ಅಪರಿಚಿತನು ನೀನು!
1. ಮೋಹದ ಬೀಜವ ಬಿತ್ತಿ ಪ್ರೀತಿ ನಿರಾಕಾರವಾಗಿ ಹುಟ್ಟಿದರೆ,ವ್ಯಾಮೋಹದ ನೀರೆರೆಯಲೇ ಬೇಕು! ಶರವೇಗದಲ್ಲಿ ಬೆಳೆದರೂ ಬೆಳೆಸಬೇಕು! ಬೇಸಿಗೆಯ ವರ್ಷದಂತೆ ಬಹುಬೇಗ ಸತ್ತರೂ ಸಾಯಿ ಸಬೇಕು! 2.ಉಸಿರೆಂಬ ಹಾರಿಹೋಗುವ ಪತಂಗವ ಹಿಡಿದಿಟ್ಟು ಕೊಳ್ಳಲು,ಸಿಗದ ಪ್ರೀತಿಯೆಂಬ ಬಾಡಿಗೆಯ ತೆತ್ತು ತಿರುವೆ! ಋಣವೊಂದು ಮನೆಯಂಗಳದ ಶಾಶ್ವತ ಅತಿಥಿಯಾಗಿ ಹಾಸು ಹೊಕ್ಕಾದ ಆಸೆಯ ಉನ್ಮಾದವೊಂದರ ಕೊರಳ ಬಿಗಿಯುತ್ತಿರುವಾಗ, ಲವಲವಿಕೆಯಿಂದು ಅಪರಚಿತವಾಗಿ ಮರೀಚಿಕೆಯಾಗಿದೆ! 3. ಕಡುಸ್ವಾರ್ಥಿ ನಾನು! ಏಕಾಂತವೆಲ್ಲ ನನ್ನದಿರಲೆಂದು ಬರಿದಾದ ಇರುಳಲಿ ಸಿಗದಿರೋ ಶಶಿಯ ಬೆನ್ನಟ್ಟಿ ಹೊರಟೆ! ಆದರೇಕೋ ಎಂದೂ ಕಾಣದ ಪ್ರಭೆಯ ದ್ವೇಷಿ ಸುತ್ತಿರುವೆ! ಏಕೆ ಹೀಗೆಂದು ಉತ್ತರ ಸಿಗದಿದ್ದರೂ ಮೌನ ಪ್ರಶ್ನೆಯೊಂದಕ್ಕೆ ಪೀಠಿಕೆ ಹಾಕಿರುವೆ!