Posts

Showing posts from November, 2021

ಮಾಯಾಜಿಂಕೆ-ಪ್ರೇಮ!

Image
1.ನಿನ್ನ ಹೃದಯದ ಸಾಲ ಪಡೆದಿರುವ ನನಗೆ  ಅದನ್ನು ಹಿಂದಿರುಗಿಸುವ ಶಕ್ತಿಯಿದ್ದಿದರೆ  ನನ್ನ ಭಾವನೆಗಳಿಂದು ಪ್ರಥಮ ಮಳೆಯ ನವಿಲಿನ ಹಾಗೇ ಗರಿಬಿಚ್ಚಿ ಕುಣಿಯುತ್ತಿರಲಿಲ್ಲ! 2.ನಿನ್ನ ಬಗೆಗಿನ ಭಾವನೆಗಳನ್ನು ಚುಕ್ಕಿ ರೂಪದಲ್ಲಿ ಇಟ್ಟಾಗಿದೆ! ಚುಕ್ಕಿ ಜೋಡಿಸಿ ಅದು ನೀನೆ ಎಂಬುದನ್ನು ನೀನು ತಿಳಿಯಬೇಕಾಗಿದೆ! 3. ಕಡೆಗೂ ಸೋಲಪ್ಪಿಕೊಂಡಿತು ಮನವು ನೀನೆಂದು ಸಿಗಲಾರೆಯೆಂಬ ಸತ್ಯವ! ಆದರೂ ಈ ಚಂಚಲ ಮನವು ನನ್ನ ಹಿಡಿತದಲ್ಲಿಲ್ಲ! ಹಿಡಿತ ದಲ್ಲಿದ್ದರೂ ಸೋಲಿಸುವವವನು ನೀನಿರುವೆಯಲ್ಲ! ಮನಸೋಲದೇ ದಿನದೂಡುವ ಸಂಧಿಗ್ನತೆ! 4. ಮನಸ್ಸಾಗಲು ಕಾರಣ ಬೇಕೆ? ಮನಸ್ಸಿಗೆ ಆ ಕಾರಣವಿನ್ನು ತಿಳಿಯದಿದ್ದಾಗ ನಿನ್ನ ಪ್ರಶ್ನಾರ್ಥಕ ಕಣ್ಣುಗಳಿಗೆ ನಾನು ಏನೆಂದು ಉತ್ತರಿಸಲಿ ! 5. ನೀನಾರೆಂದು ನಿನಗೆ ತಿಳಿಯದಷ್ಟು ನಿನ್ನನ್ನು ನಾನು ಅರಿತಿರುವೆ! ಹೇಳಲೊಂದು ಅವಕಾಶವ ನೀಡಿಬಿಡು! ಮೇರುಗಿರಿಯಂತೆ ಬಿಗಿದಪ್ಪಿ ಶಾಶ್ವತಳಾಗುವೆ! 6. ದೂರವೇ ಹತ್ತಿರವೆಂಬ ಆಸೆಗಳಿಗೆ ಮನಸೋತು ನಿನಗೆ ಹತ್ತಿರಳಾಗಿಹೆ ನಾನು! ನಿನ್ನ ಸನಿಹ ದಲ್ಲಿಯೇ ಹುಚ್ಚು ಮನಸ್ಸು ಸುಳಿ ಯುತ್ತಿದೆ! ಒಮ್ಮೆಯಾದರೂ ಮಾತನಾಡಿಸು! 7. ಕಣ್ಣೋ ಕೋಲ್ಮಿಂಚೋ ತಿಳಿಯದು! ನಿನ್ನ ಒಂದು ನೋಟಕ್ಕೆ ಜಲ್ ಎನ್ನುತ್ತಿತ್ತು ಮನವು! ಪದೇ ಪದೇ ಕಾತರಿಸುತಿತ್ತು ನಿನ್ನ ನೋಡಲು! ಆದರೋ ನಿನ್ನ ಕಣ್ಣು ನನ್ನ ದೂರುತಿತ್ತು! 8.ಕ್ಷಣಮಾತ್ರದಲ್ಲಿ ಬದಲಾಗುವ ನಿನ್ನ ಬಗೆಗಿನ ಯೋಚನೆಗಳು ಹೃದಯದಲ್ಲಿ ಸುನಾಮಿಯುಂಟು ...

ನೀನೆಂಬ ಭ್ರಮೆ!

Image
1.ಮಾಸದ ಗಾಯವೆಂದರೆ ನಿನ್ನೀ ಪ್ರೀತಿ! ಭಾವನೆಯೆಂಬ ಮದ್ದಿಲ್ಲದೇ ನೆನಪೆಂಬ ನಂಜಿನಿಂದ ಕೂಡಿದೆ! ಆದರೂ ಗಾಯವಿರಲಿ ಹಸಿಯೆಂದು ಬಯಸುವ ಹುಚ್ಚು ರೋಗಿ ನಾನು! 2.ಮನದಲ್ಲಿ ಮನೆಮಾಡಿರುವ ನಿನಗೆ ಹೋಗೆನ್ನಲು ಮನಸ  ಮಾಡದ ನಾನು! ನೀನಿಲ್ಲದ ಮೇಲೆ ಮನಸಲ್ಲಿಳುಯುವುದು ಕಾಗದದ ಹೂವಂತೆ ಕೇವಲ ತೋರಿಕೆ! 3.ಮೌನ ಮಾತಾಗಲಿ ಎಂದು ಹಂಬಲಿಸುವ ಮೂಕ ವಾಗ್ಮಿ ವಿಳಾಸವಿಲ್ಲದ ಅಂಚೆಗೆ ಬರಕಾಯುತಿದ್ದಳು! 4.ಮೌನದಡಿಗೆ ಅವಶೇಷವಾಗಿದ್ದ ಭಾವನೆಗಳನ್ನು ಹುಡುಕಿ ಹೊರತೆಗೆಯುವ ಯತ್ನ ಆತನನ್ನು ಸೇರುವುದಕ್ಕಿಂತಲೂ ಕಷ್ಟವೆಂದು ಹತಾಶ ಮನಕ್ಕಿಂದು ಅರಿವಾಯಿತಲ್ಲ! 5. ಆತನ ಬರುವಿಕೆ ಕಲ್ಲು ಹೃದಯದಲ್ಲಿ ಹೂವನ್ನರಳಿಸಿತು! ಹೂವು ಮುಡಿ ಸೇರುವ ಮುನ್ನವೇ ದಾರಿ ತಪ್ಪಿ ಮಣ್ಣು ಪಾಲಾಯಿತು! 6. ಪ್ರತಿ ಪ್ರೇಮಿಯು ಕವಿಯೇ ಅಥವಾ ಪ್ರತಿ ಕವಿಯೂ ವಿರಹಿಯೇ? ಹೇಳಲಾಗದ ಮಾತುಗಳಿಗೆ ಕವನದ ರೂಪ ಕೊಟ್ಟು ಹೇಳ ಬಯಸುವ ಪ್ರಯತ್ನ! 7. ಸುಮ್ಮನೆ ಕುಳಿತಾಗ ಸುಳಿದು ಮರೆಯಾಗುವ ಮಾಯಾಮೃಗ ನೀನು ! 8. ಪುನಹ ಪುನಹ ಓದಬಯಸುವ ಸುಂದರಕಾಂಡ ಆತ ! ಅರ್ಥ ಮಾಡಿಸಿಯೂ ಅರ್ಥವಾಗದ ಪ್ರೇಮದ ಲೇಖಕ! ಆಸಕ್ತಿ ಕೆರಳಿಸಿ ಆಸಕ್ತಿ ಕಳೆಯುವ ಹುಳುಕ! ಒಟ್ಟಿನಲ್ಲಿ ನನ್ನ ವಿರಹದುತ್ತರ ಆತ ! 9. ಚಂದ್ರನಂತೆ ಚಂದಗಾರ ನೀನು! ಆತನಂತೆ ನೀನು ಕೈಗೆಟುಕೆ.. ದೂರ.. ನೋಡಿದಷ್ಟು ದೂರ... ಯೋಚಿಸಿದಷ್ಟು ದೂರ .... 10. ನಿಜವಾಗಿಯೂ ನನಗಾಗಿದ್ದು ಪ್ರೀತಿಯೇ? ಅಥವಾ ವಯೋ ಸಹಜ ಆಕರ್ಷಣೆಯೇ ? ಇಲ್ಲವೆಂದರೆ ಒಂ...

ಅಪೂರ್ಣ ಕವಿತೆ

Image
1.ಬೆಂಕಿಯಲ್ಲಿರುವ ಹಸಿಕಟ್ಟಿಗೆಯಾಗಬೇಕೆಂತಿದ್ದೆ! ಆದರೆ ಹೃದಯವದು, ವಿರಹದುರಿಯ ಮುಂದೆ ಪ್ರೀತಿಯೆಂಬ  ತೇವಾಂಶವಿಲ್ಲದೇ ಉರಿದುಹೋಯ್ತು! ನನ್ನದಷ್ಟು ಒಣ ಒಲವೇ? 2. ಪ್ರೀತಿಯೋ ಹಠವೋ ನಾ ತಿಳಿಯೆ! ಆತನೊಬ್ಬ ಪ್ರಶಾಂತ ಸಾಗರ! ಆತನನ್ನು ಸೇರಲು ಕಾಯುತ್ತಿರುವ ಹತಾಶ ತೊರೆಯು ನಾನು! 3.ನೀನಿಲ್ಲವೆಂದು ತಿಳಿದಾಗ ಕ್ಷಣಮಾತ್ರದಲ್ಲಿ ಗಟ್ಟಿಯಾದ ಮನಸ್ಸು,ಕಾಲಾನಂತರದಲ್ಲಿ ತಿಳಿನೀರಿನಲ್ಲಿ ಕರಡಿದ ಮಣ್ಣಿನಂತಾಯಿತು! 4.ನಿನ್ನ ಸಂಕೋಚವೇ ಕಾಡುವುದು ವಿರಹಿಗೆ.. ಆ ಪೆದ್ದುಮುಖವೇ ರಾಚುವುದು ಕಂಗಳಿಗೆ! 5. ದಿನದಿನವೂ ಕಾಡುವ ಆತ ಅದೆಷ್ಟು ವಿಶೇಷನಾಗಿರಬಹುದು! ಬೇಕೆಂದರೂ ಮುಗಿಸಲಾಗದ ಅಧ್ಯಾಯದ ಲೇಖಕನವನು! 6.ನೀನೆಲ್ಲಿ ಮಾತನಾಡುವೆಯೆಂಬ ಪುಟ್ಟ ಆಸೆ! ಹಿಂದಿರುಗಿ ಮತ್ತೆಲ್ಲವ ಶುರುಮಾಡುವ ಕಾತರ! ಈ ಆಸೆಯೊಂದಿಗೆ ದಿನವೂ ಶಶಿಯ ಕಾಣುವ ಅವಳಿಗೆ ನಿರಾಸೆ ಕಾದಿದ್ದಂತು ಸಹಜವೇ ಸರಿ! 7. ನೀನೆಂದರೆ ತುಟಿಯಂಚಲಿ ಮಿಂಚಿ ಮರೆಯಾಗುವ ನಗುವಿಗೆ ನೀನು ಸಹ್ಯ,ನಿನ್ನದೆಲ್ಲವೂ ಸಹ್ಯ! ನನ್ನದಲ್ಲದ ನಿನ್ನದೂ ಸಹ್ಯ ಸಹ್ಯ! 8.ಹೇಳಲು ಭಯವಿಲ್ಲ!ಆದರೆ ಹೇಳಿದ ನಂತರ ಕಳೆದುಕೊಳ್ಳುವ ಭಯ! ನಿನ್ನನೂ ಜೊತೆಗೆ ನನ್ನನ್ನೂ ಕೂಡ! 9. ಮನಸ್ಸಿಗೂ ಒಂದು ಮನಸ್ಸಿರಬಹುದೆ? ಅದಕ್ಕೂ ಮನಸ್ಸಾಗಬಲ್ಲದೇ? ಮನಸ್ಸು ಮಾಡಿದರೂ ಮನಸ್ಸು ಒಪ್ಪುವುದಿಲ್ಲವಲ್ಲ ನಿನ್ನ ಮೇಲಿನ ಮನಸ್ಸ ಹಿಂಪಡೆಯಲು! 10. ಒಮ್ಮೆಯಾದರೂ ಇವೆಲ್ಲವ ನಿನಗೆ ಹೇಳುವಾಸೆ! ಮನಸ್ಸಿನ ಕೂಗು ಕೇಳುವಂತಿದ್ದರೆ ನ...

ಇನ್ನೂ ಇದೆ❤️

Image
1. ಮನಸ್ಸೆಂಬ ಮರುಭೂಮಿಯಲ್ಲಿ ನಿನ್ನ ಮೇಲಿನ ಒಲವಿನ ಕಳ್ಳಿಯ ಗಿಡಕ್ಕೆ ಆಸೆಯ ನೀರೆದರೆ ಪ್ರೀತಿಯೆಂಬ ಹೂವರಳೀತೆ? 2.ಪೂರ್ಣವಿರಾಮದ ನಂತರ ಕಥೆಯೊಂದು ಶುರುವಾದರೆ ತಾರ್ಕಿಕ ಅಂತ್ಯ ದೊರಕಬಹುದೇ? ಎಳನೇ ಜನ್ಮದ ಕೊನೆಯಲ್ಲೂ ವಿರಹಿ ಮನವು ಮತ್ತೆ ಪುನರ್ಜನ್ಮದಲ್ಲಿ ಆತನನ್ನು ಸೇರುವ ಕನಸ ಕಟ್ಟಿತಂತೆ! 3. ಬಾರದೂರಿನ ಅತಿಥಿಗೆ ದಾರಿ ಕಾಣುತ್ತಾ ಬಗೆಬಗೆಯ ಖಾದ್ಯವ ಮಾಡಿ ಬಾಗಿಲಲ್ಲಿ ಬರಮಾಡೋ ಭಿನ್ನಹವಂತೆ! 4. ಮನದಾಳದಲ್ಲಿರುವ ನೀನು ಕ್ಷಣ ಕ್ಷಣಕ್ಕೂ ಎಚ್ಚರಿಸುವೆಯಾದರೂ ಅದರಿಂದ ವಿಮುಕ್ತಳಾಗಳು ಕೈಗಳಿಗೇಕೆ ಮೋಹವೆಂಬ ಬೇಡಿ ತೊಡಿಸಿರುವೆ? 5. ಆಸೆಗಳಿಗೂ ತೆರಿಗೆಯಿದ್ದಿದರೆ ಬಹುಶಃ ಆಸೆಯೆಂಬ ಆಕಾಶವು ಕೆಲಸವಿಲ್ಲದೆ ಬೇಸರದ ಹೂದಿಕೆಯಲ್ಲಿ ಬೆಚ್ಚಗೆ ಮಲಗುತಿತ್ತೇನೋ? 6. ಉಧೋ ಎಂದು ಸುರಿವ ಮಳೆಯ ಮೈಚಳಿಯ ಕೊಡವಬಹುದೇನೋ! ಆದರೆ ಮನದಲ್ಲಿ ಆತನಿಲ್ಲದ ಮರಗೆಟ್ಟಿದ ಭಾವನೆ ಗಳು ಎಂದಿಗಾರೂ ಜೀವ ಪಡೆವುವವೇ? 7.ಕಥೆಯೊಂದಿಲ್ಲದೇ ಸನ್ನಿವೇಶಕ್ಕೆ ಮುನ್ನುಡಿ ಬರೆಯಬಲ್ಲ ಮಾಯಗಾರ! ಆದರೆ ನೆನಪೇ ಉಳಿಸದಂತೆ ಕಥೆಯ ಮಧ್ಯೆ ಮಾಯವಾಗೋದು ಎಷ್ಟು ಸರಿ? 8. ಸಿಗಲಾರದ ಚಂದ್ರನ ಬೆನ್ನೆಟ್ಟಿ ಬೆನ್ನಹಿಂದಿರುವ ನೆರಳನ್ನು ಮರೆಯಲಾದೀತೆ? 9.ಪ್ರೇಮವೆಂಬ ಪರದೆ ಮೈಸುತ್ತಿ ಕೊಂಡಿರುವಾಗ ಆತನ ಕರೆಯು ಕೂಡ ಆಲಾಪದಂತೆ ಭಾಸವಾಗುವ ಅಯೋಮಯ ತೊಳಲಾಟ!

ಉಂಚಗಿ

Image
ಅದು ಯಾರೋ ಅಂದ್ರಂತೆ... ಹಳ್ಳಿನಾ..Cost of Living ಕಮ್ಮಿ ಅಂತ ಅಲ್ಲೇ ಇದಾರೆ.. ಎಲ್ಲೋ ನಮ್ಮ ತರ Private school ಆಲ್ಲಿ ಕಲಿತಿರೋದು ಡೌಟು.(ಒಂದ್ವೇಳೆ  ಸರಕಾರಿ ಶಾಲೆನಾ. ಇಂಗ್ಲಿಷ್ Medium ಮಾಡ್ಲಿ,ಈ ತರ ಹಲುಬೋರೆ ತಮ್ಮ್ ಮಕ್ಕಳನ್ನ ಇವರ ವೇದಾಂತ ಬಿಟ್ಟು ಸರಕಾರಿ ಶಾಲೆಗೆ ಸೇರಿಸಿ ಬಿಡ್ತಾರೆ.. ಗೆದ್ದಿತ್ತನ ಬಾಲ ಹಿಡಿ ಯೋದು ದುಡ್ಡ ಉಳಿಸೋಕೆ) ಆದ್ರೂ Cost Of Living kinta Quality Of Living ಮುಖ್ಯ ಕಣ್ರೀ.. ಬರಿ ನೆಲದಲ್ಲಿ ಕುಣಿಯೋ ನವಿಲನ್ನ ಚಿನ್ನದ ನೆಲದ ಮೇಲೆ ಕುಣಿಸಿ ಮಜಾ ನೋಡೋ ತವಕ ಜನರಿಗೆ.ಆಸೆಗಳನ್ನು ನೆಲದಲ್ಲಿ ಹುಗಿದಿಟ್ಟು ತಿರ್ಪೇ ಶೋಕಿ ಅಥವಾ [Let me be humble] ತೋರಿಕೆ ಜೀವನವನ್ನ ಸುಳ್ಳುಗಳಿಂದ ಬೇಳೆಸ್ತಾ ಇದೀವಿ. ಯಾರಿಗೆ ತಾನೇ ಖಾಲಿ ಬಯಲಲ್ಲಿ ಕೂತ್ಕೊಂಡು ಸಂಜೆಗೆ ಮನೆಗ್ ಹೋಗೊ ದನ,ಪಕ್ಷಿಗೆ ಬೀಳ್ಕೊಟ್ಟು,ನಾಳೆ ಬನ್ನಿ ನನ್ನ ಮೌನದ ಸಂವಾದ ಕೇಳಿ ಅನ್ನೋಕೆ ಇಷ್ಟ ಇರಲ್ಲ? ಕಾಲು ಧೂಳ್ ಆದ್ರೂ ಸೈ,earphone alli ಒಳ್ಳೇ ಹಂಸಲೇಖ ಹಾಡ್ ಹಾಕಿಕೊಂಡು ೫:೩೦ ಗೆ ಬರುವ ಟ್ರೈನ್ ನೋಡೋಕೆ ಇಷ್ಟ ಆಗಲ್ಲ? ಬೆಲ್ಬೇಳಿಗ್ಗೆ ಎಲ್ಲರ್ ಮನೆ ಆಕಳ್ ಗಳ ಜೊತೆ walk ಮಾಡ್ತಾ,ಕೆಲವೊಬ್ರ ಮನೆ ದೋಸೆ ಬಂಡಿ ಸೌಂಡ್ ಚೋಂಯ್ ಅಂತ ಕೆಳೀಸೋದು ಸರ್ವೇ ಸಾಮಾನ್ಯ! ಮನೆ ಆಕಳು ಬತ್ತಿಸ್ಕೊಂಡಿದೆ ಅಂತ ಕೇಸರಿ ಮುಂಡುಟ್ಟು(I mean Lungi ya) ಹಳೇ ಗಿಂಡಿ ಚೊಂಬು ತಕೊಂಡು ವರ್ಕಣಶಿಯಲ್ಲಿ (ನಿದ್ರೆ ಮಂಪರಿನಲ್ಲಿ)...

ಆಕೆ ❤️

Image
ಗಂಟೆ ಐದಾದರೆ ಸಾಕು..ಮಧ್ಯಾನ್ಹದ ಚಹಾದ ನಾಲ್ಕೇ ಗುಟುಕನ್ನು ಅವಸರವಸವಾಗಿ ಹೀರಿ,ಹಬ್ಬಸಿಗೆ ಹೂವಿನ ಮಾಲೆಯನ್ನು ತುರುಬಿಗೆ ಸಿಕ್ಕಿಸಿ ಬಾರದೂರಿನ ಅತಿಥಿಯನ್ನು ಕಾಣಹೋಗುವ ಧಾವಂತದಲ್ಲಿದ್ದಳು! ಇದು ನಿನ್ನೆ ಇಂದಿನ ಮಾತಲ್ಲ!ಎಷ್ಟು ಹಳೆಯ ರೂಢಿ ಎಂದು ಲೆಕ್ಕವಿಟ್ಟರೆ ಮನಸ್ಸಿನ ಕಂಬನಿ ಕಾಣದು ಆತನಿಗೆ ಎಂದು ಲೆಕ್ಕವೇ ಇಟ್ಟಿಲ್ಲ ಆಕೆ! ಬಣ್ಣ ಮಾಸಿದ ಜಂಗು ಹಿಡಿದ ಗೇಟಿಗೆ ಕೈ ಕೊಟ್ಟು ಒಂದೇ ಬಗೆ ಕಾಯುತ್ತಿದ್ದ ಆಕೆಯನ್ನು ನೋಡಿ ಹಿರಿತಲೆಯೊಂದು ಹುಚ್ಚುಮನದ ಹುಡುಗಿಯೇ ಒಮ್ಮೆಯಾದರೂ,ನನ್ನ ಅನುಭವವನ್ನು ಕೇಳು!ಆತ ಬರನು! ನಿನ್ನ ಆಸರೆ ಕೇವಲ ನಿನ್ನ ನಿರಾಸೆಯೊಂದೇ ಎಂದು ಮನದಲ್ಲೇ ಮುಮ್ಮಲಮರಗಿ ಕಾನಿಂದ ಹಿಂಬರದ "ಗಂಗೆ'ಯ ಹುಡುಕಿ ಹೊರಟಿತು! ಕಡೆಗೂ ರೋಧನೆಯೋ/ಸಂಭ್ರಮವೋ ಎಂಬ ಸಂಕೇತ ದಂತಿದ್ದ ಹಳೆಯ ಮುರುಕು ಕೊನೇ ಬಸ್ಸು ಖಟರ್- ಪಟರ್ ಎಂದು ಬಂದಾಗ,ಆಕೆಯ ಕಣ್ಣುಗಳು ಕಂಡಿದ್ದು ಆತನೆಂಬ ಆತ ನಿಲ್ಲವೆಂಬ ದ್ವಂದ್ವವ ಮಾತ್ರ! ಅಸ್ಟ್ರಲ್ಲೇ "ರೈಟ್ ರೈಟ್" ಎಂದು ಬನ್ಸೂ ಕೂಡ ಹೊರಟು ಹೋಯ್ತು! "ಬಹುಶಃ ತಡವಾಯಿತು ಆತನಿಗೆ!ನಾಳೆ ಬಂದೇ ಬರ್ತಾನೆ! ಅಯ್ಯೋ ನನ್ನ ಕಥೆಯ ಮುಂದಿನ ಭಾಗ ಅಪೂರ್ಣ ವಾಗಿದೆ! ನಾಳೆಯೇ ತರಂಗಕ್ಕೆ ಕಳಿಸ್ಟೇಕು! ತಡವಾದರೆ ಎಡಿಟರ್ ಬೈತಾನೆ!"ಎಂದು ಹುಡುಗಿ ಮನೆದಾರಿ ಹಿಡಿಯುತ್ತಾಳೆ! ಆಕೆಗೆ ನಿಜವಾಗಿಯೂ ಪ್ರೇಮವೇ? ಅಥವಾ ಬರೆಯಬೇಕೆಂದು ತಾನೇ ಸೃಷ್ಟಿಸಿಕೊಂಡ ಕಾಲ್ಪನಿಕ ಜಗತ್ತೇ? ಯಾವವುದಾ...

ನನ್ನ ಮನದಾಳ❤️

Image
1.ಏನೆಂದು ಅರಿಯುವ ಮುನ್ನವೇ ಮುಗಿಯಿತೆಂದರೆ ಅದು ಪ್ರೇಮವೇ ಸರಿ! 2.ಮತ್ತದೇ ಕಥೆ! ಆಸೆಗಳಿಗೆ ತೆರಿಗೆಯಿದ್ದಿದರೆ ಬಹುಶಃ ಬದುಕಿನ ದಾರಿಯಲ್ಲಿ ಭಿಕಾರಿಯಾಗುತ್ತಿದ್ದೆ! ಆದರೇನು ಈಗಲೂ ಭಾವಲೋಕದ ಬೀದಿಯಲ್ಲಿ ನಿನ್ನ ಕಾಣಬಯಸುವ ಭಿಕಾರಿಯೆ! 3.ಆರಿತು ಉಂಟಾದರಷ್ಟೇ ಪ್ರೇಮವೇ? ಅರಿಯದೇ ಅರಿವಾಗುವ ಪ್ರೇಮಕ್ಕೆ ಮೋಹದ ನಾಮಕರಣ! 4.ಪ್ರೀತಿ ~ಇಬ್ಬರಿಗೂ ಗೊತ್ತಿದ್ದು ಗೊತ್ತಿರದ ಸತ್ಯ! 5..ನಾವಿಕನೊಬ್ಬ ನದಿಗೆ ಪ್ರಶ್ನಿಸಿದನಂತೆ.. ಒಂದೇ ಗುರಿಯನ್ನು ಮುಟ್ಟಲು ಹರಿಯುವ ನಿನ್ನ ಆ ದೃಢ ಮನಸ್ಸು ಕೇವಲ ಒಂದು ತೋರಿಕೆಯಾ ಎಂದು!           ಆಗ ನದಿಯು ನಾವಿಕನನ್ನು ದಿಟ್ಟಿಸಿ ನಕ್ಕು "ಏಕ್ ತರ್ಫಾ ಪ್ಯಾರ್ ಮಾಡಿ ದಿನ ದಿನವೂ ಕೊರಗುವ ದುನಿಯಾ ನನಗೆ ಕೇಳುವ ಪ್ರಶ್ನೆಯಲ್ಲ ಇದು" ಎಂದಾಗ ನಾವಿಕ ಮೂಕನಾದ! 6.ನಿನ್ನ ನೆನಪನ್ನು ಹೊತ್ತ ತನುವು ನಿನಗಾಗಿ ಕೂತು ಕಾಯುತ್ತಿದ್ದರೆ, ನಿನ್ನನ್ನು ಹುಡುಕುತ್ತಿದ್ದ ಹೃದಯವು ಜಿಂಕೆಯಂತೆ ಓಡುತಿತ್ತು! ಚಲನೆಯ ನಿಯಮಗಳೇ ತಪ್ಪೇ? ಅಥವಾ ನೀನೆಂಬುದೇ ಕಲ್ಪನೆಯೇ? 7.ಹೋಗಬಯಸಿದರೂ ಹೋಗಲಾಗದ ಹಳೆಯ ದಾರಿಗಳು ಬಹುಶಃ ನಿಶೆಯ ಪಾಷವೆಂದರೆ ಇದೇ ಇರಬೇಕು! 8.ಬರೆದಷ್ಟು ಬಯಸುವ ಮನ ಮರೆತಷ್ಟು ಮರುಕಳಿಸುವ ನೆನಪು ಕೂತಷ್ಟು ಕೈ ಬೀಸಿ ಕರೆಯುವ ಕನಸು ಕೇವಲ ಒಂದು ಮರೀಚಿಕೆಯಾಯಿತೆ? ಉತ್ತರವ ಅವನೂ ಬಲ್ಲ ಅವಳೂ ಬಲ್ಲಳು! 9.ನಾಚಿಕೆಯ ಮುಳ್ಳೇ ನಾಚದಿರು! ನಿನ್ನನ್ನೂ ಮೀರಿಸುವವರು ಇರುವರೆಂ...