ!!!

ಬಿಡಿ ಕಾಗದ

Image
೧. ಹೇ ಜೀವ ಏತಕ್ಕಾಗಿ ಆತನನ್ನೇ ಅರಸಿರುವೆ? ಚಂದ್ರನ ತುಣುಕಿಗೆಂದು ಹುಚ್ಚು ಕುದುರೆಯೊಂದನ್ನು ನೀನೇಕೆ ಏರಿರುವೆ? ಪ್ರಾಯಶಃ ಮಾದಕ ಗಾಳಿಯಂತೆ ಮಾಯಾಂಗನೆ ನೀನು ಇನ್ನೂ ಹೇಳಲೆಂದರೆ ಭಾವನೆಗಳ ಹೆಪ್ಪು ಹಾಕಿದ ಬಂಡೆ ನೀನು. ದಣಿವೆಂಬುದು ನಿನಗರಿಯದೆಂದು ಬಿಂಬಿಸುವೆಯಾ? ಅದೆಷ್ಟೆಂದು ಬಚ್ಚಿಟ್ಟು ಕೂರುವೆ?ಇಲ್ಲಿ ಬಂದು ಹಗುರಾಗಬಾರದೇ? ಬೇರೆಲ್ಲೂ ಶರಣಾಗಬಾರದೆ? ೨.ಆರಾಧಿಸುವ ಶೈಲಿ ಬೇರೆಯದಾದರೆ ಬಹುಶಃ ನನ್ನೀ ಬಯಕೆಯ ಆಲಾಪ ಅವನ ದಡಕ್ಕೆ ಅಪ್ಪಳಿಸಬಲ್ಲದು! ಆದರೆ,ಆತ ದಿನ ನಿತ್ಯ ಅಲ್ಲೇ ಬಂದು ಹಾಜರಿಯನ್ನೀಯುವನೆ? ಪ್ರೀತಿಯ ಧಾತುವನ್ನು ಸಿಂಗರಿಸಿ ಕಳಿಸುವೆ ಈಗ ಸ್ವಾರ್ಥಕ್ಕೆಂದು ಹಠಮಾರಿಯಾಗಿಹೆ,ಒಂದಾದರೂ ಪ್ರತಿ ಉತ್ತರ ಬರಬಾರದೇ? ೩.ಅತಿಯಾದ ಒಲವು ಎಷ್ಟು?ಅದು ಅಪರಿಮಿತವೋ, ಅಗಣಿತವೋ, ಅನಂತವೋ? ಅದಕ್ಕೂ ಮೀರಿ,ಊಹೂ ಗೊತ್ತಿಲ್ಲ... ಗೊತ್ತಾದರೂ,ಸಂಖ್ಯೆಯಲ್ಲಿ ಸೋಲುವೆ! ಪ್ರೇಮದ ದಾರಿಯಲ್ಲಿ ಬಳಲಿ ಇಲ್ಲೂ ಸೋಲಲಾರೆ! ಬದಲಿ,ಆತನಿಗೆ(ಆತನ ಪ್ರೀತಿಗೆ) ಸೋತು ಇಲ್ಲಿ ಗೆಲ್ಲಬೇಕೆಂದಿರುವೆ!! ನಾನಿನ್ನು ಸೋಲಿನ ಮನೆಯ ಮೆಟ್ಟಿಲನ್ನು ತುಳಿಯಲಾರೆ! ಅಸ್ತಿತ್ವವಿಲ್ಲದ,ಅಸ್ತಿತ್ವ ಕಳೆದುಕೊಂಡ ಬಾವಿಯಲ್ಲಿ ಬಿದ್ದ್ದ ಚಂದ್ರಮ ನಾನಾಗಲಾರೆ. ೪.ಪ್ರೀತಿ ಒಸರಿ ಮುಗಿಯಿತು,ಮಾತನಾಡಲು ಬಹಳಷ್ಟಿದೆ ಅಥವಾ ಮಾತನಾಡಲು ಏನೂ ಉಳಿದಿಲ್ಲ. ಬಿದಿಕಾಗದಗಳ ಚೂರನ್ನು ಆಯ್ದುಕೊಂಡಿಹೆ ಟೊಳ್ಳು ಹೃದಯದ ಮೇಲೆ ಅವುಗಳ ತೇಪೆ ಹಾಕಿಹೆ ಹಾನಿಯಾಗಲಿರದೆಂದು! ಮುಗಿದಿದೆಯಲ್...

ಹರಿವು

Image
ಪ್ರೀತಿ ನಶೆಯಂತೆ..ಶುದ್ಧ ಅಮಲು.ಏಕಂದರೆ ಇನ್ನೂ ಜತನವಾಗದು.ಪ್ರೀತಿಯ ಹರಿಯಬಿಟ್ಟರೆ ಅದರ ಸೆಳೆತ ಹೆಚ್ಚೋ ಅಥವಾ ಬಚ್ಚಿಟ್ಟು ಕೂಡಿಟ್ಟರೆ ಹೆಚ್ಚು ಪ್ರಛ್ಚನ್ನ ವೋ?ಇನ್ನೂ ತಿಳಿಯದೇ ಅರಿಯದೆ ನಿಂತಿರುವೆ.. ಆದರರಿಯದೂ..ಆದರೂ ಪ್ರೇಮಿಸುವೆ! ನನ್ನ ಪ್ರೀತಿಗೆ ಹರಿವಿಲ್ಲವೆಂದೇ ಒಂದು ಪಕ್ಷ ಅಂದುಕೊಂಡರೆ ಆ ಪ್ರೀತಿಯಲ್ಲಿ ಮಂಟಪ ಕಟ್ಟಿಸಿ ನಿನ್ನನ್ನು ಇಡೀಯಾಗಿ ಅನುಭವಿಸಿವೆ! ಬಚ್ಚಿಟ್ಟ ಪ್ರೀತಿ ಹಕ್ಕನ್ನೀಯುತ್ತದೆ.ಅತ್ಯಂತ ಶ್ರೇಷ್ಠವಾದ ಪ್ರೀತಿಯ ಆದಿ ಕೂಡಾ ಹರಿಯುವಿಕೆಯನ್ನು ವಿರೋಧಿಸಿಯೇ ಅಲ್ಲವೇ? ಪ್ರೀತಿ ಹರಿಬಿಟ್ಟರೆ ಖಾಲಿತನ ಆವರಿಸಿ ಕಿತ್ತು ತಿನ್ನುತ್ತದೆ.ನಿನ್ನ ಪ್ರೀತಿ ಕಣಕಣದಲ್ಲೂ ಶೇಖರಿಸಿ ಮೊರೆಯಬೇಕು! ಆದರೆ ಹರಿಯಬಿಡದಿದ್ದರೆ ನನ್ನಲ್ಲಿ ಬಚ್ಚಿಟ್ಟ ಪ್ರೀತಿಯ ಶಾಖ ನಿನ್ನನ್ನು ತಾಕುವುದಾದರೂ ಹೌದೇ? ನನಗೆ ಅಷ್ಟೊಂದು ನಶೆಯೇರಿದೆಯೇ?ಹರಿವು ಮಲೀನ ರಹಿತವಂತೆ!ಆದರೆ ನಾನಿಲ್ಲಿ, ನನ್ನಲ್ಲಿಟ್ಟುಕೊಂಡ ಪ್ರೀತಿ ಬಹಳ ಶುದ್ಧವಾದದ್ದು..ಹೊರಗಿನ ಕಿರಣ ಕೂಡ ಬೀಳದಂತೆ ಕಾಯುತ್ತಿರುವೆ! ಆದರೂ ನಿನಗೆ ಈ ಅಪರಿಮಿತವಾದ ಆಸೆಯ ಮಿತಿ ಎಟುಕದು.ಸಾವಿಲ್ಲದ ಹಂಬಲ ನನ್ನದು. ಒಮ್ಮೆಲೇ ಎಲ್ಲವನ್ನೂ ನಿನ್ನ ಕೈಗಿತ್ತು ನಂತರ ಖಾಲಿತನವನ್ನು ಸಂತಸದಿಂದ ಅನುಭವಿಸಬೇಕೆಂದಿರುವೆ .. ಪ್ರೀತಿ ಹುಟ್ಟುವುದು ಮಾಯೆ!ಆದರೆ. ಅದು ಸಾಯದೇ ಬದುಕಿ ಕಿತ್ತು ತಿನ್ನುತ್ತದೆ.ಅದು ಮಾಯೆಗೆ ತಿಳಿಯದ ಮಾಯೆ!ಆ ಅರಿಯದ ಶಕ್ತಿಗೆ ನಾವೆಲ್ಲ ಚುಕ್ಕಿಗಳಂತೆ..ಆ ಚುಕ್ಕಿಗೆ...

ಪ್ರಶ್ನೆ

Image
ಪ್ರಶ್ನೆ? ಹೂ..ಪ್ರೇಮದ ಉತ್ಕಟತೆಯನ್ನು  ಪ್ರಶ್ನಿಸುತ್ತಲೇ ಇದ ಗೀಚುತ್ತಿರುವೆ! ಪ್ರಶ್ನೆ ತಪ್ಪಾ? ನನ್ನ ಪ್ರೇಮವ ಅಳೆಯುವುದು ತಪ್ಪಾ? ಅಥವಾ ಸ್ವಾಸ್ಥ್ಯ ಮೀರಿ ಮೂಲೆ ಗುಂಪಾದರೂ ಗತ ಜೀವಿ ಪ್ರೇಮವ ಸರಿಯಾಗಿ ಆದರಿಸದೇ ಇದ್ದ ನಾನು ಶಿಕ್ಷೆಗೆ ಒಳಗಾಗಬೇಕಾ? ನೀನೇ ಹೇಳು! ಆ ಶಿಕ್ಷೆಗಿಂತ ಪ್ರಶ್ನಿಸಿ ನಿನ್ನ ಪರಿಧಿಯಲ್ಲಿ ಹುಂಬ ಪ್ರಶ್ನೆಗಾತಿ ಆಗುವುದೇ ಒಳಿತು.ನಿನ್ನ ಹುಸಿಗೋಪದ ಶಿಕ್ಷೆ ಮಹಾಪ್ರೀತಿ ನನಗೆ. ನಿನ್ನೊಟ್ಟಿಗೆ ಪ್ರೇಮನೌಕೆ ಹತ್ತಿದಾಗ ಇದ್ಯಾವ ನಾವಿಕನೆಡೆಗೆ ನನ್ನ ಗುಬ್ಬಿ ಹೃದಯವ ತೂರಿ ಬಿಟ್ಟೆ ಅನಿಸಿತ್ತು..ಆದರೆ ನಿನ್ನ ಕೋಪವಿಲ್ಲದೆ ನೀನೆರೆವ ತುಸು ಪ್ರೀತಿ ಬಹು ಸಪ್ಪೆ!ನನ್ನಯ ಬಯಕೆಯೂ ಪೂರೈಸುವುದಿಲ್ಲ.. ನಿನಗೆಂದೇ ಮೀಸಲಿರುವ ಹಲವು ಮಜಲುಗಳಿವೆ..ಹೇಳಿದರೂ ಕೇಳದೇ ಹೀಗೆ ಹತ್ತು ಹಲವು ರೀತಿಯಲ್ಲಿ ಮತ್ತದೇ ರೀತಿಯಲ್ಲಿ ಹರಿಬಿಡುವೆ.ನಿನ್ನೆಡೆಗೆ ನನಗಿರುವುದು ಎಂದೂ ಬತ್ತದ ಕಡಲು. ಎಂದೆಂದಿಗೂ ದೃಢವಾಗಿರುವ ಗಿರಿ.. ಸುಸ್ತಾಗದೆ ಚಲಿಸುವ ಮೋಡಗಳು..ಸದಾ ಹೂವನ್ನೇ ಹಿಂಬಾಲಿಸಿ ಹೀರುವ ದುಂಬಿಗಳು..ಇವುಗಳಂತೆ ನನ್ನ ಪ್ರೀತಿ..ಅಮರ ಪ್ರೇಮವ,ಪ್ರೇಮದ ಇರುವಿಕೆಯ ಪ್ರಶ್ನಿಸಿ ಪ್ರೇಮ ಸೌಧವ ಕೆಡುವುವೆಯಾ ಎಂದು ನೀನು ಹೇಳುವೆ..ಆದರೆ ತಳಮಳವಿಲ್ಲದ ಪ್ರೀತಿ ಎತ್ತಣದು? ಈ ಪರಿಶೀಲನೆ ಒಂದು ವಿಕೃತ ಸುಖ!ನಿನ್ನಂತಹ ಜಾಣ ಕಿವುಡರಿಗೊಂದು ಬಹಿರಂಗ ಆಹ್ವಾನ!ಆಹಾ,ಇದೇನು ಎಲ್ಲ ಧಾರೆಯೆರೆದ ನಂತರವೂ ಇನ್ನೇನೋ ಹತ್ತುಹಲವುಗಳ ಉಪೇಕ್ಷ...

ಅರಂಧತಿಯ ಮೌನ

Image
             ಅಲ್ಲಿ ಬೆಳಕು ಸತ್ತಿತ್ತು.ಬಾಗಿಲುಗಳ ಹಿಂದಿನ ಕಿರಣಗಳ ಕತ್ತಲೆಯ ಹಸಿವು ಬಗೆದು ತಿಂದು ಮುಗಿಸಿತ್ತು.ಆದರೂ ತೀರದ ಹಸಿವು. ಅರುಂಧತಿಯ ಮೌನದ ಹಸಿವಿನಂತೆ.ಎದೆಯ ಆಳಕ್ಕೆ ಇಳಿದಷ್ಟೂ. ಟಿಸಿಲಾಗಿ ಒಡೆದ ಆತನ ನೆನಪು.ದಿನವೂ ಆಳವನ್ನು ಅರಿದು ಹಸಿವು ಶಮನವಾಗದಿರುವುದು ಪದ್ಧತಿ.                 ಕತ್ತಲು ಕವಿದ ಬಾಗಿಲ ದಿಟ್ಟಿಸಿ ನೋಡಿದವಳ ಕಣ್ಣ್ಣೀರ ಹನಿ ತಾಳ್ಮೆ ಕಳೆದುಕೊಂಡು ಗಲ್ಲಗಳ ತೊಯ್ದಿತ್ತು.ಆತ ನೆನಪಿನಂಗಳದ ಅತ್ತಕಡೆ ನಿಂತು ನಕ್ಕ ಕ್ಷಣವೇ ಆಕೆಯ ಕಣ್ಣೀರಿನ ಜೀವಜಲ ಬರುವ ವಿರಹದ ಕಡು ಬೇಸಿಗೆಗೆ ಆವಿಯಾಗಿ ಅರ್ಪಣೆ ನೀಡಿತ್ತು.          ಅಂತಹ ಕತ್ತಲ ಸೀಳಿಯೇ ಆತ ಕಾಲಿಟ್ಟಿದ್ದು.. ಅವಳೆದೆಯ ಅಂಗಳಕ್ಕೆ..ಅದೇ ರಂಗಮಂದಿರದ ಪಾತ್ರವಾಗಿ.ಅವಳ ಅಚ್ಚರಿ ತುಂಬಿದ ಅಗಲ ಕಣ್ಣುಗಳ ನಾಚಿಕೆಯ ದೆಸೆಯಿಂದ ಕೆಳಗೆ ನೋಡುವಂತೆ ಮಾಡಿದ್ದು ಅವನ ಕ್ಷುದ್ರ ತೇಜಸ್ಸು..ಮುಂದೊಂದು ದಿನ  ಬದುಕಿನ ಎಲ್ಲ ಬಣ್ಣಗಳೂ ಕರಡಿ ಮಾಸಿ ಹೋಗುವಂತೆ ಮಾಡಿದ ಯಾರೂ ಅರಿಯದ ಕ್ಷುದ್ರ ತೇಜಸ್ಸು..ಅನುದಿನವೂ ಬರಿಯ ಬಾಳನು ದಿಟ್ಟಿಸಿ ನೋಡುವ ಕ್ರಮಕ್ಕೆ ಆದಿಯನ್ನ ಬರೆದವನು.ಪಾತ್ರ ಪಾತ್ರವಾಗಿ ಪತ್ರ ಪ್ರೇಮವಾಗಿ ಪ್ರೇಮ ಪಾಶವಾಗಿ ಪಾಶ ಪ್ರಾಣವಾಗಿ ಪ್ರಾಣವೇ ತನ್ನ ಆಟ ಮುಗಿಸಿ ಮುಂದಿನೂರಿಗೆ ಹೋಗುವ ಸೊಲ್ಲೆತ್ತಿದರೆ?ಅರುಂ...

ಇಷ್ಟಪಡೋದಾ?? ಇಷ್ಟವಾಗೋದಾ?

Image
ಒಂದು ವಾಸ್ತವ,ಇನ್ನೊಂದು ಕಲ್ಪನೆ ಒಂದು ತಾಮಸ,ಇನ್ನೊಂದು ಸಾತ್ವಿಕ ಒಂದು ಚಲ,ಇನ್ನೊಂದು ಛಾಯೆ ಒಂದು ಗುರಿಯಾದರೆ, ಇನ್ನೊಂದು ಗಟ್ಟಿ ಗುರುತು ಅದು ಜೀವ,ಇದು ಭಾವ ಒಂದು ಭ್ರಮೆ,ಇನ್ನೊಂದು ಬದುಕು ಒಂದು ಉಷೆ,ಇನ್ನೊಂದು ತುಷಾರ ಒಂದು ಚೆಲುವು,ಇನ್ನೊಂದು ಬಿಂಬ ಅದು ಹಠ,ಇದು ದಾನ ಒಂದು ಚಂಚಲ,ಇನ್ನೊಂದು ಅಚಲ ಒಂದು ಅರ್ಥವಾಗದ ಕಿರು ಕವಿತೆ,ಇನ್ನೊಂದು ಎಲ್ಲವ ಅರ್ಥವಾಗಿಸುವ ನೀಳ್ಗತೆ ಒಂದು ನಿನ್ನೆಯಲ್ಲಿ ನಾಳೆಯ ಕಂಡರೆ,ಇನ್ನೊಂದು ನಾಳೆಯಲ್ಲೂ ನಿನ್ನೆಯ ಕಾಣುವುದು!! ಆ ಮುಖ ಬೇಡಿದ್ದು ಮನ್ನಣೆ,ಈ ಮುಖ ಅರಿಯದು ಮಾನ್ಯತೆ!! ಎಲ್ಲವೂ ಬೇಕಿದ್ದೂ, ದಕ್ಕಿದ್ದೂ ದಕ್ಕದಾಯಿತೆ?? ಹೇಳಬೇಕೆಂದರೆ ಮನ್ನಣೆ ಸುಲಭದ ಎಟುಕು. ಇತ್ತ ಮಾನ್ಯತೆಗಾಗಿ ಕಾದು ವಸಂತಗಳು ಹಳೆಯ ಹಳದಿ ಪುಟ ಸೇರಿ ಕುಳಿತವು... ಹಣ್ಣಾದವು..ಒಳಿತು ಎನಿಸಲಾರದಷ್ಟು ಸಿಹಿಯಾದವು...ಮನ್ನಣೆ ಸಿಕ್ಕಿದ ಪೂರ್ವಾರ್ಧ ಉತ್ತರಾರ್ಧದ ಜಂಘಾಬಲವನ್ನೇ ಅಡಗಿಸಿತು ...ಪೂರ್ವಾರ್ಧ ಸೂರ್ಯನಡಿಯಲ್ಲಿ ಪ್ರಜ್ವಲಿಸಿ ಧಗೆ ಸೂಸಿದರೆ,ಉತ್ತರಾರ್ಧ ಕೃತ್ತಿಕೆಯ ಕತ್ತಲಲ್ಲಿ ಕಳೆದೇಹೋಯಿತು.. ಆದಿಯಿರದ ಕಥೆಗಳಿಲ್ಲ...ಆದರೆ ಅಂತ್ಯವಿಲ್ಲದ್ದು??ಅಗಣಿತ!! ಈ ಶೃಂಗಗಳು ಮನಸ್ಸಿನ ಮೂಖೆಯಲ್ಲಿ ಸ್ಥಾನಪಲ್ಲಟ ಬಯಸಿಯೇ ಇರುತ್ತವೆ..ಆದರೆ ಮಧ್ಯವರ್ತಿ ಆ ಸೂತ್ರಧಾರ ಬಹುಜಾಣ..ಸೂತ್ರ ಹರಿಯದಂತೆ,ತಾಳ ತಪ್ಪದಂತೆ ಮೇಳ ನೆಡೆಸುವನಂತೆ..ಆದರೆ ಸೂತ್ರ  ಗಟ್ಟಿಯಲ್ಲ..ಅಕಸ್ಮಾತ್ ಗಟ್ಟಿಯಿದ್ದಿದ್ದರೆ ಸೂತ್ರಧಾರನಿ...