ಬಹುಶಃ ಪ್ರೀತಿ ಇನ್ನೂ ಇದೆ/ಇಲ್ಲ!
1. ಪ್ರೀತಿಯ ನೀರ ಮೀಯದೆ ಬೆಲೆಕಳೆದುಕೊಂಡ ಜೀವವೊಂದರ ಗಿಡವ ಇನ್ನೂ ಕುಂಡದಲ್ಲೇ ಇಟ್ಟು ಸೋತಿರುವೆ! ಹುಡುಕುತ್ತಿರುವೆ ಇಂದಿಗೂ ಆ ಬದುಕ ಅಲ್ಲೇ ಎಲ್ಲೋ ಕಳೆದುಕೊಂಡಲ್ಲಿ, ಬಹುಶಃ ನಿನ್ನದೇ ಪ್ರಾಂತಗಳಲ್ಲಿ ! ಹರಸು ನಿನ್ನ ಅನುರಾಗದಿಂದ ಆ ಗಿಡವ, ಹೂವು ಬಿಡದೇ ಬಳಲಿ ಕಾದಿದೆ! ಆಧುನಿಕ ಪ್ರೇಮಕಾವ್ಯದ ಪುಟಗಳ ನಡುವೆ ಇನ್ನೂ ಅರಳದ ಆ ಹೂವಿನ ಪಕಳೆಗಳಿಗೆಂದು ತುಸು ಜಾಗವ ನೀಡು ! ಮುಂದೆದಾರೂ ಪಕಳೆ ತರುವ ನಿನ್ನ ನೆನಪು ಮಣ್ಣ ಸೇರುವ ಬದಲು ನನ್ನ ಮನವ ಸೇರಲಿ ! ಬಹುಶಃವೇ ಎಂಬ ನಿನ್ನಯ ಪ್ರೀತಿ ಹಾಗೂ ಅದು ತರುವ ನೋವು, ಹತಾಶೆ ನಿರಂತರ! 2. ನೆನಪಿಗೊಂದು ನೈವೇದ್ಯ ವಿಡಲು ತಡಕಾಡಿದಾಗ ಉಳಿದಿದ್ದು ಮಾಸಿದ ಮಾತುಗಳು ಮತ್ತು ಅಸ್ಪಷ್ಟ ವೇ ಎನ್ನಬಹುದಾದ ನಿನ್ನ ಚಹರೆ ! ಬೆರಳೇಕೋ ಕಂಪಿಸುತ್ತಿದೆ ಆ ನೆನಪುಗಳ ಬರೆದು ಎದೆಗಪ್ಪಲು! ಅಂದು ಶಬ್ಧಗಳ ಹಿಡಿತಕ್ಕೆ ಸಿಕ್ಕದೇ ಬಿರಿದಿದ್ದ ಪ್ರೇಮವು ಇಂದು ಬರಿದಾಗಿದೆ! ಅಂದು ಸದಾ ಪ್ರೀತಿಯಲ್ಲಿ ಮೆರೆದಿದ್ದ ಪ್ರೇಮಿಗೆ ಇಂದು ವಿರಹವ ಮರೆಸುವ ದಾರಿ ಕಾಣದಾಗಿದೆ! ಹೃದಯದ ಆಲಾಪವು ಕೇಳಿಸಿಯೂ ಅರ್ಥವಾಗದ ಸ್ಥಬ್ದ ನಿಲುವು ಈ ಪ್ರೇಮಿಗಾಗಿದೆ! ಗತದಲ್ಲಿ ನಕ್ಕು ನಲಿದಿದ್ದ ಪ್ರೀತಿ ಇಂದು ಸೋತು ಹತಾಶವಾಗಿ ಈ ವಿರಹಿಯ ನೋಡಿ ನಗುತ್ತಿದ್ದೆ! ಅಲ್ಲಿಗೆ ಪ್ರೀತಿಯೂ ಸೋತಿತ್ತು,ನಾನೂ ಸೋತಿದ್ದೆ! 3. ಬಾರದಿರೆನ್ನಲು ಬರದಿರಲು ನೆನಪು ಎಂಬುದು ಎಂದೂ ಪ್ರೀತಿಸದ ನೀನಲ್ಲ! ನನ್ನ ಇ...