ಮನದಲ್ಲಿ ಮನೆಮಾಡಿದ ಪಾತ್ರಗಳು!
ಕೆಲವೊಂದು ಕಲೆಗಳೇ ಹಾಗೆ.. ಬಯಸಿಯೂ, ಬಯಸದೆಯೂ ಶಾಶ್ವತವಾಗಿ ಉಳಿದು ಬಿಡುವವು!ಹಲವು ಬಾರಿ ಕಲೆಗಳಿಂದ ವಿಮುಕ್ತ ಲಾಗಳೆಂದು ಕಲೆ ತೊಲಗಿಸಲು ಹೋದಾಗ ಇರಲಿ ಬಿಡು ಎಂದು ಪಾಪ ಪ್ರಜ್ಞೆಯೆಂಬ ಗಾಯಕ್ಕೆ ನೆನಪೆಂಬ ಉಪ್ಪು ಸುರಿವ ಯತ್ನ! ಬೆಂಕಿಯಲ್ಲಿ ನಡೆದರೆ ಕಾಲು ಸುಡುವುದೆಂಬ ನಿಯಮದ ವಿರುದ್ಧ ನಾನು ತೆಗೆದುಕೊಳ್ಳುವ ಹುಚ್ಚು ಹೆಜ್ಜೆಗಳು! ಆದರೂ ಸುಡುವು ದಂತು ಖಚಿತ...ಕೆಲವೊಮ್ಮೆ ಪಾದ ಇನ್ನೂ ಕೆಲವೊಮ್ಮೆ ಮನಸ್ಸು..ಇವಕ್ಕೆಲ್ಲ ಸೂತ್ರ ಧಾರ ಮನದಲ್ಲಿ ಮನೆಮಾಡಿದ ಪಾತ್ರಗಳು..ಪಾತ್ರಧಾರಿ ದಾರಿತಪ್ಪಿದ ಮನಸ್ಸು.. ಕೆಲವೊಮ್ಮೆ ಈ ಪಾತ್ರಗಳು ಎಲ್ಲವೂ ಒಂದರಂತೆ ಕಾಣುವ ಬಹುಆಯ್ಕೆಯ ಪ್ರಶ್ನೆಯ ಉತ್ತರಗಳಂತೆ..ಆರಿಸುವುದು ಬಹು ಕಠಿಣ... ಮನೆಮಾಡಿದ ಎಲ್ಲ ಪಾತ್ರಗಳಿಗೂ ಅನ್ಯಾಯವಾಗದೆ ಸತ್ಕರಿಸುವ ಹುಚ್ಚು ಹೆಬ್ಬಯಕೆ! ಈ ಪಾತ್ರಗಳು ಬಂದು ನೆಲೆಸಲು ನಾವೇ ಆಸ್ಪದವಾದೆವಾ? ಅಥವಾ ಆ ಪಾತ್ರಗಳ ಸೃಷ್ಟಿ ಕರ್ತರು ನಾವುಗಳಾ? ಎಲ್ಲದಕ್ಕೂ ಉತ್ತರ ಎಂದಿಗೂ ಸಿಗದು.. ಕೆಲವೊಮ್ಮೆ ಈ ಪಾತ್ರಗಳ ನಡುವೆ ನಿರಂತರ ಕದನ ಮೇಲುಗೈ ಸಾಧಿಸಲು.. ತೀರ್ಮಾನಿಸಲಾಗದೆ ಕೈ ಕೊಳೆ ಕಟ್ಟಿ ಕುಳಿಸಿದಂತ ತೀ...